Advertisement

ರಣಜಿ ಕ್ರಿಕೆಟ್‌ನಲ್ಲೂ ಡಿಆರ್‌ಎಸ್‌ ನಿಯಮ

11:55 PM Jul 19, 2019 | Sriram |

ಮುಂಬಯಿ: ಅಂಪಾಯರ್‌ ತೀರ್ಪನ್ನು ಮರು ಪರಿಶೀಲಿಸುವ ಡಿಆರ್‌ಎಸ್‌ ನಿಯಮಯನ್ನು ರಣಜಿ ಕ್ರಿಕೆಟ್‌ನಲ್ಲೂ ಅಳವಡಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ.

Advertisement

ಕಳೆದ ರಣಜಿ ಆವೃತ್ತಿಯಲ್ಲಿ ಹಲವಾರು ತಪ್ಪು ತೀರ್ಪುಗಳನ್ನು ನೀಡಿದ ಕಾರಣ, ಅಂಪಾಯರ್‌ಗಳ ವಿರುದ್ಧ ಆಟಗಾರರು ಆಕ್ರೋಶಗೊಂಡಿದ್ದರು. ಇದನ್ನು ಬಗೆಹರಿಸಲು ಸೀಮಿತ ಡಿಆರ್‌ಎಸ್‌ ನಿಯಮವನ್ನು ಬಿಸಿಸಿಐ ಬಳಸಿಕೊಳ್ಳಲಿದೆ. ಆದರೆ ಡಿಆರ್‌ಎಸ್‌ನ ಪ್ರಮುಖ ಅಂಗಗಳಾಗಿರುವ ಹಾಕ್‌ ಐ ಮತ್ತು ಅಲ್ಟ್ರಾ ಎಜ್‌ಗಳು ಇಲ್ಲಿರುವುದಿಲ್ಲ. ಬದಲಿಗೆ ರಣಜಿ ಪಂದ್ಯಕ್ಕೆ ಅಗತ್ಯವಿರುವಷ್ಟು ಮಾತ್ರ ಡಿಆರ್‌ಎಸ್‌ ತಂತ್ರಜ್ಞಾನ ಬಳಕೆಯಾಗಲಿದೆ.

ಕಳೆದ ಕರ್ನಾಟಕ-ಸೌರಾಷ್ಟ್ರ ನಡುವಿನ ರಣಜಿ ಸೆಮಿಫೈನಲ್‌ ಪಂದ್ಯ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸೌರಾಷ್ಟ್ರದ ಚೇತೇಶ್ವರ ಪೂಜಾರ ಅವರಿಗೆ 2 ಬಾರಿ ಅಂಪಾಯರ್‌ ನಾಟೌಟ್‌ ಎಂದು ತಪ್ಪು ತೀರ್ಪು ನೀಡಿದ್ದರು. ಅದರ ಉಪಯೋಗ ಪಡೆದ ಪೂಜಾರ ಶತಕ ಬಾರಿಸಿ, ತಂಡವನ್ನು ಫೈನಲ್‌ಗೆ ಒಯ್ದಿದ್ದರು. ಇಂತಹ ಘಟನೆಗಳು ಮರುಕಳಿಸ ಬಾರದು ಎಂಬುದು ಬಿಸಿಸಿಐ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next