ಹೊಸದಿಲ್ಲಿ: ಗಡಿ ಭಾಗದಲ್ಲಿ ಚೀನ ಸೇನೆಯಿಂದ ಆಗಾಗ ಆಗುವ ಗಡಿ ಉಲ್ಲಂಘನೆ, ಭಾರತೀಯ ಗಡಿಯೊಳಗೆ ಅನೌಪಚಾರಿಕ ಸೇನಾ ಶಿಬಿರಗಳಂಥ ಕಿತಾಪತಿಗಳನ್ನು ತಡೆ ಲು ಅತ್ಯಾಧುನಿಕ ಡ್ರೋನ್ ಸಿದ್ಧವಾಗಿದೆ. ಇದನ್ನು ಆಗಸಕ್ಕೆ ಚಿಮ್ಮಿಸಿ ಅದರ ಸಹಾಯದಿಂದ ಭಾರತ-ಚೀನ ಗಡಿಯ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ.
ಈ ನಿಟ್ಟಿನಲ್ಲಿ ನಿರ್ಮಾಣ ಹಂತದಲ್ಲಿರುವ ಈ ವಿಶೇಷ ಡ್ರೋನ್, ಮೂರೇ ತಿಂಗಳುಗಳಲ್ಲಿ ಕಾರ್ಯಾಚರಣೆಗೆ ಇಳಿಯಲಿದೆ.
ನಿರ್ಮಾಣ: ಇದನ್ನು ನೋಯ್ಡಾ ಮೂಲದ ನ್ಯೂ ಸ್ಪೇಸ್ ರಿಸರ್ಚ್ ಆ್ಯಂಡ್ ಟೆಕ್ನಾಲಜೀಸ್ ಎಂಬ ಹೊಸ ಸ್ಟಾರ್ಟಪ್ ಸಂಸ್ಥೆ ಅಭಿವೃದ್ಧಿ ಪಡಿಸುತ್ತಿದೆ. ಅತಿ ಎತ್ತರದಲ್ಲಿ ಕಾರ್ಯಾಚರಣೆ ನಡೆಸುವುದರಿಂದ ಈ ಮಾದರಿಯ ಡ್ರೋನ್‌ಗಳನ್ನು “ಹೈ ಅಲ್ಟಿಟ್ಯೂಡ್ ಸ್ಯೂಡೋ ಸ್ಯಾಟಲೈಟ್’ ಕರೆಯಲಾಗುತ್ತದೆ. ಇದರಲ್ಲಿ ನಾಲ್ಕು ಪಾಡ್‌ಕಾಮ್ ಅಳವಡಿಸಲಾಗಿದ್ದು ಇವುಗಳ ಸಹಾಯದಿಂದ ಡ್ರೋನ್, ಗಡಿ ಭಾಗದ ಚಟುವಟಿಕೆಗಳನ್ನು ಸ್ಥಿರ ಹಾಗೂ ವಿಡಿಯೋ ಕ್ಲಿಪ್‌ಗ್ಳ ಮಾದರಿಯಲ್ಲಿ ಕಳುಹಿ ಸುತ್ತದೆ. ಇನ್‌ಫ್ರಾರೆಡ್ ಕ್ಯಾಮೆರಾ ಸಹ ಅಳ ವಡಿಸಲಾಗಿದ್ದು, ರಾತ್ರಿಯೂ ಫೋಟೋ, ವಿಡಿಯೋ ತೆಗೆಯಲು ಸಾಧ್ಯ ಎಂದು ಸಂಸ್ಥೆ ಹೇಳಿದೆ. ಇದರ ತಯಾರಿಕೆಗೆ ವಿಮಾನ ತಯಾರಿಕಾ ಕಂಪನಿ ಬೋಯಿಂಗ್ ತಂತ್ರ ಜ್ಞಾನದ ನೆರವು ನೀಡುತ್ತಿರುವುದು ವಿಶೇಷ.
ಹೇಗಿರುತ್ತೆ ಕಾರ್ಯವೈಖರಿ?
2019ರಿಂದ ಈ ಡ್ರೋನ್‌ಗಳ ಸೇವೆ ಸಿಗ ಲಿದೆ. ಅರುಣಾಚಲದ ತವಾಂಗ್ ಪಟ್ಟಣ ಮೇಲೆ ಇಂಥ ಡ್ರೋನ್ ನಿಲ್ಲಿಸಿದರೆ, 200 ಕಿ.ಮೀ. ದೂರದ ಟಿಬೆಟ್ ಗಡಿ ಕಡೆ ಯಿಂದ ಚೀನ ಸೈನ್ಯ ನಡೆಸುವ ಎಲ್ಲಾ ಚಟುವಟಿಕೆಗಳ ಮೇಲೂ ಇದು ಹದ್ದಿನ ಕಣ್ಣಿಡಲಿದೆ. ಒಮ್ಮೆ ಆಕಾಶಕ್ಕೆ ನೆಗೆದರೆ 2 ವಾರ ಸ್ಥಿರವಾಗಿ ನಿಂತು, 65 ಸಾವಿರ ಕಿ.ಮೀ. ಎತ್ತರದಲ್ಲಿ ಗಡಿ ಕಾಯಬಲ್ಲದು.