Advertisement

Mining: ಗಣಿ ಪ್ರದೇಶಗಳ ಡ್ರೋನ್‌ ಸರ್ವೇ, ಜಿಪಿಎಸ್‌ ಅಳವಡಿಕೆ ಕಡ್ಡಾಯ: ಪ್ರಿಯಾಂಕ್‌ ಖರ್ಗೆ

11:27 PM Sep 02, 2023 | Team Udayavani |

ಬೆಂಗಳೂರು: ಶಿಲಾ ಗಣಿಗಾರಿಕೆ ಸಂಬಂಧಿತ ಡ್ರೋನ್‌ ಸರ್ವೇ ಹಾಗೂ ಸರಕು ಸಾಗಣೆ ವಾಹನಗಳನ್ನು ಜಿಪಿಎಸ್‌ ವ್ಯವಸ್ಥೆಗೆ ಒಳಪಡಿಸುವ ಕ್ರಮವನ್ನು ಹಿಂಪಡೆಯುವುದಿಲ್ಲ ಎಂದು ಗ್ರಾಮೀಣಾ ಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದರು.

Advertisement

ವಿಕಾಸಸೌಧದಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಕಲಬುರಗಿ ಜಿಲ್ಲಾ ಗಣಿಗಾರಿಕೆ ಸಂಘವು ಈ ಎರಡು ಕ್ರಮಗಳನ್ನು ಹಿಂಪಡೆ ಯುವಂತೆ ಆಗ್ರಹಿಸಿದೆ. ಇದಕ್ಕೆ ಒಲ್ಲೆ ಎಂದ ಸಚಿವರು, ಗಣಿ ಗುತ್ತಿಗೆದಾರರು ಈ ಎರಡು ಕ್ರಮಗಳಿಗೆ ಬಾಧ್ಯಸ್ಥರಾಗಿರಬೇಕು ಎಂಬ ಗಣಿ ಮತ್ತು ಭೂವಿಜ್ಞಾನ ಇಲಾಖಾ ಅಧಿಕಾರಿಗಳ ಮಾತನ್ನು ಸಮರ್ಥಿಸಿ ದರು.ಆದರೆ ಗಣಿಗಾರಿಕೆಗೆ ಸಂಬಂಧಿಸಿ ಕಾನೂನಿನಲ್ಲಿರುವ ಇತರ ತೊಡಕುಗಳನ್ನು ನಿವಾರಿಸಿ, ನಿಯಮಗಳನ್ನು ಸರಳಗೊಳಿಸುವ ಬಗ್ಗೆ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ್‌ ಜೈನ್‌, ಗಣಿ ಉದ್ದಿಮೆಯಲ್ಲಿ ತೊಡಗಿರುವವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಗಿರೀಶ್‌ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವೀಡಿಯೋ ಸಂವಾದದ ಮೂಲಕ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ, ಜಿಲ್ಲಾ ರಕ್ಷಣಾಧಿಕಾರಿ ಇಶಾ ಪಂತ್‌ ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next