Advertisement
ಮಂಗಳೂರು: ಎತ್ತಿನಹೊಳೆ ನೀರಾವರಿ ಯೋಜನೆಗೆ ಪಶ್ಚಿಮ ಘಟ್ಟ ಹಾಗೂ ಬಯಲು ಸೀಮೆ ಗ್ರಾಮಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು ಎಷ್ಟು ಸಾವಿರ ಎಕರೆ ಜಮೀನು ಬೇಕು ಹಾಗೂ ಎಷ್ಟು ಗ್ರಾಮಗಳ ಜನರು ಮನೆ-ಮಠ ಕಳೆದುಕೊಳ್ಳುತ್ತಾರೆ ಎಂಬುದನ್ನು ಸರಕಾರ ಬಹಳ ಗುಟ್ಟಾಗಿ ಇರಿಸಿದೆ.
Related Articles
ಬಹುದಾದ 24 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೂ ಬಯಲು ಸೀಮೆಯಲ್ಲಿಯೂ ಸಾವಿರಾರು ಎಕರೆ ಜಮೀನಿನ ಅಗತ್ಯವಿದೆ. ಹಾಗಾದರೆ, ಎತ್ತಿನಹೊಳೆ ಯೋಜನೆಗೆ ಮುಳುಗಡೆಯಾಗುವ ಅಥವಾ ಸ್ವಾಧೀನಪಡಿಸಬೇಕಾದ ಒಟ್ಟು ಎಷ್ಟು ಸಾವಿರ ಭೂಮಿ ಬೇಕು. ಇದರಿಂದ ಮನೆ-ಮಠ ಕಳೆದುಕೊಳ್ಳುವವರಿಗೆ ಪುನರ್ವಸತಿ ಕಲ್ಪಿಸುವುದು ಎಲ್ಲಿ ಹಾಗೂ ಭೂಮಿ ಕಳೆದುಕೊಳ್ಳುವ ರೈತರಿಗೆ ನೀಡಬೇಕಾಗುವ ಪರಿಹಾರ ಮೊತ್ತ ಎಷ್ಟು? ಇದೆಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಇನ್ನೆಷ್ಟು ವರ್ಷಗಳು ಬೇಕು? ಅದೆಲ್ಲಕ್ಕಿಂತ ಮುಖ್ಯವಾಗಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿಗೆ ಖರ್ಚು ಆಗುವ ಒಟ್ಟು ಯೋಜನಾ ವೆಚ್ಚ ಎಷ್ಟು? ಸರಕಾರದ ಬಳಿ ಇಲ್ಲಿನ ಯಾವ ಪ್ರಶ್ನೆಗಳಿಗೂ ಉತ್ತರವಿಲ್ಲ. ಬದಲಿಗೆ, ಎತ್ತಿನಹೊಳೆ ಡ್ಯಾಂ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಒಂದು ವರ್ಷದೊಳಗೆ ಬಯಲು ಸೀಮೆಗೆ ನೀರು ಪೂರೈಸುವುದಾಗಿ ಬಯಲು ಸೀಮೆ ಜನರನ್ನು ನಂಬಿಸುತ್ತಿರುವುದು ದುರಂತ.
