Advertisement
ಇದಕ್ಕೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಅನುಮೋದನೆ ಅಗತ್ಯವಿದ್ದು, ಅದು ದೊರೆತಿದೆ. ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ “ಉದಯವಾಣಿ’ಯೊಂದಿಗೆ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಮಯದಲ್ಲಿ ದ್ರೋಣ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
Related Articles
Advertisement
ಕಮಾಂಡ್ ವಾಹನ: ಹೈಟೆಕ್‌ನತ್ತ ಕಮೀಷನರೇಟ್ ಘಟಕ ಬೆಂಗಳೂರು ನಂತರ ಹುಬ್ಬಳ್ಳಿ-ಧಾರವಾಡ ಮಹಾನಗರವು ಕಮಾಂಡ್ ವಾಹನ ಹೊಂದಲಿರುವ ಎರಡನೆಯ ನಗರವಾಗಲಿದೆ. ಕಮಾಂಡ್ ವಾಹನವು ಎಲ್ಲ ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರಲಿದ್ದು, ