Advertisement
ಇದು ಮಾಸಿಕ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಮಾತು. ದೇಶದ ನೂತನ ಡ್ರೋನ್ ನೀತಿ, ಶತಕೋಟಿ ಡೋಸ್ ಲಸಿಕೆ ಸಾಧನೆ, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ, ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬಂದಿ ಸಂಖ್ಯೆ ಹೆಚ್ಚಳ ಸೇರಿದಂತೆ ಹಲವು ವಿಚಾರಗಳ ಕುರಿತು ಅವರು ರವಿವಾರ ಮಾತನಾಡಿದ್ದಾರೆ.
Related Articles
Advertisement
ಸ್ಥಳೀಯ ಉತ್ಪನ್ನ ಖರೀದಿಸಿ: ಇದೇ ವೇಳೆ, ಹಬ್ಬದ ಸಮಯದಲ್ಲಿ ಆದಷ್ಟು ಸ್ಥಳೀಯವಾಗಿ ಉತ್ಪಾದನೆಯಾದ ವಸ್ತುಗಳನ್ನೇ ಖರೀದಿಸುವ ಮೂಲಕ ಸ್ಥಳೀಯ ಕುಶಲಕರ್ಮಿಗಳಿಗೆ ನೆರವಾ ಗುವಂತೆ ಮೋದಿ ಕರೆ ನೀಡಿದ್ದಾರೆ.
ಇದನ್ನೂ ಓದಿ:ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್: ಸಿದ್ದರಾಮಯ್ಯ
ರಂಗೋಲಿ, ಜೋಗುಳ, ದೇಶಭಕ್ತಿ ಗೀತೆ ಸ್ಪರ್ಧೆಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ದೇಶಭಕ್ತಿ ಗೀತೆ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲು ಸಂಸ್ಕೃತಿ ಸಚಿವಾಲಯ ಸಿದ್ಧತೆ ನಡೆಸಿದೆ ಎಂದ ಮೋದಿ, ಯುವಜನರು ನವಭಾರತ, ದೇಶದ ಪ್ರಸ್ತುತ ಯಶಸ್ಸು ಹಾಗೂ ಭವಿಷ್ಯದ ಬದ್ಧತೆಗೆ ಪ್ರೇರಣೆ ನೀಡುವಂಥ ಗೀತೆಗಳನ್ನು ರಚಿಸುವಂತೆ ಕರೆ ನೀಡಿದ್ದಾರೆ. ಇದೇ ವೇಳೆ, ಭಾರತದಲ್ಲಿ ಜೋಗುಳಕ್ಕೆ ತನ್ನದೇ ಆದ ವೈವಿಧ್ಯತೆಯಿದೆ. ಈ ಕಲೆಯನ್ನು ಪುನಶ್ಚೇತನಗೊಳಿಸಬೇಕಾದ ಅಗತ್ಯವಿದ್ದು, ಆ ನಿಟ್ಟಿನಲ್ಲೂ ಸ್ಪರ್ಧೆಯೊಂದನ್ನು ಆಯೋಜಿಸಲು ನಿರ್ಧರಿಸಲಾಗಿದೆ. ದೇಶಭಕ್ತಿಗೆ ಸಂಬಂಧಿಸಿದ ಜೋಗುಳಗಳನ್ನು, ಪ್ರತೀ ಮನೆಯಲ್ಲೂ ತಾಯಂದಿರು ತಮ್ಮ ಮಕ್ಕಳಿಗಾಗಿ ಸುಲಭವಾಗಿ ಹಾಡಲು ಆಗುವಂಥ ಕವಿತೆ, ಹಾಡುಗಳನ್ನೂ ರಚಿಸಿ ಎಂದೂ ಮೋದಿ ಸಲಹೆ ನೀಡಿದ್ದಾರೆ.