ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -10 ಇತ್ತೀಚೆಗೆ ಮುಕ್ತಾಯ ಕಂಡಿದೆ. ಆದರೆ ವಿನ್ನರ್ – ರನ್ನರ್ ಹಾಗೂ ಇತರೆ ಫಿನಾಲೆ ಸ್ಪರ್ಧಿಗಳು ಸಂದರ್ಶನ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ.
ಬಿಗ್ ಬಾಸ್ ಬಳಿಕ ಸ್ಪರ್ಧಿಗಳು ನಾನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆಗಿ ಮಿಂಚಿದ ಡ್ರೋನ್ ಪ್ರತಾಪ್ ಅವರು ಮತ್ತೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ರೆಡಿಯಾಗಿದ್ದಾರೆ ಎನ್ನಲಾಗಿದೆ.
ʼಗಿಚ್ಚ ಗಿಲಿ ಗಿಲಿʼ ಕಾರ್ಯಕ್ರಮದ ಬಗ್ಗೆ ಕರ್ನಾಟಕದ ಜನತೆಗೆ ಗೊತ್ತೇ ಇದೆ. ಕಳೆದೆರೆಡು ಸೀಸನ್ ಗಳ ಬಳಿಕ ಇದೀಗ ಮೂರನೇ ಸೀಸನ್ ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದೆ. ಈ ಕಾರ್ಯಕ್ರಮದಲ್ಲಿ ಈ ಬಾರಿ ಹೊಸ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ. ಇದರಲ್ಲಿ ಈಗಷ್ಟೇ ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿರುವ ಸ್ಪರ್ಧಿಗಳು ಕೂಡ ಇರಲಿದ್ದಾರೆ.
ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರು ʼಗಿಚ್ಚ ಗಿಲಿ ಗಲಿ ಸೀಸನ್ -3ʼ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಹಾಸ್ಯಗಾರನಾಗಿ ಪ್ರತಾಪ್ ವೀಕ್ಷಕರ ಮನಗೆಲ್ಲಲು ರೆಡಿಯಾಗಿದ್ದಾರೆ.
ಪ್ರತಾಪ್ ಮಾತ್ರವಲ್ಲದೆ ಫಿನಾಲೆಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡ ತುಕಾಲಿ ಸಂತೋಷ್ ಹಾಗೂ ರ‍್ಯಾಪರ್ ಇಶಾನಿ ಕೂಡ ಕಾರ್ಯಕ್ರಮದ ಭಾಗವಾಗಲಿದ್ದಾರೆ ಎನ್ನಲಾಗಿದೆ.
ಈ ಬಾರಿ ಕಾರ್ಯಕ್ರಮದಲ್ಲಿ ಸಾಧುಕೋಕಿಲಾ, ಶ್ರುತಿ ಜೊತೆ ಕೋಮಲ್ ಕುಮಾರ್ ಕೂಡ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರಂಜನ್ ದೇಶಪಾಂಡೆ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಇದೇ ಫೆ. 3 ರಿಂದ ಶನಿ- ಭಾನು ರಾತ್ರಿ 8 ಗಂಟೆಗೆ ಕಾರ್ಯಕ್ರಮ ಪ್ರಸಾರ ಕಾಣಲಿದೆ.