Advertisement

ಮನುಷ್ಯನ ಆಯುಷ್ಯ ವೃದ್ಧಿಗೆ ನಡೆದಿದೆ ಔಷಧ ಸಂಶೋಧನೆ?

05:17 PM Jul 13, 2020 | sudhir |

ನ್ಯೂಯಾರ್ಕ್‌: 100 ವರ್ಷ ಬದುಕುತ್ತಿದ್ದ ಮಾನವನ ಜೀವಿತಾವಧಿ ವರ್ಷದಿಂದ ವರ್ಷಕ್ಕೆ ಕುಸಿಯತ್ತಲೇ ಇದೆ. ಈ ನಡುವೆ ಅಮೆರಿಕ ವಿಜ್ಞಾನಿಗಳು ಮನುಷ್ಯನ ಆಯುಷ್ಯ ಹೆಚ್ಚಿಸುವ ಔಷಧ ಸಂಶೋಧನೆಗೆ ಕೈಹಾಕಿದ್ದಾರೆ.

Advertisement

ಸಾಮಾನ್ಯವಾಗಿ ಆರಂಭಿಕ ಗರ್ಭಪಾತಕ್ಕೆ, ಕ್ಯಾನ್ಸರ್‌ ಕಾಯಿಲೆಗೆ ಮೈಫ್ಪ್ರಿಸ್ಟೋನ್‌ (ಆರ್‌ಯು 486) ಔಷಧ ಬಳಸುತ್ತಾರೆ. ಇದೇ ಈಗ ಆಯುಷ್ಯ ಹೆಚ್ಚಿ ಸುವ ದಿವೌಷಧ!

ಹೇಗೆ ಸಾಧ್ಯ?: ಡ್ರಾಸೊಫಿಲಾ ಎಂಬ ಹೆಣ್ಣು ನೊಣದ ಮೇಲೆ ಮೈಫ್ಪ್ರಿಸ್ಟೋನ್‌ ಔಷಧವನ್ನು ಕ್ಯಾಲಿಫೋರ್ನಿಯಾದ ಯು ಎಸ್‌ಸಿ ಡಾರ್ನ್ಸೈಫ್ ಕಾಲೇಜ್‌ ಆಫ್ ಲೆಟರ್ಸ್‌ನ ಸಂಶೋಧಕರು ಪ್ರಯೋಗಿಸಿದ್ದರು. ಇದರಿಂದಾಗಿ ನೊಣದ ಆಯುಷ್ಯ ಹೆಚ್ಚಿರುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ.

ಗಂಡು ಮತ್ತು ಹೆಣ್ಣು ನೊಣ ಲೈಂಗಿಕ ಕ್ರಿಯೆ ನಡೆಸಿದಾಗ ಹೆಣ್ಣುನೊಣಕ್ಕೆ ಅಮೈನೊ ಆಮ್ಲದ ಅಂಶವುಳ್ಳ ಪೆಪ್ಟೆ„ಡ್‌ಗಳು ದಾಟಿಕೊಳ್ಳುತ್ತವೆ. ಹೀಗಾದಾಗ ಹೆಣ್ಣು ನೊಣದಲ್ಲಿ ಆರೋಗ್ಯದ ಮಟ್ಟ ಕುಸಿಯುತ್ತಾ ಹೋಗುತ್ತದೆ. ಜೀವಿತಾವಧಿಯೂ ಕಡಿಮೆಯಾಗುತ್ತದೆ. ಆದರೆ ಸಂಭೋಗದ ಅನಂತರ ಹೆಣ್ಣುನೊಣಕ್ಕೆ ಮೈಫ್ಪ್ರಿಸ್ಟೋನ್‌ ನೀಡಿದಾಗ ಅದರ ಜೀವಿತಾವಧಿ ಹೆಚ್ಚಿರುವುದು ಪತ್ತೆಯಾಗಿದೆ.

ಹೆಣ್ಣಿನೊಳಗಿನ ಸಂತಾನೋತ್ಪತ್ತಿ ಗುಣವನ್ನು ಕಡಿಮೆಮಾಡುವ ಮೈಫ್ಪ್ರಿಸ್ಟೋನ್‌, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಈ ಅಂಶ ಆಧರಿಸಿ ಮನುಷ್ಯರ ಮೇಲೆ ಮೈಫ್ಪ್ರಿಸ್ಟೋನ್‌ ಪ್ರಯೋಗಿಸುವ ಮೂಲಕ ಆಯುಷ್ಯ ಹೆಚ್ಚಿಸುವ ಸಾಹಸ ಸಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next