Advertisement
ನದಿಗಳಲ್ಲಿ ಸಹಜವಾಗಿ ಹರಿದು ಹೋಗುವ ನೀರನ್ನು ಬಳಸಿ, ನದಿಗಳ ಬದಿಯಲ್ಲಿ ನಿರ್ಮಿಸಲಾಗುವ ಜಲಾಶ್ರಯಗಳಲ್ಲಿ ಸಂಗ್ರಹಿಸಿ ಬಳಸುವ ಮಹತ್ವದ ಯೋಜನೆ ಇದಾಗಿದೆ. ಹತ್ತರಿಂದ ಹದಿನೈದು ಡಿಗ್ರಿ ವರೆಗಿನ ವ್ಯತ್ಯಾಸದಲ್ಲಿ ನೂತನ ಕಾಲುವೆಗಳನ್ನು ನಿರ್ಮಿಸಿ ಜಲಾಶ್ರಯಗಳಿಗೆ ನದಿ ನೀರು ತಲಪುವಂತೆ ಮಡಲಾಗುವುದು. ಕನಿಷ್ಠ 7x9x3 ಮೀಟರ್ ಆಳದ ಕೆರೆಗಳನ್ನು ನಿರ್ಮಿಸಲಾಗುವುದು.
ಈ ಯೋಜನೆಗೆ ಅಗತ್ಯವಿರುವ ನಿಧಿಯನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜಿನಿಂದ ಬಳಸಲಾಗುವುದು. ಈ ಕುರಿತು ಮಾತುಕತೆ ನಡೆಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಜರುಗಿತು.
Related Articles
ಕಾಸರಗೋಡು, ಮಂಜೇಶ್ವರಗಳ ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ. ಅಶೋಕ್ ಕುಮಾರ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಸ್ಪೆಷಲ್ ಆಫೀಸರ್ ಇ.ಪಿ. ರಾಜ್ ಮೋಹನ್, ಹರಿತ ಕೇರಳಂ ಜಿಲ್ಲಾ ಸಂಚಾಲಕ ಎಂ.ಪಿ. ಸುಬ್ರಹ್ಮಣ್ಯನ್, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
Advertisement
ಮೇ 15ರ ಮುನ್ನ ನಿರ್ಮಾಣ ಕಾಮಗಾರಿ ಆರಂಭಜಿಲ್ಲಾಡಳಿತದ ನೇತƒತ್ವದಲ್ಲಿ ಜಾರಿಗೊಳಿಸುವ ನದಿತಟ ಅಭಿವೃದ್ಧಿ ಯೋಜನೆಯಂಗವಾಗಿ ಈ ಚಟುವಟಿಕೆ ತ್ವರಿತಗತಿಯಲ್ಲಿ ಸಾಗುತ್ತಿದೆ.ಇದರ ಮೊದಲ ಹಂತವಾಗಿ ಮಂಜೇಶ್ವರ ತಾಲೂಕಿನ 5 ನದಿ ತಟಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಮಂಜೇಶ್ವರ, ಉಪ್ಪಳ, ಶಿರಿಯ, ಕುಂಬಳೆ, ಮೊಗ್ರಾಲ್ ನದಿಗಳ ಬದಿಯ ವಿವಿಧ ಪ್ರದೇಶಗಳಲ್ಲಿ ಕಿರು ಕೆರೆಗಳ ಸಹಿತ ಜಲಾಶಯಗಳ ನಿರ್ಮಾಣ ನಡೆಸಲಾಗುವುದು. ಖಾಸಗಿ, ಸರಕಾರಿ ಸ್ಥಳಗಳ ಸಹಿತ ಒಟ್ಟು 418 ಪ್ರದೇಶಗಳನ್ನು ಈ ನಿಟ್ಟಿನಲ್ಲಿ ಗುರುತಿಸಲಾಗಿದೆ. ಮೇ 15ರ ಮುನ್ನ ಕೆರೆಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು.