Advertisement
ತಾಲೂಕಿನ ಸೋಲದೇವನಹಳ್ಳಿಯ ವೈದ್ಯ ರತ್ನ ಲಕ್ಷ್ಮಮ್ಮ ಗಂಗಣ್ಣ ಸರ್ಕಾರಿ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಂ.ಜನಾರ್ದನ್ ಹಾಗೂ ಎಂ.ಆರ್ ಮಧುಕುಮಾರ್ ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅನುಕೂಲವಾಗಲು ಸೈಕಲ್ ಮತ್ತು ಡ್ರೋಣ್‌ಬಳಸಿ ಕೀಟನಾಶಕ ಸಿಂಪಡಿಸುವ ಹೊಸ ವಿಧಾನವನ್ನು ಪರಿಚಯಿಸಿದ್ದಾರೆ.
Related Articles
Advertisement
ಬಿತ್ತನೆ ಬೀಜಗಳನ್ನು ಬಿತ್ತನೆ ಮಾಡಲು, ಔಷಧಿ ತಯಾರಿಸುವ ಜೊತೆಗೆ ಕೀಟ ಬಾಧೆ ಯಿಲ್ಲದೇ ರೈತರು ನೆಮ್ಮದಿಯಿಂದ ಇರು ಬಹುದಾದ ಎಲ್ಲಾ ವಿಧಾನಗಳನ್ನು ಅಳವಡಿ ಸಲಾಗಿದೆ. ಈ ಕೀಟನಾಶಕ ಸಿಂಪಡಿಸುವ ಸೈಕಲ್ ತಯಾರಿಕೆಗೆ ವಿದ್ಯಾರ್ಥಿಗಳು ಕೇವಲ 5 ಸಾವಿರ ರೂ. ಖರ್ಚು ಮಾಡಿದ್ದು, ಹೆಚ್ಚು ಹಳೇ ವಸ್ತುಗಳನ್ನು ಬಳಸಿ ಸೈಕಲ್ ತಯಾರಿಸಿ ದ್ದಾರೆ. ಈ ನೂತನ ಪ್ರಯೋಗ ರೈತ ಸಮು ದಾಯಕ್ಕೆ ಬಹಳಷ್ಟು ಅನುಕೂಲಕರವಾಗಿದೆ ಎನ್ನುತ್ತಾನೆ ವಿದ್ಯಾರ್ಥಿ ಎಂ.ಜನಾರ್ದನ್
ಏನಿದು ಡ್ರೋಣ್?: ಜಗತ್ತಿನಲ್ಲಿ ಡ್ರೋಣ್ ಎಂದಾಕ್ಷಣ ಕ್ಯಾಮರಾ ನೆನಪಿಗೆ ಬರುತ್ತದೆ. ಆದರೆ, ಡ್ರೋಣ್ ಕೇವಲ ವೀಡಿಯೋ ಮತ್ತು ಫೋಟೋ ತೆಗೆಯಲು ಮಾತ್ರವಲ್ಲ ನಮ್ಮ ರಾಜ್ಯದ ಪ್ರತಾಪ್ ಏರ್ ಆ್ಯಂಬುಲೆನ್ಸ್ ರೀತಿಯಲ್ಲಿ ವಿನ್ಯಾಸಗೊಳಿಸಿ ಜಗತ್ತು ನಿಬ್ಬೆರ ಗಾಗುವಂತೆ ಮಾಡಿದ್ದ. ಆದರೆ, ಸರ್ಕಾರಿ ಶಾಲೆಯ ರೈತರ ಮಕ್ಕಳು ಡ್ರೋಣ್ ಬಳಸಿ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಬಹುದು, ಬಿತ್ತನೆ ಮಾಡಬಹುದು, ಬೆಂಕಿ ನಂದಿಸಬ ಹುದು ಎಂಬುದನ್ನು ಜಗತ್ತಿಗೆ ತಿಳಿಸಲು ಸಿದ್ಧರಾಗಿದ್ದಾರೆ.
