Advertisement

ಅರ್ಜುನನನ್ನು ಅದ್ವಿತೀಯ ಬಿಲ್ಲುಗಾರನಾಗಿಸಿದ ದ್ರೋಣಾಚಾರ್ಯರು

10:56 AM Sep 21, 2017 | Team Udayavani |

ಪಾಂಡವ- ಕೌರವರಿಗೆ ಕೃಪಾಚಾರ್ಯರು ಗುರುಗಳಾಗಿದ್ದರಷ್ಟೆ. ಆದರೆ ಭೀಷ್ಮರಿಗೆ ತನ್ನ ವಂಶದ ರಾಜಕುಮಾರರಿಗೆ ಬಹು ಪ್ರತಿಭಾವಂತ ಗುರುಗಳಿಂದ ಶಿಕ್ಷಣ ಕೊಡಿಸಬೇಕೆಂದು ಆಸೆ.

Advertisement

ಒಮ್ಮೆ ರಾಜಕುಮಾರರು ಚಿಣ್ಣಿ ಆಟ ಆಡುತ್ತಿದ್ದರು. ಹತ್ತಿರ ಒಂದು ಬಾವಿ ಇತ್ತು.ಚಿಣ್ಣಿಯು ಹಾರಿ ಅದರಲ್ಲಿ ಬಿದ್ದಿತು. ಹುಡುಗರು ಅದನ್ನು ಹೇಗೆ ತೆಗೆದುಕೊಳ್ಳಬೇಕೆಂದು ತಿಳಿಯದೆ ನಿಂತಿದ್ದರು. ಆ ಹೊತ್ತಿಗೆ ಒಬ್ಬ ದಭೆìಯನ್ನು ಮಂತ್ರಿಸಿ ಬಿಟ್ಟ. ಅದು ಚಿಣ್ಣಿಯನ್ನು ಹಿಡಿದುಕೊಂಡಿತು. ಅವನು ಮತ್ತೂಂದು ದಭೆìಯನ್ನು ಬಿಟ್ಟ. ಅದು ಮೊದಲನೆಯ ದಭೆìಯನ್ನು ಹಿಡಿದುಕೊಂಡಿತು. ಹೀಗೆಯೇ ಹಲವು ದಭೆìಗಳನ್ನು ಬಿಟ್ಟು ಚಿಣ್ಣಿಯನ್ನು ತೆಗೆದ. ಈ ವಿಷಯ ಭೀಷ್ಮರಿಗೆ ತಿಳಿದಾಗ ಅವರು ಈ ಬ್ರಾಹ್ಮಣನು ಪ್ರಸಿದ್ಧ ಶಸ್ತ್ರಾಸ್ತ್ರ ಗುರು ದ್ರೋಣರೇ ಇರಬೇಕೆಂದು ಅವರನ್ನು ಅರಮನೆಗೆ ಕರೆಸಿದರು. ದ್ರೋಣರು ತಮ್ಮ ಕತೆಯನ್ನು ಹೇಳಿದರು.

ದ್ರೋಣರೂ ಪಾಂಚಾಲ ದೇಶದ ರಾಜಕುಮಾರ ದ್ರುಪದನೂ ಅಗ್ನಿವೇಸ್ವ ಮಹರ್ಷಿಗಳಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದ್ದರು. ದ್ರುಪದನು ದ್ರೋಣರಿಗೆ ತಾನು ರಾಜನಾದಾಗ ತನ್ನ ಎಲ್ಲ ಭಾಗ್ಯವನ್ನೂ ಅವರೊಡನೆ ಹಂಚಿಕೊಳ್ಳುವುದಾಗಿ ಮಾತು ಕೊಟ್ಟ. ವಿದ್ಯಾಭ್ಯಾಸ ಮುಗಿದ ಮೇಲೆ ಇಬ್ಬರೂ ತಮ್ಮ ಮನೆಗಳಿಗೆ ಹೋದರು. ಕಾಲಕ್ರಮದಲ್ಲಿ ದ್ರುಪದನು ರಾಜನಾದ. ದ್ರೋಣರು ಕಷ್ಟದಲ್ಲಿದ್ದರು. ದ್ರುಪದನ ಅರಮನೆಗೆ ಹೋಗಿ ತಾವು ಅವನ ಬಾಲ್ಯ ಸ್ನೇಹಿತನೆಂದು ಜ್ಞಾಪಿಸಿದರು. ಅವನು “ರಾಜರಿಗೂ ಬಡ ಬ್ರಾಹ್ಮನಿಗೂ ಎಲ್ಲಿಯ ಸ್ನೇಹ? ಸಮಾನರಾದವರ ನಡುವೆ ಮಾತ್ರ ಸ್ನೇಹ ಸಾಧ್ಯ’ ಎಂದು ಹೇಳಿ ಅಪಮಾನ ಮಾಡಿ ಅಟ್ಟಿಬಿಟ್ಟ.

ಪಾಂಡವ- ಕೌರವರು ತನ್ನ ಶಿಷ್ಯರಾದ ಮೇಲೆ ದ್ರೋಣರು ಅವರಿಗೆ “ನಿಮ್ಮೆಲ್ಲರ ಶಸ್ತ್ರಾಭ್ಯಾಸ ಮುಗಿದ ಮೇಲೆ ನನ್ನ ಮನಸ್ಸಿನಲ್ಲಿರುವ ಒಂದು ಅಭಿಲಾಷೆಯನ್ನು ನಡೆಸಿಕೊಡುತ್ತೀರಾ’ ಎಂದು ಕೇಳಿದರು. ಅರ್ಜುನನೊಬ್ಬನೇ “ಆಗಲಿ’ ಎಂದು ಪ್ರತಿಜ್ಞೆ ಮಾಡಿದ. ಅಂದಿನಿಂದ ದ್ರೋಣರಿಗೆ ಆಪ್ತ ಶಿಷ್ಯನಾದ. ಗುರುವು ಅವನಿಗೆ ಅನೇಕ ದಿವ್ಯಾಸ್ತ್ರಗಳ ಪ್ರಯೋಗವನ್ನು ಕಲಿಸಿದರು. ಅರ್ಜುನನೂ ಸ್ವಂತ ಪರಿಶ್ರಮದಿಂದ ಹೊಸ ಪ್ರಯೋಗಗಳನ್ನು ಮಾಡಿಕಲಿತ. ದ್ರೋಣರು, “ಧನುರ್ವಿದ್ಯೆಯಲ್ಲಿ ಯಾರೂ ನಿನ್ನ ಸಮನಾಗದಂತೆ ನಿನಗೆ ಕಲಿಸುತ್ತೇನೆ’ ಎಂದು ಹೇಳಿದರು. ಎಲ್ಲ ರಾಜಕುಮಾರರಿಗೆ ಹಲವು ಬಗೆಯ ಆಯುಧಗಳ ಮತ್ತು ಯುದ್ಧಕ್ರಮಗಳ ಬಳಕೆಯನ್ನು ಕಲಿಸಿದರು.

(ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌ ಅವರ “ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)

Advertisement
Advertisement

Udayavani is now on Telegram. Click here to join our channel and stay updated with the latest news.

Next