Advertisement

ಡ್ರಗ್‌ ಕೇಸ್‌: 70 ಸಾವಿರ ಪುಟಗಳ ಆರೋಪ ಪಟ್ಟಿ

02:51 AM Mar 06, 2021 | Team Udayavani |

ಮುಂಬಯಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿಗೆ ಸಂಬಂಧಿಸಿದ ಡ್ರಗ್‌ ಪ್ರಕರಣದಲ್ಲಿ ರಿಯಾ ಚಕ್ರವರ್ತಿ, ಸೋದರ ಶೋವಿಕ್‌ ಸೇರಿ ಇತರರನ್ನು ಆರೋಪಿಗಳೆಂದು ಉಲ್ಲೇಖೀಸಿ, ಎನ್‌ಸಿಬಿ ಶುಕ್ರವಾರ 70 ಸಾವಿರ ಪುಟಗಳ (50 ಸಾವಿರ ಪುಟಗಳು ಡಿಜಿಟಲ್‌ ರೂಪದಲ್ಲಿದೆ) ಆರೋಪಪಟ್ಟಿಯನ್ನು ಸಲ್ಲಿಸಿದೆ.

Advertisement

ಸುಮಾರು 6 ತಿಂಗಳ ತನಿಖೆಯ ಬಳಿಕ ವಿಶೇಷ ಕೋರ್ಟ್ಗೆ ಈ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದ್ದು, ಇದರಲ್ಲಿ ಬಾಲಿವುಡ್‌ನ‌ ಇತರ ತಾರೆಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್‌, ಸಾರಾ ಅಲಿಖಾನ್‌ ಸೇರಿದಂತೆ 200 ಮಂದಿಯ ಹೇಳಿಕೆಗಳನ್ನೂ ಉಲ್ಲೇಖೀಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಅನೂಜ್‌ ಕೇಶ್ವಾನಿ ಮತ್ತು ಅಜಂಜುಮ್ಮನ್‌ ಎಂಬವರನ್ನು ಪ್ರಮುಖ ಆರೋಪಿಗಳೆಂದು ಪರಿಗಣಿಸಲಾಗಿದೆ. ರಿಯಾ ವಿರುದ್ಧ ಡ್ರಗ್ಸ್‌ ಖರೀದಿ ಮತ್ತು ಹಣಕಾಸು ಪೂರೈಕೆಯ ಆರೋಪ ಹೊರಿಸಲಾಗಿದೆ. ಅವರ ತಮ್ಮ ಶೋವಿಕ್‌ ವಿರುದ್ಧ ವಾಟ್ಸ್‌ ಆ್ಯಪ್‌ ಚಾಟ್‌ಗಳು, ಧ್ವನಿ ಮಾದರಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು, ಡಿಲೀಟ್‌ ಮಾಡಲಾದ ಸಂದೇಶಗಳು ಮತ್ತಿತರ ಸಾಕ್ಷ್ಯಗಳನ್ನು ಎನ್‌ಸಿಬಿ ಒದಗಿಸಿದೆ.

ಅಮಲು ಪದಾರ್ಥಗಳ ಖರೀದಿ, ಪೂರೈಕೆ ಮಾತ್ರವಲ್ಲದೇ ಕೆಲವು ಆರೋಪಿಗಳ ವಿರುದ್ಧ ಡ್ರಗ್ಸ್‌ ಕಳ್ಳಸಾಗಣೆಗೆ ಹಣಕಾಸು ಪೂರೈಸಿದ ಆರೋಪಗಳನ್ನೂ ಹೊರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next