Advertisement

Drug dealing: ವಿದೇಶಿ ಪ್ರಜೆ ಸೆರೆ

10:19 AM Apr 17, 2024 | Team Udayavani |

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಪಶ್ಚಿಮ ಆಫ್ರಿಕಾ ಮೂಲದ ಅಮಾಡೊ ಸಿಡ್ಬಿ ಬೌಬಾಕರ್‌(27) ಬಂಧಿತ ವಿದೇಶಿ ಪ್ರಜೆ.

ಆರೋಪಿಯಿಂದ 1.75 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ ಕೋಕೇನ್‌, 1 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿ 2016 ರಲ್ಲಿ ವಿದೇಶಿ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಇದರೊಂದಿಗೆ ನಗರದಲ್ಲಿರುವ ಇತರೆ ಪೆಡ್ಲರ್‌ಗಳಿಂದ ಕೋಕೇನ್‌ ತರಿಸಿಕೊಂಡು ನಿರ್ದಿಷ್ಟ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಕತ್ರಿ ಗುಪ್ಪೆಯ ಆಟದ ಮೈದಾನದಲ್ಲಿ ಕೆಲ ಯುವಕರಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next