Advertisement
ರಾಜ್ಯದಲ್ಲಿ ಆರಂಭಿಕ ಹಂತದಲ್ಲಿ ದಕ್ಷಿಣ ಕನ್ನಡ ಸಹಿತ ಒಟ್ಟು 16 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. “ಸ್ವಾಮಿತ್ವ’ ಯೋಜನೆಯಡಿ ಕಂದಾಯ ಇಲಾಖೆಯ ಭೂಮಾಪಕರು ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಜಂಟಿಯಾಗಿ ಆಯ್ಕೆಯಾಗಿರುವ ಗ್ರಾಮಗಳ ಜನ ವಸತಿ ಪ್ರದೇಶದ ಪ್ರತೀ ಆಸ್ತಿಯನ್ನು ಭೂಮಾಲಕರ ಸಮ್ಮುಖದಲ್ಲಿ ಪರಿಶೀಲಿಸಿ ಗುರುತಿಸುತ್ತಾರೆ. ಬಳಿಕ ಡ್ರೋಣ್ ಆಧಾರಿತ ಸರ್ವೆ ನಡೆಸಿ ಆಸ್ತಿಗಳ ಫೋಟೋ ಸೆರೆ ಹಿಡಿಯಲಾಗುತ್ತದೆ. ಬಳಿಕ ಚಿತ್ರಗಳನ್ನು ಸಂಸ್ಕರಿಸಿ ಗುರುತಿಸಲಾದ ಆಸ್ತಿಗಳ ನಕಾಶೆ ತಯಾರಿಸಲಾಗುತ್ತದೆ. ಗ್ರಾ.ಪಂ.ಗಳಲ್ಲಿ ನಮೂದಾಗಿರುವ ದಾಖಲಾತಿಗಳ ಜತೆ ಹೊಂದಾಣಿಕೆ ಮಾಡಿ ಪರಿಶೀಲಿಸಲಾಗುತ್ತದೆ. ಬಳಿಕ ಗ್ರಾಮಸ್ಥರ ಜತೆ ಸಭೆ ನಡೆಸಿ ತಕರಾರುಗಳಿದ್ದರೆ ಇತ್ಯರ್ಥ ಪಡಿಸಲಾಗುತ್ತದೆ. ಎಲ್ಲವೂ ಸರಿಯಾದ ಬಳಿಕ ಸರಕಾರದ ದಾಖಲಾತಿಗೆ ರವಾನಿಸಲಾಗುತ್ತದೆ. ಆಗ ಹೆಸರು, ಇನ್ನಿತರ ತಿದ್ದುಪಡಿಗೂ ಅವಕಾಶವಿರುತ್ತದೆ. ಅಂತಿಮವಾಗಿ ಪ್ರಾಪರ್ಟಿ ಕಾರ್ಡ್ ನೀಡಲಾಗುತ್ತದೆ.
ಮಂಗಳೂರು ತಾಲೂಕಿನ 10 ಗ್ರಾ.ಪಂ.ಗಳ ಕರ್ನಿರೆ, ಬಳುಜೆ, ಕೊಲ್ಲೂರು, ಕವತ್ತಾರು, ಅತ್ತೂರು, ಕೈಕುಡೆ, ಕೆಮ್ರಾಲ್, ಪಂಜ, ಹಳೆಯಂಗಡಿ, ಪಾವಂಜೆ, ಸಸಿಹಿತ್ಲು, ಬೆಳ್ಳಾಯರು, 10ನೇ ತೋಕೂರು, ಪಡುಪಣಂಬೂರು, ಕಿಲ್ಪಾಡಿ, ಅತಿಕಾರಿಬೆಟ್ಟು, ಶಿಮಂತೂರು, ಐಕಳ, ಏಳಿಂಜೆ, ಉಳಿಪಾಡಿ, ಮಲ್ಲೂರು, ಉಳಾಯಿಬೆಟ್ಟು, ಮುಚ್ಚಾರು, ಕೊಂಪದವು ಸೇರಿ 24 ಗ್ರಾಮಗಳು, ಬಂಟ್ವಾಳ ತಾಲೂಕಿನ ಬರಿಮಾರು, ಸಜೀಪ ನಡು, ಬಾಳ್ತಿಲ, ಕುರ್ನಾಡು ಪೆರಾಜೆ, ಕೇಪು, ಪಿಲಾತಬೆಟ್ಟು, ಕಾವಳಮೂಡರು ಗ್ರಾ.ಪಂ.ಗಳಲ್ಲಿ, ಬೆಳ್ತಂಗಡಿಯ 8 ಗ್ರಾ.ಪಂ.