Advertisement

Drought ರಾಜ್ಯ ಸರಕಾರದಿಂದ ಜನತೆಗೆ ಬರಗಾಲ ಉಡುಗೊರೆ

01:03 AM Nov 27, 2023 | Team Udayavani |

ಚಳ್ಳಕೆರೆ: ಸರಕಾರ ರೈತರಿಗೆ ಬರಗಾಲವನ್ನು ಉಡುಗೊರೆಯಾಗಿ ಕೊಟ್ಟು ರಾಜ್ಯ ಸುಭಿಕ್ಷವಾಗಿದೆ ಎಂಬ ಸುಳ್ಳು ಜಾಹೀರಾತು ನೀಡಿ ಪ್ರಚಾರ ಪಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದರು.

Advertisement

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬುಡ್ನಹಟ್ಟಿ ಗ್ರಾಮದ ಪುಟ್ಟಮ್ಮ ಅವರ ಶೇಂಗಾ ಬೆಳೆ ಹಾಗೂ ಬಿ. ತಿಪ್ಪೇಸ್ವಾಮಿಯವರ ತೊಗರಿ ಬೆಳೆಹಾನಿಯನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಗಾಲ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ.

ಕೇಂದ್ರ ಸರಕಾರ ಬರ ಪರಿಹಾರ ಮಂಜೂರು ಮಾಡಿಲ್ಲ ಎಂದು ಆರೋಪಿಸುತ್ತಾ ಕಾಲ ಕಳೆಯುತ್ತಿದೆ. ಆದರೆ ಕೇಂದ್ರ ಸರಕಾರ ಈಗಾಗಲೇ ವರದಿ ತರಿಸಿಕೊಂಡು ಪರಿಶೀಲಿಸುತ್ತಿದೆ. ನಾನು ಕೂಡ ಕಂದಾಯ ಸಚಿವನಾಗಿ ಬರಗಾಲ ಸ್ಥಿತಿಯನ್ನು ನಿಭಾಯಿಸಿದ್ದೇನೆ. ನನ್ನ ಅವ ಧಿಯಲ್ಲಿ ಕೇಂದ್ರ ಸರಕಾರದ ಅನುದಾನಕ್ಕೆ ಕಾಯದೆ ಎನ್‌ಡಿಆರ್‌ಎಫ್‌ ನಿ ಧಿಯಲ್ಲೇ ಹೆಚ್ಚಿನ ಪರಿಹಾರ ಹಣ ನೀಡಿ ರೈತರಿಗೆ ನೆರವಾಗಿದ್ದೇನೆ. ಪ್ರಸ್ತುತ ಎನ್‌ಡಿಆರ್‌ಎಫ್‌ನಲ್ಲಿ ಸಾಕಷ್ಟು ಹಣ ಇದ್ದರೂ ಅದನ್ನು ರೈತರಿಗೆ ನೀಡದೆ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದರು.

ರಾಜಕೀಯಕ್ಕಷ್ಟೇ ಆದ್ಯತೆ
ರಾಜ್ಯದ ಯಾವುದೇ ಸಚಿವರು ಬರ ಅಧ್ಯಯನದ ಬಗ್ಗೆ ಚಕಾರ ಎತ್ತುತ್ತಿಲ್ಲ. ಮುಖ್ಯಮಂತ್ರಿ ಸ್ಥಾನ ಉಳಿಸಲು ಕೆಲವರು ಪ್ರಯತ್ನಿಸುತ್ತಿದ್ದರೆ, ಹಲವರು ಡಿಸಿಎಂ ಅನ್ನು ಸಿಎಂ ಮಾಡಲು ಹೋರಾಡುತ್ತಿದ್ದಾರೆ. ಕೆಲವು ಸಚಿವರು ಗೃಹ ಸಚಿವ ಡಾ| ಜಿ. ಪರಮೇಶ್ವರ ನಿವಾಸದಲ್ಲಿ ಸಭೆ ಸೇರಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ನಡೆಸುತ್ತಾರೆ. ಇದೆಲ್ಲದರಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ರಾಜಕೀಯ ಅಭದ್ರತೆ ಕಾಡುತ್ತಿದೆ ಎಂದರು.

ರಾಜ್ಯ ಸರಕಾರ ರೈತರ ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ, ರಾಜ್ಯದಲ್ಲಿ ಬರ ನಿರ್ವಹಣೆಗೆ ಅ ಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.

Advertisement

ರಾಜ್ಯ ಸರಕಾರದ ಖಜಾನೆ ಖಾಲಿ
ಶಿರಾ: ಬರ ಪರಿಹಾರ ಹಣ ರೈತರ ಖಾತೆಗೆ ವರ್ಗಾವಣೆಯಾಗಬೇಕಿತ್ತು. ಸಮೀಕ್ಷೆಯಾಗಿದೆ ಎಂದು ಹೇಳುತ್ತಾರೆ. ಆದರೆ ಹಣ ಬಿಡುಗಡೆಯಾಗಿಲ್ಲ. ಇದಕ್ಕೆ ಸರಕಾರದ ಖಜಾನೆ ಖಾಲಿಯಾಗಿರುವುದೇ ಕಾರಣ. ಪರಿಶಿಷ್ಟ ಜಾತಿ ಮಕ್ಕಳಿಗೂ ವಿದ್ಯಾರ್ಥಿವೇತನ ನೀಡಿಲ್ಲ. ರಾಜ್ಯ ಸರಕಾರ ಎಲ್ಲ ರೀತಿಯಲ್ಲೂ ರೈತರಿಗೆ ಮೋಸ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ದೇವರಹಳ್ಳಿ ಗ್ರಾಮದಲ್ಲಿ ಬರ ಪರಿಸ್ಥಿತಿಯನ್ನು ವೀಕ್ಷಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ರೈತರಿಗೆ ಪರಿಹಾರ ನೀಡಬೇಕು. ಎನ್‌ಡಿಆರ್‌ಎಫ್ ನಿಯಮದಂತೆ ಕೇಂದ್ರ ಸರಕಾರ ಹಣ ನೀಡುತ್ತದೆ. ಈ ಹಿಂದೆ ಮನಮೋಹನ್‌ ಸಿಂಗ್‌ ಸರಕಾರ ಇದ್ದಾಗ ಕೊಟ್ಟ ಮೊತ್ತಕ್ಕಿಂತ ನಾಲ್ಕುಪಟ್ಟು ಹಣವನ್ನು ನರೇಂದ್ರ ಮೋದಿ ಕೊಟ್ಟಿದ್ದಾರೆ. ಇದಕ್ಕೆ ನನ್ನಲ್ಲಿ ದಾಖಲೆ ಇದ್ದು, ಅಧಿವೇಶನದಲ್ಲಿ ಹೇಳುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next