ಗೌರಿಬಿದನೂರು: ಡ್ರೋಣ್ ಮೂಲಕ ಔಷಧಿ, ಮಾತ್ರೆ ಮತ್ತು ರಕ್ತವನ್ನುಪೂರೈಸುವ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದ್ದು, ಈ ಕುರಿತುಶೀಘ್ರವೇ ಸರ್ಕಾರಕ್ಕೆವರದಿ ಸಲ್ಲಿಸಲಾಗುತ್ತದೆ.
ಶಂಭೂಕ ನಗರದಲ್ಲಿ(ಬಿವಿಎಲ್‌ಒಎಸ್)ಡ್ರೋಣ್ ಪ್ರಯೋಗಕ್ಕೆಟಿಎಎಸ್ ಡ್ರೋಣ್‌ಪ್ರಯೋಗ ಹಾಗೂಅನ್ವೇಷನಾ ಸಂಸ್ಥೆಯಮುಖ್ಯ ಹಣಕಾಸುನಿರ್ವಹಣಾ ಧಿಕಾರಿಗಿರೀಶ್‌ರೆಡ್ಡಿ ಚಾಲನೆನೀಡಿದರು. ರಕ್ತ, ಮಾತ್ರೆ, ಔಷಧಿಯನ್ನು ಹೊತ್ತ ಡ್ರೋಣ್15 ಕಿ.ಮೀ.ಹಾಗೂ 12 ಕಿ.ಮೀ.ವರೆಗೂ ಹಾರಾಟ ನಡೆಸಿತು.
ಪ್ರಯೋಗ ನಡೆಸಿದನಂತರ ಸುದ್ದಿಗಾರರೊಂದಿಗೆಮಾತನಾಡಿ,ಈ ಪ್ರಯೋಗವನ್ನುನಡೆಸಲುವಿಮಾನಯಾನ ಇಲಾಖೆಯ ಪ್ರಧಾನ ನಿರ್ದೇಶಕರಿಂದ ಅನುಮತಿಪಡೆಯಲಾಗಿತ್ತು.
ಔಷಧಿಯನ್ನು ತುರ್ತುಪರಿಸ್ಥಿತಿಯಲ್ಲಿಕೊಂಡೊಯ್ಯಬಹುದಾಗಿದೆ. ಈ ಪ್ರಯೋಗವನ್ನು ನೂರು ಬಗೆಯಲ್ಲಿ ಮಾಡಿ ಅದನ್ನುಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್ ಪ್ರಧಾನ ನಿರ್ದೇಶಕರಿಗೆಕಳುಹಿಸಲಾಗುವುದು ಎಂದು ವಿವರಿಸಿದರು.
ಆ ನಂತರ ಸರ್ಕಾರ ನಮ್ಮಪ್ರಯೋಗದ ವಿವರಗಳನ್ನು ಗಮನಿಸಿ ಇದರ ಉಪಯೋಗವನ್ನು ರಕ್ಷಣಾಇಲಾಖೆ ಹಾಗೂ ಆಸ್ಪತ್ರೆಗಳಿಗೆ ತುರ್ತು ಔಷಧಿ ಹಾಗೂ ರಕ್ತವನ್ನುಸರಬರಾಜು ಮಾಡಿಕೊಳ್ಳಲುಅನುಮತಿ ನೀಡಬಹುದು ಎಂದರು.