Advertisement
ಮೂವತ್ತು ಸುತ್ತುಗಳಷ್ಟು ಸಜೀವ ಗುಂಡುಗಳು, ಎ.ಕೆ.ರೈಫಲ್, ಎ.ಕೆ. ರೈಫಲ್‌ನ 3 ಮ್ಯಾಗಜಿನ್‌ಗಳು, ಟೆಲೆಸ್ಕೋಪ್‌ಗಳು ಸ್ಥಳದಲ್ಲಿ ಪತ್ತೆಯಾಗಿವೆ. ಅಂತಾರಾಷ್ಟ್ರೀಯ ಗಡಿ ಪ್ರದೇಶದಿಂದ ಕೇವಲ ಆರು ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ. ಯಾವುದೋ ಹಾರುವ ವಸ್ತುವಿನ ಮೂಲಕ ಬ್ಯಾಗ್ ಒಂದನ್ನು ಎಸೆಯಲಾಗಿದೆ ಎಂದು ಗ್ರಾಮಸ್ಥರು ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದರು. ಅದನ್ನು ಆಧರಿಸಿ ಶೋಧ ಕಾರ್ಯ ನಡೆಸಿದಾಗ ಬ್ಯಾಗ್ ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದನ್ ಕೋಹ್ಲಿ ತಿಳಿಸಿದ್ದಾರೆ.
Related Articles
Advertisement
ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆಯ ಕೇಂದ್ರಕ್ಕೆ ಡ್ರೋನ್ ಮೂಲಕ ಎರಡು ಬಾಂಬ್‌ಗಳನ್ನು ಹಾಕಿ ದಾಳಿ ನಡೆಸುವ ಪ್ರಯತ್ನ ನಡೆಸಲಾಗಿತ್ತು. ಇದಾದ ಬಳಿಕ ಎಲ್‌ಒಸಿ ಮತ್ತು ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹಿಂದಿನ ಪ್ರಮುಖ ಡ್ರೋನ್ ಘಟನೆಗಳು :– ಆ.23- ಅರ್ನಿಯಾ ಸೆಕ್ಟರ್‌ನಲ್ಲಿ ಕಂಡಿದ್ದ ಡ್ರೋನ್ ಅನ್ನು ಬಿಎಸ್‌ಎಫ್ ಹೊಡೆದು ಉರುಳಿಸಿದ್ದರು.
– ಜು.24- ಅಖೂ°ರ್ ಸೆಕ್ಟರ್‌ನಲ್ಲಿ 5 ಕೆಜಿ ಶಸ್ತ್ರಾಸ್ತ್ರ ಹೊಂದಿದ್ದ ಯುಎವಿಗೆ ಗುಂಡು
– 360- 2019ರಿಂದ ಪಾಕಿಸ್ತಾನ ಕಳುಹಿಸಿದ ಯುಎವಿ