ಗಳ ಸೋಣಂದೂರು, ಮಾಲಾಡಿ, ಮುಂಡಾಜೆ, ಗರ್ಡಾಡಿ, ಪಡಂಗಡಿ, ಕುಕ್ಕೇಡಿ, ನಿಟ್ಟಡೆ, ಕಾಶಿಪಟ್ಣ, ಕುಕ್ಕಳ, ಪಾರಂಕಿ, ಬೆಳಾಲು, ಉರುವಾಲು, ಪುತ್ತೂರಿನ ಬಲಾ°ಡು, ಕೆದಂಬಾಡಿ, ನಿಡ³ಳ್ಳಿ, ಪಾಣಾಜೆ, ಬಜತ್ತೂರು, ಕುಡು³ಪಾಡಿ, 34ನೇ ನೆಕ್ಕಿಲಾಡಿ, ಹಿರೇ ಬಂಡಾಡಿ, ಸುಳ್ಯದ ಕನಕಮಜಲು, ಬಾಳಿಲ, ಮುಪ್ಪೇರಿಯಾ,ಕಳಂಜ, ಉಬರಡ್ಕ ಮಿತ್ತೂರು, ಅರಂತೋಡು, ತೋಡಿಕಾನ, ಐರ್ವನಾಡು, ಪೆರುವಾಜೆ, ಕಲ್ಮಡ್ಕ,ಪಂಬೆತ್ತಾಡಿ, ಮೂಡುಬಿದಿರೆಯ ಶಿರ್ತಾಡಿ, ಪಡುಕೋಣಾಜೆ, ಮೂಡುಕೋಣಾಜೆ, ಮೂಡು ಮಾರ್ನಾಡು, ಪಡು ಮಾರ್ನಾಡು, ದರೆಗುಡ್ಡೆ, ಪಣಪಿಲ, ಕೆಲ್ಲಪುತ್ತಿಗೆ, ವಾಲ್ಪಾಡಿ, ಪಾಲಡ್ಕ, ಕಡಂದಲೆ, ತೆಂಕಮಿಜಾರು, ಬಡಗಮಿಜಾರು, ಇರುವೈಲು, ತೋಡಾರು, ಹೊಸಬೆಟ್ಟು, ಪುಚ್ಚಮೊಗರು, ಕಡಬ ತಾಲೂಕಿನ ಕೊçಲ, ಐತೂರು, ನೆಕ್ಕಿಲಾಡಿ, ಬಂಟ್ರ, ಬಿಳಿನೆಲೆ, ಕೌಕ್ರಾಡಿ, ಇಚ್ಲಂಪಾಡಿ, ನೆಲ್ಯಾಡಿ, ಶಿರಾಡಿ, ಕೊಣಾಜೆ ಗ್ರಾಮಗಳಲ್ಲಿ ಡ್ರೋಣ್ ಬಳಸಿ ಅಳತೆ ಕಾರ್ಯಕ್ಕೆ ಜಿಲ್ಲಾ ಭೂದಾಖಲೆಗಳ ಇಲಾಖೆ ಅಧಿಸೂಚನೆ ಹೊರಡಿಸಿದೆ. ಮಾರ್ಗಸೂಚಿ ಅಗತ್ಯ
ರಾಜ್ಯದಲ್ಲಿ ಈ ಹಿಂದೆ ಮದ್ರಾಸ್ ಪ್ರಾಂತಕ್ಕೆ ಒಳಪಟ್ಟಿದ್ದ ಕರಾವಳಿ ಜಿಲ್ಲೆಗಳಲ್ಲಿ ಭೂದಾಖಲೆಗಳು ಸರ್ವೆ ನಂಬರ್ ಸ್ವರೂಪದಲ್ಲಿದೆ. ಉಳಿದ ಜಿಲ್ಲೆಗಳಲ್ಲಿ ಗ್ರಾಮಠಾಣಾ ಸ್ವರೂಪ ದಲ್ಲಿದೆ. ಆದುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆಯಡಿ ಭೂದಾಖಲೆಗಳು° ಯಾವ ರೀತಿ ಸಿದ್ಧ ಪಡಿಸಬಹುದು ಎಂಬ ಬಗ್ಗೆ ಸರಕಾರದಿಂದ ಮಾರ್ಗಸೂಚಿ ಬರಬೇಕಾಗಿದೆ.
Related Articles
Advertisement
ಮಾರ್ಕಿಂಗ್ ಕಾರ್ಯ ಆರಂಭದ.ಕ. ಜಿಲ್ಲೆಯಲ್ಲಿ ಡ್ರೋಣ್ ಬಳಸಿ ಆಸ್ತಿಗಳ ಅಳತೆನಡೆಸಿ ಹಕ್ಕು ದಾಖಲೆಗಳನ್ನು ಸಿದ್ಧಪಡಿಸುವ ಯೋಜನೆ ಕಾರ್ಯಾರಂಭ ಮಾಡಿದ್ದು ಬಳುಜೆ, ಕಿಲ್ಪಾಡಿ ಗ್ರಾಮಗಳಲ್ಲಿ ಈಗಾಗಲೇ ಮಾರ್ಕಿಂಗ್ ಕಾರ್ಯ ಆರಂಭಗೊಂಡಿದೆ. ಯೋಜನೆಗೆ ಆಯ್ಕೆಯಾದ ಗ್ರಾಮಗಳ ನಾಗರಿಕರು ಅಳತೆ ಸಮಯದಲ್ಲಿ ಅಗತ್ಯ ಸಹಕಾರ ನೀಡಿ ಯೋಜನೆಯನ್ನು ಯಶಸ್ವಿಗೊಳಿಸಬೇಕು.
-ಪ್ರಸಾದಿನಿ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕರು ಕೇಶವ ಕುಂದರ್