ಬೆಳಗಾವಿ: ನಿಪ್ಪಾಣಿ, ಸಂಕೇಶ್ವರದಲ್ಲಿ ನೆಲೆಸಿ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಬಾಂಬ್ ಸ್ಫೋಟ ಟ್ರಯಲ್ ನಡೆಸಿದ್ದ ಶಂಕಿತ ಉಗ್ರರು ಜಾಗ ಪರಿಶೀಲನೆಗೆ ಬಳಸಿದ್ದ ಡ್ರೋನ್ ಅನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಇಎಸ್) ವಶಪಡಿಸಿಕೊಂಡಿದೆ.
ಬಂಧಿತ ಉಗ್ರರಿಂದ ಒಟ್ಟು 500 ಜಿಬಿ ಡಾಟಾ ವಶಪಡಿಸಿಕೊಂಡಿದ್ದು, ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನಲ್ಲಿ ಗೂಗಲ್ ಲೋಕೇಶನ್ ಸ್ಕ್ರೀನ್ ಶಾಟ್‌ನಲ್ಲಿ ಪುಣೆ ಸೇರಿ ಮುಂಬೈನ ಛಾಬಡ್ ಹೌಸ್‌ನಲ್ಲಿನ ವಿವಿಧ ಚಿತ್ರಗಳು ಪತ್ತೆಯಾಗಿವೆ. ಇದಕ್ಕೂ ಮುನ್ನ ಡ್ರೋನ್ ಬಾಕ್ಸ್ ಹಾಗೂ ಇತರೆ ಕೆಲ ವಸ್ತುಗಳು ಮಾತ್ರ ಪತ್ತೆ ಆಗಿದ್ದವು ಎಂದು ಗೊತ್ತಾಗಿದೆ.
ಬಾಂಬ್ ತಯಾರಿಸುವ ಸಕೀìಟ್ ಜತೆಗೆ ವಿವಿಧ ಪುಸ್ತಕಗಳು, ಯೂಟ್ಯೂಬ್‌ನಲ್ಲಿನ ವಿಡಿಯೋ ಹಾಗೂ ಕೆಲ ಪಿಡಿಎಫ್ ಫೈಲ್ ಉಗ್ರರಿಂದ ಎಟಿಎಸ್ ತಂಡ ವಶಪಡಿಸಿಕೊಂಡಿದೆ. ಅಂಬೋಲಿ ಅರಣ್ಯ ಪ್ರದೇಶದಲ್ಲಿ ಬಾಂಬ್ ಸ್ಫೋಟದ ಪ್ರಾಯೋಗಿಕ ಪರೀಕ್ಷೆ ನಡೆಸಲು ನಿಪ್ಪಾಣಿ ಮತ್ತು ಸಂಕೇಶ್ವರದಲ್ಲಿ ನೆಲೆಸಿದ್ದ ಮೂವರು ಉಗ್ರರ ಪೈಕಿ ಇಬ್ಬರು ಸೆರೆಯಾಗಿದ್ದಾರೆ. ಬಂಧಿತ ಶಂಕಿತ ಉಗ್ರರು ಪ್ರಕರಣದಲ್ಲಿ ಭಾಗಿಯಾದ ಬಳಿಕ ಹೆಸರು ಬದಲಿಸಿಕೊಂಡು ಓಡಾಡುತ್ತಿದ್ದರು. ನಿಜವಾದ ಹೆಸರನ್ನು ಬದಲಿಸಿ ನಕಲಿ ಗುರುತಿನ ಕಾರ್ಡ್ ಸಹಾಯದಿಂದ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮಹ್ಮದ್ ಇಮ್ರಾನ್ ಮೊಹ್ಮದ ಯುಸೂಫ್ ಖಾನ್ ಅಮೀರ್ ಅಬ್ದುಲ್ ಹಮೀದ್ ಖಾನ್ ಹಾಗೂ ಮೊಹ್ಮದ್ ಯುನೂಸ್ ಮೊಹ್ಮದ್ ಯಾಕೂಬ್ ಸಾಕಿಯನ್ನು ಬಂಧಿ ಸಲಾಗಿದೆ. ಮಹ್ಮದ್ ಆಲಮ್ ಎಂಬಾತ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಜಾಲ ಬೀಸಲಾಗಿದೆ. ಉಗ್ರರಿಗೆ ಆಶ್ರಯ ನೀಡಿದ್ದ ಕೋಮಡವಾದ ಅಬ್ದುಲ್ ಖಾದೀರ್ ದಸ್ತಗೀರ್ ಪಠಾಣ(32) ಹಾಗೂ ಆರ್ಥಿಕ ಸಹಾಯ ನೀಡಿದ್ದ ರತ್ನಾಗಿರಿ ಜಿಲ್ಲೆಯ ಕೌಸಬಾಗ್ ಕೊಂಡವಾ ನಿವಾಸಿ, ಮೆಕ್ಯಾನಿಕಲ್ ಎಂಜಿನಿಯರ್ ಸಿಮಾಬ್ ನಸಿರುದ್ದಿನ್ ಖಾಜಿ(27)ಯನ್ನು ಬಂಧಿಸಲಾಗಿದೆ.