Advertisement

Drug sales: ಮಾದಕ ವಸ್ತು ಮಾರಾಟ: ರಾಜಸ್ಥಾನ ಮೂಲದ ಇಬ್ಬರ ಸೆರೆ

11:22 AM Aug 16, 2023 | Team Udayavani |

ಬೆಂಗಳೂರು: ರಾಜಸ್ಥಾನದಿಂದ ಮಾದಕ ವಸ್ತು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

Advertisement

ರಾಜಸ್ಥಾನ ಮೂಲದ ಚೌಧರಿ (28) ಮತ್ತು ಓಂಸಿಂಗ್‌(30) ಬಂಧಿತರು. ಲಕ್ಷಾಂತರ ರೂ. ಮೌಲ್ಯದ 270 ಗ್ರಾಂ ತೂಕದ ಅಫೀಮು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳ ಪೈಕಿ ಚೌಧರಿ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಪ್ರೇಮ್‌ನಗರದ ಅಂಡರ್‌ಪಾಸ್‌ ಬಳಿ ಅಫೀಮು ಮಾರಾಟಕ್ಕೆ ಯತ್ನಿಸಿದ್ದ. ಈ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿತ್ತು. ಈತನಿಂದ 150 ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿತ್ತು. ಬಳಿಕ ಈತನ ಮಾಹಿತಿ ಆಧರಿಸಿ ಓಂಸಿಂಗ್‌ನನ್ನು ಬಂಧಿಸಿ, ಆತನಿಂದ 120 ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next