ವಿದ್ಯಾರ್ಥಿಗಳು ತಯಾರಿಸಿ ರುವ ಮಾದರಿ ಡ್ರೋಣ್ ಒಂದು ಲೀಟರ್ ನೀರನ್ನು ಮೇಲೆತ್ತುವ ಸಾಮರ್ಥ್ಯ ಹೊಂದಿ ದ್ದು, ದ್ರಾಕ್ಷಿ ತೋಟ, ಕಾಫಿ, ತೆಂಗಿನ ಮರ ಹಾಗೂ ತೀರಾ ಎತ್ತರದ ಮರಗಳಿಗೆ ಕೀಟ ನಾಶಕ ಸಿಂಪಡಿಸಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ಡ್ರೋಣ್‌ತಯಾ ರಿಸಲು 13 ಸಾವಿರ ರೂ.ಖರ್ಚು ಮಾಡ ಲಾಗಿದೆ. ಅಗ್ನಿಶಾಮಕ ದಳದವರು ಸಹ ಈ ಡ್ರೋಣ್‌ಬಳಸಬಹುದು. ಡ್ರೋಣ್ ಸಾಮ ರ್ಥ್ಯಕ್ಕೆ ಅನುಗುಣವಾಗಿ ನೀರಿನ ಶೇಖರಣೆ ಮಾಡಬಹುದು ಎನ್ನುತ್ತಾನೆ ವಿದ್ಯಾರ್ಥಿ ಎಂ.ಆರ್.ಮಧುಕುಮಾರ್
ಶಿಕ್ಷಕರ ಪ್ರೋತ್ಸಾಹ: ಸೋಲದೇವನಹಳ್ಳಿ ವೈದ್ಯರತ್ನ ಲಕ್ಷ್ಮಮ್ಮ ಗಂಗಣ್ಣ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ಎಂ.ಜನಾರ್ದನ್ ತಂದೆ ಮುನಿರಾಜು, ತಾಯಿ ಲಕ್ಷ್ಮಿದೇವಿ ಮತ್ತೂಬ್ಬ ವಿದ್ಯಾರ್ಥಿ ಎಂ.ಆರ್.ಮಧು ಕುಮಾರ್ ತಂದೆ ರಾಮಕೃಷ್ಣ, ತಾಯಿ ಯಶೋಧಾ ಹಾ ಗೂ ಶಾಲೆ ವಿಜ್ಞಾನ ಶಿಕ್ಷಕಿ ಬಿ.ಎಸ್. ಪುಷ್ಪಾ, ಮುಖ್ಯ ಶಿಕ್ಷಕಿ ಟಿ. ದೇವಿಕಾ ಸೇರಿದಂತೆ ಶಾಲೆ ಎಲ್ಲಾ ಶಿಕ್ಷಕರು, ಸ್ನೇಹಿತರು ಪ್ರೋತ್ಸಾಹ ನೀಡುವ ಮೂಲಕ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಬೆನ್ನೆಲುಬಾಗಿದ್ದಾರೆ.
ಆಶ್ಚರ್ಯ: ವಿದ್ಯಾರ್ಥಿಗಳ ಪ್ರತಿಭೆಯ ಪರಿಚ ಯಕ್ಕಾಗಿ ಸರ್ಕಾರದ ಇಲಾಖೆಗಳಿಂದ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಆದರೆ, ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದ ಪ್ರಮಾ ಣ ಮಕ್ಕಳಿಗೆ ಒಂದು ಹೊತ್ತಿನ ಊಟಕ್ಕೂ ಸಾಕಾ ಗುವುದಿಲ್ಲ. ಇದೇ ಸರ್ಕಾರಿ ಪ್ರೌಢಶಾಲೆಯ ಜನಾರ್ದನ್ ಮತ್ತು ಮಧು ಕುಮಾರ್ ತಾಲೂ ಕು ಮಟ್ಟದಲ್ಲಿ ಗೆದ್ದಾಗ 50 ರೂ. ಬಹುಮಾನ ನೀಡಿ ದ್ದರಂತೆ.
ಜಿಲ್ಲಾ ಮಟ್ಟದಲ್ಲಿ 500 ರೂ., ರಾಜ್ಯ ಮಟ್ಟದಲ್ಲಿ 1,500 ರೂ., ದಕ್ಷಿಣ ವಲ ಯದಲ್ಲಿ 2 ಸಾವಿರ ರೂ.ಬಹುಮಾನ ವಾಗಿ ನೀಡಿದ್ದಾರೆ. ಸಾವಿರ ರೂ. ಖರ್ಚು ಮಾಡಿ ಮಾದರಿ ತಯಾರಿಸಿದ ವಿದ್ಯಾರ್ಥಿಗಳಿಗೆ ನೀ ಡುವ ಬಹುಮಾನ ಅವರ ಬಸ್ ಚಾರ್ಜ್‌ಗೂ ಸಾಕಾಗದಿರುವುದು ಆಶ್ಚರ್ಯವೇ ಸರಿ. ಈಗ ಲಾದರೂ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳ ಪರಿಸ್ಥಿತಿ ತಿಳಿದು ಬಹುಮಾನದ ಪ್ರಮಾಣ ಹೆಚ್ಚಿಸಿ ಪ್ರೋತ್ಸಾಹ ನೀಡಿದರೆ ಅನುಕೂಲ ವಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.
* ಕೊಟ್ರೇಶ್.ಆರ್