Advertisement
ಆದರೆ, ಅವತ್ತು ನನ್ನ ಗ್ರಹಚಾರಕ್ಕೆ ಯಾವ ನರಪಿಳ್ಳೇನೂ ಬರಲೇ ಇಲ್ಲ. ಅಷ್ಟರಲ್ಲೇ ಒಂದು ಕಾರು ಬಂದು ನನ್ನ ಬಳಿ ನಿಂತಿತು. ಅದರಲ್ಲಿ ವಯಸ್ಸಾದ ಅಜ್ಜ- ಅಜ್ಜಿ ಇದ್ರು. ನನ್ನ ಬಳಿ ಆ ಅಜ್ಜ, ಸುಬ್ರಮಣ್ಯ ದೇವಸ್ಥಾನದ ದಾರಿ ಕೇಳಿದ್ರು. ನಾನು ಸ್ವಲ್ಪ ಟೆನ್ಸ್ನ್‌ನಲ್ಲಿ ಇದ್ದರೂ ಸರಿಯಾಗಿಯೇ ದಾರಿ ಹೇಳಿದ್ದೆ. ಅಜ್ಜಿ ನನ್ನ ಹತ್ರ ಕೇಳಿದ್ರು, “ಯಾಕೆ ಈ ಸಂಜೆಗತ್ತಲಲ್ಲಿ ಒಬ್ಬಳೇ ಇಲ್ಲಿ ನಿಂತಿದೀಯಾ?’. ನಾನು ಇದ್ದ ವಿಷಯ ಹೇಳಿದೆ. ಆಗ ಅವರು, “ಹೀಗೆಲ್ಲಾ ಒಬ್ಬಳೆ ನಿಲ್ಲಬೇಡ. ನಿನ್ನ ಮನೆ ತೋರಿಸು, ಬಾ… ನಿನ್ನನ್ನು ಮನೆಗೆ ಬಿಟ್ಟು ನಾವು ದೇವಸ್ಥಾನಕ್ಕೆ ಹೋಗ್ತಿವಿ’ ಅಂತ ನನ್ನನ್ನು ಮನೆಗೆ ಮುಟ್ಟಿಸಿದರು. ಅವರಿಬ್ಬರ ಹೆಸರು ಕೇಳಲು ಅಂದು ನಾನು ಮರೆತೇಬಿಟ್ಟೆ. ಆದರೆ, ಇವತ್ತು ಎಲ್ಲಾದರೂ ಸಂಜೆಗತ್ತಲಿನಲ್ಲಿ ಒಬ್ಬಂಟಿಯಾಗಿದ್ದೇನೆ ಎಂದಾಗಲೆಲ್ಲ ಆ ಅಜ್ಜ- ಅಜ್ಜಿಯ ಮುಖಗಳು ಕಣ್ಮುಂದೆ ಬರುತ್ತವೆ. ಅವರಿಗೆ ನನ್ನ ದೊಡ್ಡ ಥ್ಯಾಂಕ್ಸ್.
Advertisement
ಅಜ್ಜ- ಅಜ್ಜಿ ಕೊಟ್ಟ ಒಂದು ಡ್ರಾಪ್
06:00 AM Jul 03, 2018 | |
Advertisement
Udayavani is now on Telegram. Click here to join our channel and stay updated with the latest news.