Advertisement

ಸೋಂಕಿತ ಸಂಚರಿಸಿದ ಕಡೆ ಔಷಧ ಸಿಂಪಡಣೆ

04:17 PM Apr 28, 2020 | Team Udayavani |

ತುಮಕೂರು: ನಗರದಲ್ಲಿ ಕೋವಿಡ್ ಸೋಂಕು ಇರುವುದು ದೃಢಪಡುತ್ತಿರುವಂತೆಯೇ ನಗರದಲ್ಲಿ ದಿನ ದಿಂದ ದಿನಕ್ಕೆ ಜನರಲ್ಲಿ ಆತಂಕ ಹೆಚ್ಚು ಮನೆ ಮಾಡಿದ್ದು ಸೋಂಕಿತ ಅಡ್ಡಾಡಿರುವ ಪ್ರದೇಶಗಳಲ್ಲಿ ಪಾಲಿಕೆ ವತಿಯಿಂದ ಸ್ವಚ್ಛತೆಯ ಜೊತೆಗೆ ಕೀಟ ನಾಶಕ ಸಿಂಪಡಣೆ ಕಾರ್ಯ ನಡೆಯುತ್ತಿದೆ. ಜನರು ಹೆದರುವ ಅಗತ್ಯವಿಲ್ಲ ಜಾಗೃತಿ ವಹಿಸಿ ಎಂದು ಜಿಲ್ಲಾಡಳಿತ ಅರಿವು ಮೂಡಿಸುತ್ತಿದೆ. ಕೋವಿಡ್ ವೈರಸ್‌ ಸೋಂಕಿತ ಗುಜರಾತ್‌ ಮೂಲದ ಪಿ-447 ವ್ಯಕ್ತಿ ಧರ್ಮಪ್ರಚಾರಕರಾಗಿ ಧರ್ಮಪ್ರಚಾರ ಮಾಡಲು ಗುಜರಾತ್‌ನ ಸೂರತ್‌ ನಿಂದ ಗಾಂಧಿಧಾಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣ ಬೆಳಸಿ ತುಮಕೂರಿಗೆ ಬಂದ್ದರು. ಅವರು ಮೊದಲು ನಗರದ ಮಂಡಿಪೇಟೆ ಮಸೀದಿಯಲ್ಲಿ ತಂಗಿ ಅಲ್ಲಿಂದ ಪಿ.ಎಚ್‌.ಕಾಲೋನಿ ಮತ್ತು ರಹಮತ್‌ ನಗರದ ಖೂಬಾ ಮಸೀದಿಯಲ್ಲಿ ಹಾಗೂ ಮರಳೂರು ದಿಣ್ಣೆ ಮಸೀದಿಯಲ್ಲಿ ತಂಗಿದ್ದರು. ಇವರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಆಟೋದಲ್ಲಿ ಪ್ರಯಾಣ ಬೆಳಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಂಗಿದ್ದ ಪ್ರದೇಶ ಗಳಲ್ಲಿ ಯಾರ ಯಾರ ಸಂಪರ್ಕ ಹೊಂದಿದ್ದರು ಎನ್ನುವುದನ್ನು ತಪಾಸಣಾ ಕಾರ್ಯನಡೆಯುತ್ತಿದೆ, ಜೊತೆಗೆ ಅಲ್ಲಿಯ ಪ್ರದೇಶದ ಸ್ವಚ್ಛತಾ ಕಾರ್ಯ ಮತ್ತು ಕೀಟ ನಾಶಕ ಸಿಂಪಡಣಾ
ಕಾರ್ಯವೂ ನಡೆಯುತ್ತಿದೆ.

Advertisement

ನಗರದಲ್ಲಿ ಸೋಂಕು ಪತ್ತೆ ಯಾಗಿರುವ ಹಿನ್ನೆಲೆಯಲ್ಲಿ ಜನರಲ್ಲಿ ಆತಂಕ ಹೆಚ್ಚಿದೆ ವಿಶ್ವದಲ್ಲಿ ಹರಡುತ್ತಿರುವ ಕೋವಿಡ್  ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಹಲವಾರು ಷರತ್ತುಗಳನ್ನು ಒಳಪಡಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ತಿಳಿಸಲಾಗಿದ್ದರೂ ನಗರದಲ್ಲಿ ಸಾಮಾಜಿಕ ಅಂತರವನ್ನು ಯಾರೂ ಕಾಯ್ದುಕೊಳ್ಳುತ್ತಿಲ್ಲ ಮಾರುಕಟ್ಟೆ ಸೇರಿದಂತೆ ಎಲ್ಲಾ ಕಡೆ ಜನ ಗುಂಪು ಗುಂಪು ಸೇರುವುದು ವಾಹನಗಳಲ್ಲಿ ಓಡಾಡುವುದು ಸಾಮಾನ್ಯವಾಗಿದೆ.

