ಮಾವಿನ ಎಸ್ಟೇಟ್‌ನಲ್ಲಿ ಕಾಣಿಸಿಕೊಂಡ ಹುಲಿ ಪತ್ತೆಗೆ ಡ್ರೋಣ್ ಬಳಕೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಸ್ವತಃ ಸಿಎಫ್ ರವಿಶಂಕರ್ ಆನೆ ಏರಿ ಕೂಂಬಿಂಗ್ ನಡೆಸುತ್ತಿದ್ದಾರೆ.
Advertisement
ತರಗನ್ ಎಸ್ಟೇಟ್‌ನಲ್ಲಿ ಕಳೆದೊಂದು ವಾರದಿಂದ ಕಾಣಿಸಿ ಕೊಂಡಿರುವ ಹುಲಿ 3 ದನಗಳನ್ನು ತಿಂದು ಹಾಕಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಅಭಿಮನ್ಯುವಿನ ನೇತೃತ್ವದಲ್ಲಿ ಬಲರಾಮ, ಭೀಮ, ಗಣೇಶ, ದ್ರೋಣ ಆನೆಗಳ ನೆರವಿ ನಿಂದ ನಡೆಸುತ್ತಿರುವ ಕೂಂಬಿಂಗ್ ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಒಂದೆಡೆ ಸಾಕಾನೆಗಳ ಮೂಲಕ ಮತ್ತೂಂದೆಡೆ ಎರಡು ಡ್ರೋಣ್ ಕ್ಯಾಮೆರಾ ಬಳಸುತ್ತಿದ್ದರೂ ಹುಲಿ ಕಾಣಿಸಿಕೊಂಡಿಲ್ಲ. ಮುಂಜಾಗ್ರತೆಯಾಗಿ ಅರಣ್ಯದಂಚಿನ ಹಾಡಿಗಳ ಶಾಲಾ ಮಕ್ಕಳನ್ನು ಅರಣ್ಯ ಇಲಾಖೆ ವಾಹನಗಳಲ್ಲಿ ಕರೆದೊಯ್ಯಲಾಗುತ್ತಿದೆ.