ಬೆಳ್ತಂಗಡಿ: ತೆಲಂಗಾಣ ದಲ್ಲಿ ಶಂಕಿತ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆ ಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಿಬಂದಿಗೆ ಮಾಸ್ಕ್ ಧರಿಸು ವಂತೆ ಸೂಚಿಸಿರುವ ಬೆನ್ನಲ್ಲೇ ರಾಜ್ಯದ 17 ವಿಭಾಗಳ 84 ಡಿಪೋಗಳ 86,000 ಬಸ್‌ಗಳ ಒಳಹೊರಗೆ ಸ್ವತ್ಛತೆಗೆ ಬುಧ ವಾರದಿಂದಲೇ ಕ್ರಮ ಕೈಗೊಂಡಿದೆ.
ಬಸ್‌ನ ಒಳಗೆ ಹಾಗೂ ಹೊರಗೆ ಡೆಟಾಲ್ ಸೇರಿದಂತೆ ವೈರಸ್ ತಡೆಗಟ್ಟುವ ಔಷಧ ಸಿಂಪಡಿಸಿ ಸಂಪೂರ್ಣ ಸ್ವತ್ಛಗೊಳಿಸುವಂತೆ ಆಯಾಯ ಡಿಪೋಗಳಿಗೆ ಸೂಚನೆ ನೀಡಿದೆ. ಬೆಂಗಳೂರು ಬಿಎಂಟಿಸಿ ಸಹಿತ ಮಂಗಳೂರು, ಚಿತ್ರದುರ್ಗ, ಚಾಮರಾಜನಗಾರ, ಹಾಸನ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.
ರಾಜ್ಯ ರಸ್ತೆ ಸಾರಿಗೆಯಲ್ಲಿ ಪ್ರತಿನಿತ್ಯ 35.7 ಲಕ್ಷ ಸಾರ್ವಜನಿಕರು ಪ್ರಯಾಣಿಸುತ್ತಿದ್ದು, ಆಸನಗಳು, ಬಾಗಿಲು, ಹ್ಯಾಂಡಲ್‌ಗಳಿಗೆ ಔಷಧ ಸಿಂಪಡಿಸಲಾಗಿದೆ. ಜತೆಗೆ ಕೆಮ್ಮುವಾಗ, ಸೀನುವಾಗ ಮಾಸ್ಕ್ ಧರಿಸಿಕೊಳ್ಳುವಂತೆಯೂ ಪ್ರಯಾಣಿಕ ರಿಗೆ ಸೂಚನೆ ನೀಡುತ್ತಿದೆ.
ಸಿಬಂದಿಗೆ ಜಾಗೃತಿ
ರಾಜ್ಯದ ಎಲ್ಲ ಡಿಪೋಗಳಲ್ಲಿ ಚಾಲಕ, ನಿರ್ವಾಹಕರು, ಸಿಬಂದಿಗೆ ಮೇಲಾಧಿಕಾರಿಗಳು ಹಾಗೂ ಸಂಪೂನ್ಮೂಲ ವ್ಯಕ್ತಿಗಳು, ವೈದ್ಯರಿಂದ ಕೊರೊನಾ ವೈರಸ್ ಸಂಬಂಧಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮಾಹಿತಿ ಒದಗಿಸಲಾಗುತ್ತಿದೆ.
ಪ್ರಯಾಣಿಕರ ಆರೋಗ್ಯ ಹಿತದೃಷ್ಟಿಯಿಂದ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ 17 ವಿಭಾಗಗಳಲ್ಲೂ ಸ್ವತ್ಛತಾ ಕ್ರಮ ಅನುಸರಿಸಿದೆ. ದೈನಂದಿನ ಸ್ವಚ್ಛತೆ ಜತೆಗೆ ವೈರಸ್ ಸೋಂಕು ಹರಡದಂತೆ ಬಸ್ ಆಸನ ಸಹಿತ ಒಳಭಾಗದಲ್ಲಿ ಡೆಟಾಲ್ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ.
– ಶಿವಯೋಗಿ ಸಿ. ಕಳಸದ, ಆಡಳಿತ ನಿರ್ದೇಶಕ, ಕೆಎಸ್‌ಆರ್‌ಟಿಸಿ