Advertisement

ಡಿಆರ್‌ಎಸ್‌ನಿಂದ ನಿಖರ ತೀರ್ಪಿನ ಪ್ರಮಾಣ ಏರಿಕೆ: ಐಸಿಸಿ

03:45 AM Feb 17, 2017 | |

ನವದೆಹಲಿ: ಕ್ರಿಕೆಟ್‌ನಲ್ಲಿ ಅಂಪೈರ್‌ ತೀರ್ಪು ಮರು ಪರಿಶೀಲನಾ ವ್ಯವಸ್ಥೆ (ಡಿಆರ್‌ಎಸ್‌) ಅಳವಡಿಕೆಯ ನಂತರ ಸರಿಯಾದ ತೀರ್ಪಿನ ಪ್ರಮಾಣ ಶೇ.98.5ಕ್ಕೇರಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಹೇಳಿಕೊಂಡಿದೆ. 

Advertisement

ಈ ಬಗ್ಗೆ ಐಸಿಸಿ ಪ್ರಧಾನ ಕಾರ್ಯದರ್ಶಿ ಡೇವಿಡ್‌ ರಿಚಡ್ಸìನ್‌ ಐಸಿಸಿ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆ ಸರಿಯಾದ ತೀರ್ಪಿನ ಪ್ರಮಾಣ ಶೇ.94ರಷ್ಟಿತ್ತು. ಆದರೆ ಈಗ ಅದರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಹೀಗಾಗಿ ಡಿಆರ್‌ಎಸ್‌ ಅಳವಡಿಕೆಯ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಯತ್ನ: ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಪ್ರಯತ್ನ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಕೆಲವು ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. 2017ರ ಮೊದಲರ್ಧದಲ್ಲಿ ಈ ಕೆಲಸ ಆಗಬೇಕಿದೆ. ನಮ್ಮ ಸದಸ್ಯರೆಲ್ಲರೂ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೆ ಬಯಸುತ್ತಿದ್ದಾರೆ ಎಂದು ರಿಚಡ್ಸìನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next