Advertisement
ಕಚ್ಚಾ ತೈಲ ಹೊತ್ತೂಯ್ಯುತ್ತಿದ್ದ ಎಂವಿ ಸಾಯಿಬಾಬಾ ಹೆಸರಿನ ಹಡಗು ಮತ್ತು ಎಂ.ವಿ. ಬ್ಲಾಮನೇನ್ ಎಂಬ ಹಡಗುಗಳ ಮೇಲೆ ಬಂಡುಕೋರರು ಡ್ರೋನ್ ದಾಳಿ ನಡೆಸಿದ್ದರು. ಈ ವೇಳೆ ಎರಡೂ ನೌಕೆಗಳು ತಾವು ಅಪಾಯದಲ್ಲಿದ್ದೇವೆ ಎಂಬ ಸಂದೇಶವನ್ನು ಅಮೆರಿಕದ ನೌಕಾಪಡೆಗಳ ಕೇಂದ್ರ ಕಮಾಂಡ್‌ಗೆ ಕಳುಹಿಸಿದ್ದವು. ಬ್ಲಾಮನೇನ್ ಹಡಗು ನಾರ್ವೆ ಧ್ವಜವನ್ನು ಹೊಂದಿದ್ದರೆ, ಸಾಯಿಬಾಬಾ ಭಾರತದ ಧ್ವಜ ಹೊಂದಿದೆ. ಹೀಗಾಗಿ ಸಾಯಿಬಾಬಾ ಹಡಗು ಭಾರತದ್ದು ಎಂದು ಅಮೆರಿಕ ನೌಕಾಪಡೆ ಹೇಳಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿದ ಭಾರತದ ನೌಕಾಪಡೆ, “ಎಂವಿ ಸಾಯಿಬಾಬಾ ಹಡಗು ಭಾರತದ್ದಲ್ಲ. ಅದು ಮಧ್ಯ ಆಫ್ರಿಕಾದ ಗ್ಯಾಬನ್ ದೇಶಕ್ಕೆ ಸೇರಿದ್ದು. ಆದರೆ ಈ ಹಡಗು ಭಾರತದ ಶಿಪ್ಪಿಂಗ್ ನೋಂದಣಿ ಕೇಂದ್ರದಿಂದ ಪ್ರಮಾಣಪತ್ರ ಪಡೆದಿದೆ ಅಷ್ಟೆ’ ಎಂದು ಹೇಳಿದೆ. ಜಗತ್ತಿನ ಯಾವುದೇ ಹಡಗು ಯಾವುದೇ ದೇಶದ ನೋಂದಣಿ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆಯಬಹುದಾಗಿದೆ.
ಅರಬ್ಬೀ ಸಮುದ್ರದಲ್ಲಿ ಶನಿವಾರ ಮಂಗಳೂರಿಗೆ ಕಚ್ಚಾ ತೈಲ ಹೊತ್ತು ತರುತ್ತಿದ್ದ ಹಡಗಿನ ಮೇಲೆ ನಡೆದ ಡ್ರೋನ್ ದಾಳಿ ಕುರಿತು ಭಾರತೀಯ ನೌಕಾಪಡೆ ತನಿಖೆ ಆರಂಭಿಸಿದೆ. 20 ಮಂದಿ ಭಾರತೀಯ ಸಿಬ್ಬಂದಿಯಿದ್ದ ಎಂವಿ ಚೆಮ್ ಫ್ಲುಟೋ ಹಡಗು ಸದ್ಯ ಸುರಕ್ಷಿತವಾಗಿದ್ದು, ಭಾರತೀಯ ಕರಾವಳಿ ರಕ್ಷಕ ಪಡೆಯ ಐಸಿಜಿಎಸ್ ವಿಕ್ರಂ ನೌಕೆಯ ಭದ್ರತೆಯೊಂದಿಗೆ ಅದು ಈಗ ಮುಂಬೈ ಕರಾವಳಿಯತ್ತ ಸಂಚರಿಸಲು ಆರಂಭಿಸಿದೆ. ಡ್ರೋನ್ ದಾಳಿ ನಡೆಸಿದ್ದು ಯಾರು, ಹೇಗೆ ಎಂಬ ಬಗ್ಗೆ ನೌಕಾಪಡೆ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
– 2 ಸರಕು ಹಡಗುಗಳ ಮೇಲೆ ಬಂಡುಕೋರರಿಂದ ದಾಳಿ.
– ತೊಂದರೆಗೆ ಒಳಾಗದವರಿಂದ ಅಮೆರಿಕ ನೌಕಾಪಡೆಗೆ ಸಂದೇಶ ರವಾನೆ
– ಅಮೆರಿಕ ಸರ್ಕಾರದಿಂದ ಒಂದು ಹಡಗು ಭಾರತದ್ದು ಎಂದು ಹೇಳಿಕೆ
– ಹೇಳಿಕೆ ನಿರಾಕರಿಸಿದ ಕೇಂದ್ರ ಸರ್ಕಾರ; ಹಡಗು ಗ್ಯಾಬನ್ ದೇಶದ್ದು ಎಂದು ಸ್ಪಷ್ಟನೆ
Advertisement