Advertisement

ಕೋವಿಡ್‌ ಸಂತ್ರಸ್ತರು, ವಾರಿಯರ್ಸ್‌ಗೆ ಡ್ರೋನ್‌ ಗೌರವ

02:54 PM Jun 28, 2020 | sudhir |

ಮ್ಯಾಡ್ರಿಡ್‌ : ಕೋವಿಡ್‌-19 ಸಂತ್ರಸ್ತರು ಸೇರಿದಂತೆ ಮುಖ್ಯ ಭೂಮಿಕೆಯಲ್ಲಿ ಕಾರ್ಯಾಚರಿಸುತ್ತಿರುವ ವಾರಿಯರ್ಸ್‌ಗಳಿಗೆ ಮ್ಯಾಡ್ರಿಡ್‌ ಸರಕಾರ ಗೌರವ ಸಲ್ಲಿಸಿದ್ದು, ಸುಮಾರು 40 ಡ್ರೋನ್‌ಗಳ ಮೂಲಕ ರಾತ್ರಿ ಹೊತ್ತಿನಲ್ಲಿ ವಿಶೇಷ ಬೆಳಕಿನ ಪ್ರದರ್ಶನ ನಡೆಸಿದೆ.

Advertisement

ಡ್ರೋನ್‌ಗಳು ಆಕಾಶದಲ್ಲಿ 10 ನಿಮಿಷಗಳ ಅವಧಿಯಲ್ಲಿ ಪಾರಿವಾಳ, ಮನೆ ಮತ್ತು ಪೋಷಕರು ಮತ್ತು ಮಕ್ಕಳ ವಾಕಿಂಗ್‌, ಮತ್ತು ಕೋವಿಡ್‌-19ನಿಂದ ತೀವ್ರವಾದ ಹೊಡೆತ ಅನುಭವಿಸಿದ ದೇಶಗಳ ಧ್ವಜಗಳ ಚಿತ್ತಾರವನ್ನು ಮೂಡಿಸುವ ಮೂಲಕ ವಿಶೇಷ ಗಮನ ಸೆಳೆದಿದೆ.

ಇನ್ನು ಈ ಪ್ರದರ್ಶನಕ್ಕಾಗಿ ಎಲ್‌ಇಡಿ ತಂತ್ರಜ್ಞಾನದ ಸಾಫ್ಟ್‌ವೇರ್‌ ಬಳಸಿದ್ದು, ಈ ವೇಳೆ “ಹೋಪ್‌’ ಮತ್ತು “ಹೀರೋಸ್‌’ ಸೇರಿದಂತೆ ಕೆಲ ಸಂದೇಶಗಳನ್ನು ಕೂಡಾ ರವಾನಿಸಲಾಗಿದೆ.

ಜನಸಂದಣಿ ತಪ್ಪಿಸಲು ಮತ್ತು ಸಾಮಾಜಿಕ ಅಂತರ ಕಾಪಾಡಲು ಪ್ರದರ್ಶನದ ನಿಖರವಾದ ಸ್ಥಳವನ್ನು ರಹಸ್ಯವಾಗಿಡಲಾಗಿದ್ದು, ಈ ಡ್ರೋನ್‌ ಹಾರಾಟವನ್ನು ಯುಎಂಐಎಲ್‌ಎಸ್‌ ಮನೋರಂಜನ ಗ್ರೂಪ್‌ ಮತ್ತು ಮ್ಯಾಡ್ರಿಡ್‌ ಸಿಟಿ ಹಾಲ್‌ ಆಯೋಜಿಸಿದೆ. ಈ ಮೂಲಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸೇವೆಗೈಯುತ್ತಿರುವವರಿಗೆ ಅಭಿನಂದನೆ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next