ನಗರದ 10 ಮಸೀದಿಗಳಲ್ಲಿ ಬೇರೆ ಜಿಲ್ಲೆ, ರಾಜ್ಯ ಮತ್ತು ವಿದೇಶದಿಂದ ಜಮಾತ್‌ ಸದಸ್ಯರು ತಂಗಿದ್ದಾರೆ ಎನ್ನುವ ಮಾಹಿತಿ ವ್ಯಕ್ತವಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ರುವ ಮಸೀದಿಗಳನ್ನು ಹೊರತುಪಡಿಸಿ ಇನ್ನಿತರೆ ಮಸೀದಿಗಳಲ್ಲಿ ಜಮಾತ್‌ ಸದಸ್ಯರು ತಂಗಿದ್ದಲ್ಲಿ ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ವಕ್ಫ್ ಅಧಿಕಾರಿ ಮಸೀದಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ “ಸುಬಾಹು’ ಕಣ್ಗಾವಲು
ತುಮಕೂರು: ತುಮಕೂರು ಜಿಲ್ಲಾ ಪೊಲೀಸ್‌ ವತಿಯಿಂದ ಅನವಶ್ಯಕವಾಗಿ ಓಡಾಡುವ ವಾಹನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಬಾಹು ಎನ್ನುವ ಹೊಸ ಅಪ್ಲಿಕೇಶನ್‌
ಅನ್ನು ಅಳವಡಿಸಿಕೊಂಡಿದ್ದು, ಇದರಲ್ಲಿ ಪ್ರತಿಯೊಂದು ವಾಹನಗಳ ವಿವರ, ಛಾಯಾ ಚಿತ್ರಗಳನ್ನು ಹಾಗೂ ವಾಹನ ಪ್ರಯಾಣಿಕರು, ಚಾಲಕರು ಸಂಚರಿಸಿರಬಹುದಾದ ಸ್ಥಳ
ಹಾಗೂ ಉದ್ದೇಶಗಳನ್ನು ನಮೂದಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೋನವಂಸಿಕೃಷ್ಣ ಹೇಳೀದರು.

ತುಮಕೂರು ಜಿಲ್ಲೆಯಲ್ಲಿ ಕೋವಿಡ್‌ -19 ಹಿನ್ನೆಲೆಯಲ್ಲಿ ತೆರೆದಿರುವ ಎಲ್ಲಾ ಚೆಕ್‌ ಪೋಸ್ಟ್‌ಗಳಲ್ಲಿ ವಾಹನಗಳು ಸಂಚರಿಸುವ ಬಗ್ಗೆ ಸುಬಾಹು ಆ್ಯಪ್‌ ಅನ್ನು ಅಳವಡಿಸಲಾಗಿದೆ. ತುಮಕೂರಿನ ಎಲ್ಲಾ ಟ್ರ್ಯಾಕ್‌ ಪಾಯಿಂಟ್‌ಗಳಲ್ಲಿ ಇದನ್ನು ಬಳಸಬಹು ದಾಗಿದೆ. ಪೊಲೀಸ್‌ ಸಿಬ್ಬಂದಿಯು ಈ ಆ್ಯಪ್‌ ಮೂಲಕ ವಾಹನಗಳ ಸಂಖ್ಯೆಯನ್ನು ಸ್ಕ್ಯಾನ್‌ ಮಾಡಿ, ಯಾವ ಕಾರಣಕ್ಕೆ ಸಂಚರಿಸುತ್ತಿದ್ದಾರೆ ಎಂಬುದು ಅಪ್‌ಲೋಡ್‌ ಮಾಡಲಾಗುವುದು. ಈ ವಿವರಗಳನ್ನು ಜಿಲ್ಲೆಯ ಎಲ್ಲಾ ಚೆಕ್‌ ಪಾಯಿಂಟ್‌ಗಳಲ್ಲಿ ಎಲ್ಲಿ ಬೇಕಾದರೂ ಪರಿಶೀಲನೆ ಮಾಡಬಹುದು. ದಿನದಲ್ಲಿ ಎಷ್ಟು ವಾಹನಗಳು ಯಾವ ಕಾರಣಕ್ಕೆ ಸಂಚರಿಸಿವೆ ಎಂಬುದು ತಿಳಿಯುತ್ತದೆ. ಇದರಿಂದ ಅನವಶ್ಯಕವಾಗಿ ಓಡಾಡುವ ವಾಹನ ಪ್ರಯಾಣಿಕರು ಹಾಗೂ ಚಾಲಕ ರನ್ನು ಸುಲಭವಾಗಿ ಪತ್ತೆ ಮಾಡಬಹುದು. ಯಾವುದಾದರೂ ವಾಹನಗಳು ವಿನಾ ಕಾರಣ ಅನಾವಶವ್ಯಕವಾಗಿ ಓಡಾಡುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next