Advertisement
ಆರೋಪಿಗಳು ಡಾರ್ಕ್‌ವೆಬ್ ಅಂತರ್ಜಾಲ ತಾಣದ ಮೂಲಕ ಬಿಟ್ ಕಾಯಿನ್‌ನಲ್ಲಿ ಈ ಡ್ರಗ್ಸ್ ಖರೀದಿಸುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ. ಇದರಲ್ಲಿ ಓರ್ವ ವಿದ್ಯಾರ್ಥಿನಿಯೂ ಇದ್ದಾರೆ. ಜಿಲ್ಲೆಯಲ್ಲಿ ಇಷ್ಟೊಂದು ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊ ಳ್ಳುತ್ತಿರುವುದು ಇದೇ ಮೊದಲು ಎಂದರು.
ಮೂರು ಪ್ರಕರಣಗಳ ನಾಲ್ವರು ಬಂಧಿತ ರಿಂದ 30.57 ಲ.ರೂ. ಮೌಲ್ಯದ ನಿಷೇಧಿತ ಎಂಡಿಎಂಎ ಎಕ್ಸೆ$rಸಿ 540 ಗ್ರಾಂ ತೂಕದ 1019 ಮಾತ್ರೆಗಳು, 30 ಲ.ರೂ. ಮೌಲ್ಯದ 1,000 ಎಲ್‌ಎಸ್‌ಡಿ ಸ್ಟಾ Âಂಪ್ಸ್, 3ಲ.ರೂ. ಮೌಲ್ಯದ 30 ಗ್ರಾಂ ತೂಕದ ಬ್ರೌನ್ ಶುಗರ್, 9.82 ಲ.ರೂ. ಮೌಲ್ಯದ 131 ಗ್ರಾಂ ತೂಕವುಳ್ಳ ಸುಪೀರಿಯರ್ ಕ್ವಾಲಿಟಿ ಹೈಡ್ರೋ ವೀಡ್ ಗಾಂಜಾವನ್ನು ನಾಲ್ವರಿಂದ ವಶಪಡಿಸಿಕೊಳ್ಳಲಾಗಿದೆ ಎಂದರು. 242 ಪ್ರಕರಣ ದಾಖಲು
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ 31 ಪ್ರಕರಣ ಗಳಲ್ಲಿ 61 ಮಂದಿಯನ್ನು ಬಂಧಿಸಿ, 93.46 ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸೇವನೆ ಸಂಬಂಧ 211 ಪ್ರಕರಣಗಳಲ್ಲಿ 234 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 242 ಪ್ರಕರಣಗಳಲ್ಲಿ 294 ಮಂದಿಯನ್ನು ಬಂಧಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ದಾಖಲಿಸಿದ ಅತೀ ಹೆಚ್ಚು ಪ್ರಕರಣಗಳಾಗಿವೆ. ಜಿಲ್ಲಾ ಪೊಲೀಸರ ಈ ಕಾರ್ಯವನ್ನು ಕರ್ನಾಟಕ ರಾಜ್ಯದ ಡಿಜಿ ಮತ್ತು ಐಜಿಪಿ ಹಾಗೂ ಪಶ್ಚಿಮ ವಲಯದ ಐಜಿಪಿಯವರು ಶ್ಲಾ ಸಿದ್ದಾರೆ ಎಂದು ಎಸ್ಪಿ ತಿಳಿಸಿದರು.
Related Articles
ಡ್ರಗ್ಸ್ ವಿರುದ್ಧ ಕಾರ್ಯಾಚರಣೆಗೆ 3 ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಗೆ ಮಾದಕ ವಸ್ತುಗಳು ಸಮುದ್ರ, ವಿಮಾನ ಅಥವಾ ರಸ್ತೆ ಮೂಲಕ ಬರುತ್ತಿದೆಯೇ ಎಂಬ ಕುರಿತು ತಿನಿಖೆ ಮುಂದುವರಿಯುತ್ತಿದೆ. ಈಗಾಗಲೇ ಪಬ್ಸ್, ಹೊಟೇಲ್‌ಗಳಲ್ಲಿ ನಡೆಯುವ ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆ ಕಂಡುಬಂದರೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಲಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
Advertisement