Advertisement
ಗ್ರಾ. ಪಂ. ಮಳೆಗಾಲದ ಯಾವುದೇ ಪೂರ್ವ ಸಿದ್ಧತೆಯತ್ತ ಗಮನ ಹರಿಸಿಲ್ಲ. 33 ವಾರ್ಡ್‌ಗಳಿರುವ ಈ ಬೃಹತ್ ಪಂಚಾಯತ್‌ನಲ್ಲಿ ಗ್ರಾಮ, ಜಿ. ಪಂ. ಸೇರಿ ಅದೆಷ್ಟೋ ರಸ್ತೆಗಳಿವೆ. ಕೆಲವಕ್ಕೆ ಚರಂಡಿಗಳೇ ಇಲ್ಲವಾದರೂ ಇರುವಡೆಗಳಲ್ಲಿ ಹೂಳು ತುಂಬಿ ಹೋಗಿವೆ. ಕೆಲ ರಸ್ತೆ ಚರಂಡಿಗಳಲ್ಲಿ ಗಿಡಗಂಟಿಗಳಿಂದ ತುಂಬಿದ್ದರೆ, ಕೆಲವೆಡೆ ತ್ಯಾಜ್ಯಗಳ ರಾಶಿ ನೀರು ಸರಾಗ ಹರಿಯಲು ಸಂಚಕಾರ ತರಲಿದೆ. ಪೇಟೆಯಲ್ಲಿ ಹೆದ್ದಾರಿ ಒಳಚರಂಡಿ ಕಾಮಗಾರಿ ಪೂರ್ಣವಾಗದಿರುವುದರಿಂದ ಕೃತಕ ನೆರೆಗೂ ಕಾರಣವಾಗಲಿದೆ.
ಪಡುಬಿದ್ರಿ ಬಾಲಗಣೇಶ ದೇವಸ್ಥಾನದ ರಸ್ತೆ, ಬೀಡು – ಮಂಜೊಟ್ಟಿ ಸಂಪರ್ಕ ರಸ್ತೆಯಲ್ಲಿನ ಮೋರಿಗಳೆರಡು ವರ್ಷಗಳ ಹಿಂದೆ ಕುಸಿದಿದ್ದು, ಈವರೆಗೆ ದುರಸ್ತಿಯಾಗಿಲ್ಲ. ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿಯೂ ಇಕ್ಕೆಲಗಳಲ್ಲಿ ಮಣ್ಣು ಅಗೆದು ಹಾಕಲಾಗಿದ್ದು, ಚರಂಡಿಗಳು ಮುಚ್ಚಿ ಹೋಗಿವೆ. ಎಚ್ಚರಿಕೆ ಫಲಕ ಮರು ಅಳವಡಿಸಿ
ಸುಜ್ಲಾನ್ ಪುನರ್ವಸತಿ ಕಾಲೊನಿ ಸಮೀಪವಿರುವ ಮದಗಕ್ಕೆ ಅಳವಡಿಸಿದ್ದ ಎಚ್ಚರಿಕೆ ಫಲಕ ಮಾಸಿ ಹೋಗಿರುವ ಕಳೆದ ವರ್ಷ ಗ್ರಾ. ಪಂ. ಗಮನ ಸೆಳೆದಿದ್ದರೂ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಕೆಲ ವರ್ಷ ಗಳ ಹಿಂದೆ ಇಲ್ಲಿ ದುರಂತ ನಡೆದು ಬಾಲಕನೊಬ್ಬ ಮೃತಪಟ್ಟಿದ್ದ. ಬಳಿಕ ಜಿಲ್ಲಾಧಿಕಾರಿ ಸೂಚನೆಯಂತೆ ಇಲ್ಲಿ ಎಚ್ಚರಿಕೆ ಫಲಕ ಅಳವಡಿಸಲಾಗಿತ್ತು. ಮದಗದ ಎರಡು ಪಾರ್ಶ್ವಗಳಲ್ಲಿ ಅಳವಡಿಸಿದ್ದ ಫಲಕಗಳ ಬಣ್ಣವೂ ಮಾಸಿ ಹೋಗಿದೆ.
Related Articles
ಗ್ರಾಮದ ತ್ಯಾಜ್ಯ ಸಮಸ್ಯೆ ಪೂರ್ಣವಾಗಿ ಇನ್ನೂ ಮಾಸಿಲ್ಲ. ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿ ಘಟಕಕ್ಕಾಗಿ ಸಂತೆ ಮಾರುಕಟ್ಟೆ ಸಮೀಪವೇ ಪಂಚಾಯತ್ ಮುಂದಾಗಿದ್ದರೂ ಇದೀಗ ಲೋಕಾ ಯುಕ್ತ ನೋಟೀಸಿನಿಂದಾಗಿ ಮುಚ್ಚುವ ಪರಿಸ್ಥಿತಿಯೂ ಎದುರಾಗಿದೆ ಎಂದೂ ಗ್ರಾ. ಪಂ. ಮಾಹಿತಿಗಳು ತಿಳಿಸಿವೆ.
Advertisement
ಮೆಸ್ಕಾಂ ಪಾಠ ಕಲಿತಿದೆಕಳೆದ ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದ ಮೆಸ್ಕಾಂ ಇಲಾಖೆ ಪಾಠ ಕಲಿತಿದೆ. ಈಗಾಗಲೇ ಗ್ರಾಮದಲ್ಲೆಡೆ ವಿದ್ಯುತ್ ತಂತಿಗಳಿಗೆ ತಾಗುವ ಮರ ಗಿಡಗಳ ಗೆಲ್ಲುಗಳ ಕಟಾವು ಮೂಲಕ ಮಳೆಗಾಲದ ಪೂರ್ವ ತಯಾರಿ ಆರಂಭಿಸಲಾಗಿದೆ.
-ಸುಧೀರ್ ಪಟೇಲ್, ಪಡುಬಿದ್ರಿ ಮೆಸ್ಕಾಂ ಸಹಾಯಕ ಇಂಜಿನಿಯರ್. ಪತ್ರ ಬರೆಯಲಾಗಿದೆ
ಮಳೆ ನೀರು ಹರಿದು ಹೋಗುವ ಚರಂಡಿಗಳ ಹೂಳೆತ್ತಲು ಒಂದೆರಡು ದಿನಗಳಲ್ಲಿ ಕಾರ್ಯ ಪ್ರವೃತ್ತರಾಗಲಿದ್ದೇವೆ. ರಾ.ಹೆ. 66ರ ಚರಂಡಿ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
-ದಮಯಂತಿ, ಅಧ್ಯಕ್ಷೆ, ಪಡುಬಿದ್ರಿ ಗ್ರಾ. ಪಂ.