Advertisement

Droupadi Murmu; ಸಂತ್ರಸ್ತೆಯರಿಗೆ ಸಮಾಜದ ಬೆಂಬಲ ಸಿಗುತ್ತಿಲ್ಲ: ರಾಷ್ಟ್ರಪತಿ ತೀವ್ರ ಕಳವಳ

01:09 AM Sep 02, 2024 | Team Udayavani |

ಹೊಸದಿಲ್ಲಿ: ಅಪರಾಧಗಳಿಂದ ಸಂತ್ರಸ್ತರಾಗಿ ಬದುಕುಳಿದ ಮಹಿಳೆಯರಿಗೆ ಸಮಾಜದ ಬೆಂಬಲದ ಕೊರತೆಯ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು( President Droupadi Murmu)ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ರವಿವಾರ(ಸೆ 1) ಸುಪ್ರೀಂ ಕೋರ್ಟ್(Supreme Court) ಆಯೋಜಿಸಿದ ಜಿಲ್ಲಾ ನ್ಯಾಯಾಂಗದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ‘ನಮ್ಮ ನ್ಯಾಯಾಂಗದ ಮುಂದೆ ಅನೇಕ ಸವಾಲುಗಳಿವೆ, ಅದನ್ನು ಪರಿಹರಿಸಲು ಎಲ್ಲಾ ಮಧ್ಯಸ್ಥಗಾರರ ಸಂಘಟಿತ ಪ್ರಯತ್ನಗಳ ಅಗತ್ಯವಿದೆ’ ಎಂದರು.

ಕೋಲ್ಕತಾ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ,ಮಲಯಾಳಂ ಚಿತ್ರರಂಗದಲ್ಲಿ ನಟರ ವಿರುದ್ಧ ದಾಖಲಾದ ಲೈಂಗಿಕ ಕಿರುಕುಳ, ದೇಶದ ವಿವಿಧೆಡೆ ಅತ್ಯಾಚಾರದ ಹತ್ತಾರು ಪ್ರಕರಣಗಳ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ವೇಳೆಯಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿಕೆ ನೀಡಿದ್ದಾರೆ.

‘ಭಾರತದಲ್ಲಿ ಮಹಿಳೆಯರು ಮತ್ತು ಹುಡುಗಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದರ ಕುರಿತು ಕೂಲಂಕಷವಾಗಿ ಮರುಪರಿಶೀಲಿಸುವ ಕರೆಗಳನ್ನು ಹುಟ್ಟುಹಾಕಿದೆ’ ಎಂದು ಹೇಳಿದ್ದಾರೆ.

“ಅಪರಾಧ ಮಾಡಿದ ನಂತರವೂ ಅಪರಾಧಿಗಳು ನಿರ್ಭೀತಿಯಿಂದ ತಿರುಗಾಡುತ್ತಿರುವುದು ನಮ್ಮ ಸಾಮಾಜಿಕ ಜೀವನದ ದುಃಖದ ವಿಚಾರವಾಗಿದೆ, ಅವರ ಅಪರಾಧಗಳಿಗೆ ಬಲಿಪಶುವಾದವರು ತಮ್ಮ ಆಲೋಚನೆಗಳು ಅನೇಕ ಅಪರಾಧಗಳನ್ನು ಮಾಡಿದಂತೆ ಭಯದಿಂದ ಬದುಕುತ್ತಾರೆ. ಸಂತ್ರಸ್ತ ಮಹಿಳೆಯರ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಏಕೆಂದರೆ ಸಮಾಜದ ಜನರು ಸಹ ಅವರನ್ನು ಬೆಂಬಲಿಸುವುದಿಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಸುಪ್ರೀಂ ಕೋರ್ಟ್‌ನ ಹೊಸ ಧ್ವಜ, ಲಾಂಛನ ಅನಾವರಣ
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹೊಸ ಧ್ವಜ ಮತ್ತು ಲಾಂಛನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರವಿವಾರ ಅನಾವರಣಗೊಳಿಸಿದರು.

ಹೊಸ ಧ್ವಜ ನ್ಯಾಯ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸಲಿದ್ದು, ಧ್ವಜದಲ್ಲಿ ಸಂವಿಧಾನ ಪುಸ್ತಕ, ಅಶೋಕ ಚಕ್ರ ಮತ್ತು ಸುಪ್ರೀಂ ಕೋರ್ಟ್‌ನ ಹಳೆಯ ಕಟ್ಟಡಗಳನ್ನು ಚಿತ್ರಿಸಲಾಗಿದೆ.

1937ರ ಅ.1ರಂದು ಭಾರತದಲ್ಲಿ ಸುಪ್ರೀಂ ಕೋರ್ಟನ್ನು ಬ್ರಿಟಿಷರು ಸ್ಥಾಪನೆ ಮಾಡಿದರು. ಸ್ವಾತಂತ್ರ್ಯದ ಬಳಿಕ 1950ರಲ್ಲಿ ಸಂವಿಧಾನದ ಅನ್ವಯ ಇದನ್ನು ಅಧಿಕೃತಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next