Advertisement

ತಂಬಾಕು ಬಿಟ್ರೆ 2 ಕಪ್‌ ಹಾಲು

09:20 AM Oct 04, 2017 | |

ಅಲಹಾಬಾದ್‌: ಜನರ ತಂಬಾಕು ಚಟ ಬಿಡಿಸಲು ಸರಕಾರ ಹಾಗೂ ಎನ್‌ಜಿಒಗಳು ಎಷ್ಟೇ ಜಾಗೃತಿ ಕಾರ್ಯಕ್ರಮ ನಡೆಸಿದರೂ ಅವು ಯಶಸ್ವಿಯಾಗುವುದು ಅತಿ ವಿರಳ. ಆದರೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲಾ ಕಾರಾಗೃಹದ ಸುಪರಿಂಟೆಂ ಡೆಂಟ್‌ ಮಾಡಿದ ಉಪಾಯಕ್ಕೆ ಇಡೀ ಜೈಲು “ತಂಬಾಕು ಮುಕ್ತ’ವಾಗುವತ್ತ ಹೆಜ್ಜೆ ಇರಿಸಿದೆ.

Advertisement

ಜೈಲಲ್ಲಿ ಬೀಡಿ ಸೇದುವ, ತಂಬಾಕು ಜಗಿ ಯುವ ಕೈದಿಗಳ ಸಂಖ್ಯೆ ಹೆಚ್ಚಿದ್ದನ್ನು ಗಮ ನಿಸಿದ ಮೇಲ್ವಿಚಾರಕ, “ತಂಬಾಕು ತ್ಯಜಿಸಿ, ದಿನಕ್ಕೆ ಎರಡು ಕಪ್‌ ಹಾಲು ಪಡೆಯಿರಿ’ ಎಂಬ ಡೀಲ್‌ ಒಂದನ್ನು ಕೈದಿಗಳ ಮುಂದಿ ಟ್ಟರು. ಅದರಂತೆ ತಂಬಾಕು ಚಟ ತ್ಯಜಿಸಿದ ಕೈದಿಗಳಿಗೆ ದಿನಕ್ಕೆ ಅರ್ಧ ಲೀಟರ್‌ ಹಾಲು ಕೊಡಲು ಆರಂಭಿಸಿದರು. ಪರಿಣಾಮ ಬಹುತೇಕ ಕೈದಿಗಳು ತಂಬಾಕು ಬಿಟ್ಟು ಹಾಲು ಕುಡಿಯುವ “ಡೀಲ್‌’ ಅಪ್ಪಿಕೊಂಡಿದ್ದಾರೆ.

ಕೌಶಂಬಿ ಜೈಲಿನಲ್ಲಿ 642 ಕೈದಿಗಳಿದ್ದು, ಇವರಲ್ಲಿ ಶೇ.70 ಮಂದಿ ತಂಬಾಕು ಸೇವಿಸು ತ್ತಾರೆ. ಇದರಿಂದ ಚಟ ಇರುವವರ ಆರೋಗ್ಯ ಹಾಳಾಗು ವುದಷ್ಟೇ ಅಲ್ಲದೆ, ದುರಭ್ಯಾಸ ಹೊಂದಿರದ ಶೇ.30ರಷ್ಟು ಕೈದಿಗಳ ಆರೋ ಗ್ಯದ ಮೇಲೂ ದುಷ್ಪರಿಣಾಮ ಉಂಟಾಗು ತ್ತಿತ್ತು. “ಈ ವಿಷಯ ಗಮನಕ್ಕೆ ಬಂದ ಕೂಡಲೆ, ತಂಬಾಕು ಸೇವಿಸುವವರು ಮತ್ತು ಸೇವನೆ ಮಾಡದವರ ಪ್ರತ್ಯೇಕ ಸಾಲು ಮಾಡಿಸಿದೆ. ದುರಭ್ಯಾಸ ಇಲ್ಲದವರಿಗೆ ಅರ್ಧ ಲೀ. ಹಾಲು ಕೊಡಲಾ ರಂಭಿಸಿದೆ. ಚಟ ಬಿಟ್ಟರೆ ನಿಮಗೂ ಹಾಲು ಕೊಡುತ್ತೇನೆ ಎಂದು ವ್ಯಸನಿ ಗಳಿಗೆ ಹೇಳಿದೆ. ಪ್ರಸ್ತುತ ಅರ್ಧದಷ್ಟು ಕೈದಿ ಗಳು ತಂಬಾಕು ತ್ಯಜಿಸಿದ್ದಾರೆ. ವ್ಯಸನಿಗಳ ಸಾಲಿಗಿಂತ ಹಾಲು ಕುಡಿಯುವವರ ಸಾಲು ದೊಡ್ಡ ದಾಗಿದೆ’ ಎನ್ನುತ್ತಾರೆ ಜೈಲು ಮೇಲ್ವಿಚಾರಕ ಮುಕುಂದ್‌.

Advertisement

Udayavani is now on Telegram. Click here to join our channel and stay updated with the latest news.

Next