ಪ್ರಮೀ ಳಾ ಬಾಯಿ (72) ಎಂಬುವವರು ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಕ್ಷ್ಮೀಪುರ ನಿವಾಸಿ ಪ್ರಮೀಳಾಬಾಯಿ, ಮಂಗಳವಾರ (ಮಾ.5) ಬೆಳಗ್ಗೆ 10.30ರ ಸುಮಾರಿಗೆ ತಮ್ಮ ವೃದ್ಧಾಪ್ಯ ವೇತನ ಪಡೆಯುವ ಸಂಬಂಧ ಅಶೋಕನಗರ ಅಂಚೆಕಚೇರಿಗೆ ನಡೆದು ಹೋಗುತ್ತಿದ್ದರು.
Advertisement
ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿ, “ಎಲ್ಲಿಗೆ ನಡೆದುಕೊಂಡು ಹೋಗುತ್ತೀದ್ದೀರಿ, ಸಾಕಷ್ಟು ಬಿಸಿಲಿದೆ. ನಾನು ಹನುಮಂತನಗರದಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದೇನೆ’ ಎಂದು ಮಾತನಾಡಿಸಿದ್ದಾನೆ. ಬಳಿಕ ನಿಮ್ಮನ್ನು ಅಂಚೆ ಕಚೇರಿಗೆ ಬಿಡುತ್ತೇನೆ ಬನ್ನಿ ಎಂದಿದ್ದಾನೆ. ಆತನ ಮಾತು ನಂಬಿದ ಪ್ರಮೀಳಾ ಬಾಯಿ ಬೈಕ್‌ನಲ್ಲಿ ಕುಳಿತುಕೊಂಡಿದ್ದಾರೆ. ಗಣಪತಿ ದೇವಾಲಯ ಸಮೀಪದ 8ನೇ ಕ್ರಾಸ್‌ನಲ್ಲಿ ಬೈಕ್ ನಿಲ್ಲಿಸಿದ ಆರೋಪಿ, ಪ್ರಮೀಳಾಅವರನ್ನು ಇಳಿಸಿದ್ದಾನೆ. ಬಳಿಕ ನೀವು ಹಾಕಿಕೊಂಡಿರುವ ಚಿನ್ನದ ಸರದ ಡಿಸೈನ್ ಚೆನ್ನಾಗಿದೆ. ನಮ್ಮ ಅಂಗಡಿಗೆ ಬರುವ ಗ್ರಾಹಕರಿಗೂ ಇದೇ ರೀ ತಿ ಮಾಡಿಸಿಕೊಡಬೇಕು. ಸರ ಕೊಡಿ ನೋಡಿಕೊಡು ತ್ತೇನೆ ಎಂದು ಹೇಳಿ ಅವರಿಂದ ಸರ ಪಡೆದಿದ್ದಾನೆ. ಬಳಿಕ ಮಾತನಾಡುತ್ತಲೇ ತನ್ನಮೊಬೈಲ್‌ನಲ್ಲಿ ಸರದ ಫೋಟೋ ತೆಗೆಯುವಂತೆ ನಾಟಕವಾಡಿದ ಆರೋಪಿ, ಇದ್ದಕ್ಕಿದ್ದಂತೆ ಬೈಕ್ ಸ್ಟಾರ್ಟ್ ಮಾಡಿ ಕೊಂಡು ಪರಾರಿಯಾಗಿದ್ದಾನೆ. ಆರೋಪಿಯ ವರ್ತನೆಯಿಂದ ಕಂಗಾಲದ ಪ್ರಮೀಳಾ ಅವರು ಕೂಗಿ ಕೊಂಡಿದ್ದು, ಸಾರ್ವಜನಿಕರು ಸಹಾಯಕ್ಕೆ ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.