Advertisement

ಇಡೀ ಶಿವಮೊಗ್ಗ ನಗರಕ್ಕೆ ಡ್ರೋಣ್‌ ಕಣ್ಗಾವಲು : 4 ತಂಡಗಳ ಮೂಲಕ 7 ಕ್ಯಾಮೆರಾ ಕಾರ್ಯನಿರ್ವಹಣೆ

01:36 PM Feb 24, 2022 | Team Udayavani |

ಶಿವಮೊಗ್ಗ: ತೆರೆಮರೆಯಲ್ಲಿ ಕುಳಿತು ನಗರದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿರುವ ಸಮಾಜಘಾತುಕ ಶಕ್ತಿಗಳ ಮೇಲೆ ಜಿಲ್ಲಾಡಳಿತವು ಡ್ರೋಣ್‌ ಕಣ್ಗಾವಲು ನೆಟ್ಟಿದೆ. ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬೆನ್ನಲ್ಲೇ ನಗರದಲ್ಲಿ ಶುರುವಾದ ಹಿಂಸಾಚಾರ ಹಾಗೂ ಗಲಭೆ ಹತ್ತಿಕ್ಕಲು ಸಿವಿಲ್‌ ಪೊಲೀಸ್‌ ಜತೆಗೆ ಕೆಎಸ್‌ಆರ್‌ಪಿ, ಡಿಎಆರ್‌, ಆರ್‌ಎಎಫ್‌ ತುಕಡಿಗಳನ್ನು ಶಿವಮೊಗ್ಗ ನಗರಕ್ಕೆ ಕರೆಸಿಕೊಳ್ಳಲಾಗಿದೆ. ರಕ್ಷಣಾ ಪಡೆಯ ಅಷ್ಟೂ ಸಿಬ್ಬಂದಿಯನ್ನು ಆಯಕಟ್ಟಿನ ಜಾಗಗಳಿಗೆ ನಿಯೋಜನೆ ಮಾಡಲಾಗಿದೆ.

Advertisement

ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆಯೇ ಇರುವ ಕಾರಣಕ್ಕೆ ಈಗ ತೆರೆಮರೆಯಲ್ಲಿ ಕುಳಿತು ಗಲಭೆ-ದೊಂಬಿಗೆ ಮುಂದಾಗುವ ಸಮಾಜಘಾತುಕ ಶಕ್ತಿಗಳನ್ನು ತಕ್ಷಣದಲ್ಲಿಯೇ ಪತ್ತೆ ಹಚ್ಚಲು ಇಡೀ ಶಿವಮೊಗ್ಗ ನಗರದ ಮೇಲೆಯೇ ಡ್ರೋಣ್‌ ಕಣ್ಗಾವಲಿರಿಸಿದೆ.  ಎನ್‌ಎಫ್‌ ಕಾರ್ಕಳ, ಕರಾವಳಿ ರಕ್ಷಣಾ ಪಡೆ, ಮಂಡ್ಯ ಹಾಗೂ ಉತ್ತರ ಕನ್ನಡದಿಂದ ಬಂದಿರುವ ನಾಲ್ಕು ತಂಡಗಳಲ್ಲಿ ಇಪ್ಪತ್ತಕ್ಕೂ ತಜ್ಞ ಪೊಲೀಸರಿದ್ದು, 7 ಡ್ರೋಣ್‌ ಕ್ಯಾಮೆರಾಗಳು ಶಿವಮೊಗ್ಗ ನಗರದ ಮೇಲೆ ನಿಗಾ ವಹಿಸಿವೆ. ಯಾವುದೇ ಬೀದಿ, ರಸ್ತೆ ಅಥವಾ ಸಂದಿ-ಗೊಂದಿಗಳಲ್ಲಿ ಕುಳಿತು ಗಲಭೆಗೆ-ದೊಂಬಿಗೆ ಯಾರೇ ಸಿದ್ಧತೆ ನಡೆಸಿದರೂ ಅದನ್ನು ಡ್ರೋಣ್‌ ಕ್ಯಾಮೆರಾ ಪತ್ತೆ ಹಚ್ಚಲಿದೆ.

ನಗರದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣದ ಎದುರಿನ ಅಶೋಕ ವೃತ್ತದ ಬಳಿ ಬುಧವಾರ ಬೆಳಗ್ಗೆ ಈ ಡ್ರೋಣ್‌ ಕ್ಯಾಮೆರಾಗಳ ಪ್ರಾಯೋಗಿಕ ಪರಿಶೀಲನೆ ನಡೆದಿದೆ. ಡಿಸಿ ಡಾ|
ಸೆಲ್ವಮಣಿ ಹಾಗೂ ಎಸ್‌ಪಿ ಲಕ್ಷ್ಮಿ ಪ್ರಸಾದ್‌ ಡ್ರೋಣ್‌ ಕಾರ್ಯಾಚರಣೆ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಅಡ್ಡಿ : ಇಂಟಿರಿಯರ್‌ ಡಿಸೈನರ್‌ ಸೆಂಟರ್‌ ಮಾಲೀಕನ ಅಪಹರಣ

26ರವರೆಗೂ ಕರ್ಫ್ಯೂ ವಿಸ್ತರಣೆ
ಶಿವಮೊಗ್ಗ: ನಗರದಾದ್ಯಂತ ಫೆ.26ರವರೆಗೆ ಕರ್ಫ್ಯೂ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಡಾ| ಕೆ. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶುಕ್ರವಾರ ದವರೆಗೆ ಕರ್ಫ್ಯೂ ವಿಸ್ತರಣೆ ಮಾಡಲಾಗಿತ್ತು. ಆದರೆ ಅದನ್ನು ಶನಿವಾರ ಬೆಳಗ್ಗೆ 9 ಗಂಟೆಯವರೆಗೆ ಕಪ್ಯೂì ವಿಸ್ತರಣೆ ಮಾಡಿದ್ದಾರೆ. ಕರ್ಫ್ಯೂ ಜಾರಿಯಲ್ಲಿರುವ ಅವಧಿಯಲ್ಲಿ ಶಾಲೆ,
ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next