Advertisement

ಹಳ್ಳಿಗಳಲ್ಲಿ ಆಸ್ತಿ ಗುರುತಿಸಲು ಡ್ರೋನ್‌ ಬಳಕೆ

07:05 PM Nov 13, 2020 | Suhan S |

ಪಿರಿಯಾಪಟ್ಟಣ: ಗ್ರಾಮೀಣ ಭಾಗದಲ್ಲಿ ಮನೆ, ಗ್ರಾಮ ಠಾಣಾ, ನಿವೇಶನ ಮತ್ತಿತರ ಆಸ್ತಿಗಳನ್ನು ಡ್ರೋನ್‌ ಮೂಲಕ ನಿಖರವಾಗಿ ಅಳತೆ ಮಾಡಿ ಇವುಗಳ ಮಾಲೀಕತ್ವವನ್ನು ಗುರುತಿಸಿ ಪ್ರಾಪರ್ಟಿಕಾರ್ಡ್‌ ನೀಡಲಾಗುವುದು ಎಂದು ಶಾಸಕ ಕೆ. ಮಹದೇವ್‌ ತಿಳಿಸಿದರು.

Advertisement

ತಾಲೂಕಿನ ಪುನಾಡಹಳ್ಳಿ ಗ್ರಾಮದಲ್ಲಿ ಸ್ವಮಿತ್ವ ಯೋಜನೆಯಡಿಡ್ರೋನ್‌ಬಳಸಿ ಸರ್ವೆಕಾರ್ಯಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಪರ್ಟಿ ಕಾರ್ಡ್‌ನಲ್ಲಿ ತಮ್ಮ ಆಸ್ತಿಯ ಎಲ್ಲಾ ವಿವರಗಳನ್ನು ನಮೂದಿಸುವುದರಿಂದ ಗ್ರಾಮೀಣ ಜನರ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯ ಲಿದೆ. ಈ ಪ್ರಾಪರ್ಟಿ ಕಾರ್ಡ್‌ ಮೂಲಕ ಬ್ಯಾಂಕ್‌ ಗಳಲ್ಲಿ ವ್ಯವಹಾರ ಮಾಡಿ ಸಾಲ ಮತ್ತಿತರರ ಸೌಲಭ್ಯ ಪಡೆದುಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ನಮ್ಮ ತಾಲೂಕಿಗೆ ನೀಡಿರುವುದಕ್ಕೆ ಧನ್ಯವಾದಸಮರ್ಪಿಸಲಾಗುವುದು ಎಂದರು.

ಸ್ವಮಿತ್ವ ಯೋಜನೆಯನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಮರ್ಥವಾಗಿ ಬಳಸಿಕೊಂಡು ಗ್ರಾಮೀಣ ಜನರ ಹಲವು ವರ್ಷಗಳ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು. ಎಲ್ಲಾ ದಾಖಲಾತಿಗಳನ್ನು ಸಂರಕ್ಷಣೆ ಮಾಡಿಕೊಂಡು ಕಂದಾಯ ವಸೂಲಾತಿ ಮತ್ತು ಜನರಿಗೆ ಶೀಘ್ರದಲ್ಲಿ ಸೇವೆ ನೀಡಲು ಮುಂದಾಗಬೇಕು ಎಂದು ಸೂಚನೆ ನೀಡಿದರು. ಎಡಿಎಲ್‌ಆರ್‌ ಚಿಕ್ಕಣ್ಣ ಮಾತನಾಡಿ, ರಾಜ್ಯದಲ್ಲಿ ಒಟ್ಟು 16 ಜಿಲ್ಲೆಗಳನ್ನುಈ ಯೋಜನೆಗೆ ತೆಗೆದುಕೊಂಡಿದ್ದು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಕೂಡ ಸೇರ್ಪಡೆಯಾಗಿದೆ. ಈಗಾಗಲೇ ಕಣಗಾಲು, ಮುತ್ತೂರು, ಮಾಲಂಗಿ, ನವಿಲೂರು, ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ ಎಂದರು.ಡ್ರೋನ್‌ ಬಳಸಿ ಪ್ರಥಮವಾಗಿ ಪುನಾಡಹಳ್ಳಿ ಗ್ರಾಮದಿಂದ ಇತರೆ ಗ್ರಾಮ ಪಂಚಾಯ್ತಿಗಳಲ್ಲಿ ಸರ್ವೆ ಕಾರ್ಯಅರಂಭಿಸಲಾಗಿವುದು.ಈ ಯೋಜನೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಶ್ವೇತಾ ಎನ್‌.ರವೀಂದ್ರ, ಸರ್ವೆ ಇಲಾಖೆ ಮಂಜುನಾಥ್‌, ಎಂ.ಕೆ.ಪ್ರಕಾಶ್‌, ಆರ್‌.ಐ.ಪ್ರದೀಪ್‌, ಗ್ರಾಮಲೆಕ್ಕಿಗರಾದ ಪವಿತ್ರ, ಪಿಡಿಒ ಆನಂದ್‌, ಮುಖಂಡರಾದಅಶೋಕ್‌, ಜಲೇಂದ್ರ, ಹೊನ್ನೇಗೌಡ, ತಿಮ್ಮೇಗೌಡ,ಕರೀಗೌಡ, ರೇವಣ್ಣ, ಸ್ವಾಮಿ, ರವಿ, ಮಂಜುನಾಥ್‌, ರಘುನಾಥ್‌, ಗೋವಿಂದೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next