Advertisement
ಕೇಂದ್ರ ಕೃಷಿ, ಗ್ರಾಮೀಣಾಭಿವೃದ್ಧಿ, ರಸಗೊಬ್ಬರ, ವಿಮಾನಯಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳ ಸಮಿತಿ ಇದರ ಮೇಲ್ವಿಚಾರಣೆ ನಡೆಸಲಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಸ್ವ-ಸಹಾಯ ಸಂಘಗಳಿಗೆ ಡ್ರೋನ್ ಮತ್ತು ಅದರ ಪರಿಕರಗಳ ಖರೀದಿಗೆ ಶೇ.80 ರಷ್ಟು ಹಣವನ್ನು ಕೇಂದ್ರ ನೀಡಲಿದೆ. ಅದು ಗರಿಷ್ಠ 8 ಲಕ್ಷ ರೂ.ಗಳಾಗಿರಲಿದೆ. ಇದಕ್ಕಿಂತಲೂ ಹೆಚ್ಚಿನ ಮೊತ್ತದ ಡ್ರೋನ್ ಖರೀದಿಸಿದರೆ ರಾಷ್ಟ್ರೀಯ ಕೃಷಿ ಮೂಲಸೌಕರ್ಯ ಹಣಕಾಸು ಸೌಲಭ್ಯದ (ಎಐಎಫ್) ಅನ್ವಯ ಶೇ.3ರ ಬಡ್ಡಿದರಲ್ಲಿ ಸಾಲ ಪಡೆಯಬಹುದಾಗಿದೆ. ಇದಲ್ಲದೇ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅನ್ವಯವಿರುವ ಇತರೆ ಯೋಜನೆಗಳ ಮೂಲಕವೂ ಸ್ವಸಹಾಯ ಗುಂಪುಗಳು ಸಾಲ ಪಡೆಯಬಹುದಾಗಿದೆ.
ಯೋಜನೆ ಅನ್ವಯ ಬರೀ ಡ್ರೋನ್ಗಳನ್ನು ಮಾತ್ರ ಪೂರೈಸುವುದಲ್ಲ ಬದಲಿಗೆ ಪ್ಯಾಕೇಜ್ ರೂಪದಲ್ಲಿ ರಸಗೊಬ್ಬರ, ಕೀಟನಾಶಕ ಸಿಂಪಡಿಸುವ ಸ್ಪ್ರೆà, ಡ್ರೋನ್ ಸಾಗಿಸುವ ಬಾಕ್ಸ್, 4 ಸ್ಟಾಂಡರ್ಡ್ ಬ್ಯಾಟರಿ ಸೆಟ್, ಬ್ಯಾಟರಿ ಚಾರ್ಜರ್, ಕೆಮರಾ, ಎನಿಮೋಮೀಟರ್, ಪಿಎಚ್ ಮೀಟರ್ ಸೇರಿದಂತೆ ಎಲ್ಲಾ ವಸ್ತು ಗಳನ್ನೂ ಪೂರೈಸಲಾಗುವುದು. ಜತೆಗೆ 1 ವರ್ಷದ ವ್ಯಾರಂಟಿಯನ್ನೂ ನೀಡಲಾಗುತ್ತದೆ. ಏನಿದು ಡ್ರೋನ್ ದೀದಿ?
ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅನ್ವಯ 1261 ಕೋಟಿ ರೂ.ವೆಚ್ಚದಲ್ಲಿ ನಮೋ ಡ್ರೋನ್ ದೀದಿ ಯೋಜನೆ ಘೋಷಿಸ ಲಾಗಿದ್ದು, ಮಹಿಳಾ ಸಂಘಗಳು ಈ ಡ್ರೋನ್ ಖರೀದಿಸಿ ರೈತರಿಗೆ ಬಾಡಿಗೆ ನೀಡಬಹುದು.
Related Articles
ಸಂಘದ ಒಬ್ಬರಿಗೆ 15 ದಿನ ತರಬೇತಿ
1 ವರ್ಷದ ವಿಮೆ, 2 ವರ್ಷ ನಿರ್ವಹಣೆ
ಡ್ರೋನ್ ರಿಪೇರಿ, ಫಿಟ್ಟಿಂಗ್ ತರಬೇತಿ
ರಸಗೊಬ್ಬರ ಕಂಪೆನಿಗಳಿಂದ ಸಮನ್ವಯ
ರಾಜ್ಯದಿಂದಲೂ ಮೇಲ್ವಿಚಾರಣೆ
ಕಾರ್ಯಾಚರಣೆ ಟ್ರ್ಯಾಕ್ಗೆ ಪೋರ್ಟಲ್
Advertisement