Advertisement
ನದಿಯ ಮೇಲೆ ನದಿ…!ನೈಸರ್ಗಿಕವಾಗಿ ಹರಿಯುವ ನದಿಯ ಮೇಲೆ ಮತ್ತೂಂದು ನದಿ ದಾಟಿಸಿದ ನಿದರ್ಶನ ಎಲ್ಲಾದರೂ ಇರಬಹುದೇ? ಹಾಗಾದರೆ, ಇಂಥದೊಂದು ವಿನೂತನ ಪ್ರಯತ್ನ ಇದೀಗ ಎತ್ತಿನಹೊಳೆ ನೀರಾವರಿ ಯೋಜನೆಯಡಿ ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿದೆ. ಕಾವೇರಿ ನದಿಯ ಮುಖ್ಯ ಉಪನದಿ ಹೇಮಾವತಿ ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮ
ಘಟ್ಟದ ಶ್ರೇಣಿಯಲ್ಲಿ ಉಗಮಿಸುತ್ತದೆ. ಬಳಿಕ ಸಕಲೇಶಪುರದ ಮೂಲಕ ಸಾಗುವ ಈ ನದಿಯ ಮೇಲೆಯೇ ನೇತ್ರಾವತಿಯ ಮೂಲವಾಗಿರುವ ಎತ್ತಿನಹೊಳೆ ನೀರು ಸರಬರಾಜು ಆಗಲಿದೆ. ಇದಕ್ಕಾಗಿ ಹೆಬ್ಬಸಾಲೆಯಲ್ಲಿ ಬೃಹತ್ ಸೇತುವೆ ನಿರ್ಮಾಣ ಭರದಿಂದ ಸಾಗಿದ್ದು, ಹೇಮಾವತಿ ನದಿ ನೀರಿನ ಚಲನೆಯನ್ನು ಸ್ವಲ್ಪ ಮಟ್ಟಿಗೆ ತಿರುಗಿಸಲಾಗಿದೆ. ಇದಕ್ಕಾಗಿ ಬೃಹತ್ ಗಾತ್ರದ 4 ಕ್ರೇನ್‌ಗಳು ಹೇಮಾವತಿ ನದಿಯಲ್ಲಿ ಕೆಲಸ ನಡೆಸುತ್ತಿವೆ. ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದರ ಮೇಲೆ ನಾಲ್ಕು ಲೈನ್‌ನ ಬೃಹತ್ ಪೈಪ್‌ಗ್ಳು ಹಾದು ಹೋಗಲಿವೆ. ಎತ್ತಿನಹೊಳೆಯಿಂದ ಬರುವ ನೀರು ಈ ನಾಲ್ಕು ಪೈಪ್‌ಗಳ ಮೂಲಕ ಹರಿದು ದೊಡ್ಡನಾಗರದಲ್ಲಿರುವ ಸಂಗ್ರಹ ಜಾಗಕ್ಕೆ ಹೋಗುತ್ತದೆ. ಅಲ್ಲಿ ನೀರಿನ ಸಂಗ್ರಹದ ದೊಡ್ಡ ತೊಟ್ಟಿಯ ಕೆಲಸವೂ ಪ್ರಗತಿಯಲ್ಲಿದೆ. 7 ಜಿಲ್ಲೆ-527 ಕೆರೆ; 24 ಟಿಎಂಸಿ ನೀರು…!
ಎತ್ತಿನಹೊಳೆ ಯೋಜನೆಯ ಮೂಲಕ ರಾಜ್ಯದ ಪೂರ್ವ ಭಾಗದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲ ಭಾಗಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ಉದ್ದೇಶ ಇರಿಸಲಾಗಿದೆ. ಹೇಸರಘಟ್ಟ ಹಾಗೂ ತಿಪ್ಪೆಗೊಂಡನಹಳ್ಳಿ ಜಲಾಶಯಗಳಿಗೆ ಕುಡಿಯುವ ನೀರಿನ ಕೊರತೆಯನ್ನು ಭಾಗಶಃ ಸರಿದೂಗಿಸುವುದು ಹಾಗೂ 527 ಕೆರೆಗಳಿಗೆ ಭಾಗಶಃ ತುಂಬಿಸಿ ಅವುಗಳ ಅಂತರ್ಜಲ ಅಭಿವೃದ್ಧಿಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ. 7 ಜಿಲ್ಲೆಗಳ 29 ತಾಲೂಕಿನ 6557 ಗ್ರಾಮಗಳಿಂದ ಸುಮಾರು 68.35 ಲಕ್ಷ ಜನರಿಗೆ ಕುಡಿಯುವ ನೀರಿಗಾಗಿ 15.029 ಟಿಎಂಸಿ, 527 ಕೆರೆಗಳನ್ನು ತುಂಬಿಸಲು 8.967 ಟಿಎಂಸಿ ಸೇರಿದಂತೆ 24 ಟಿಎಂಸಿ ನೀರು ಈ ಮೂಲಕ ಸಿಗಲಿದೆ ಎಂಬುದು ಸರಕಾರದ ಲೆಕ್ಕಾಚಾರ. ಆದರೆ ಎತ್ತಿನಹೊಳೆ ಯೋಜನೆಯಿಂದ ಅಧಿಕೃತವಾಗಿ ಎಷ್ಟು ನೀರು ಸಿಗಲಿದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕು.