Advertisement

Type-1 Diabetes ಮದ್ದು ಸಿದ್ಧ: ಚೀನ

01:41 AM Oct 01, 2024 | Team Udayavani |

ಬೀಜಿಂಗ್‌: ಟೈಪ್‌-1 ಮಾದರಿಯ ಮಧುಮೇಹವನ್ನು ಸಂಪೂರ್ಣವಾಗಿ ಗುಣ ಮಾಡಿರುವುದಾಗಿ ಚೀನದ ವಿಜ್ಞಾನಿಗಳು ಘೋಷಣೆ ಮಾಡಿದ್ದಾರೆ.

Advertisement

25 ವರ್ಷದ ಮಹಿಳೆಯೊಬ್ಬರಿಗೆ ಜೀವಕೋಶ ಕಸಿ ಮಾಡುವ ಮೂಲಕ ಮಧುಮೇಹವನ್ನು ಸಂಪೂರ್ಣವಾಗಿ ಗುಣ ಮಾಡಲಾಗಿದೆ. ಸೂಕ್ಷ್ಮ ಶಸ್ತ್ರಚಿಕಿತ್ಸೆಯ ಬಳಿಕ ಅವರ ರಕ್ತದಲ್ಲಿ ತಾನಾಗಿಯೇ ಸಕ್ಕರೆಯ ಅಂಶ ನಿಯಂತ್ರಣಕ್ಕೆ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳಿರು ವುದಾಗಿ ಮಾಧ್ಯಮ ವರದಿ ಮಾಡಿದೆ.

ಮಧುಮೇಹ ಸಂಪೂರ್ಣವಾಗಿ ಗುಣಮುಖವಾಗಿರುವ ಪ್ರಕರಣ ವಿಶ್ವದಲ್ಲೇ ಮೊದಲಾಗಿದ್ದು, ಈ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿಗಳ ಮೇದೋಜೀರಕ ಗ್ರಂಥಿ (ಪ್ಯಾಂಕ್ರಿಯಾಸ್‌)ಗಳಲ್ಲಿ ರೋಗಕ್ಕೆ ತುತ್ತಾಗಿರುವ ಜೀವಕೋಶಗ ಳನ್ನು ತೆಗೆದು ಹೊಸ ಜೀವಕೋಶಗಳನ್ನು ಕಸಿ ಮಾಡಲಾಗುತ್ತದೆ. ಹೊಸದಾಗಿ ಅಳವಡಿಸಿದ ಜೀವಕೋಶಗಳು ಇನ್ಸುಲಿನ್‌ ಮತ್ತು ಗ್ಲೂಕೋಗಾನ್‌ಗಳನ್ನು ಉತ್ಪತ್ತಿ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಅಂಶ ನಿಯಂತ್ರಣಕ್ಕೆ ಬರುತ್ತದೆ. ಈ ಶಸ್ತ್ರಚಿಕಿತ್ಸೆ ನಡೆಸಲು ಸುಮಾರು ಒಂದೂವರೆ ಗಂಟೆ ಹಿಡಿಯಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next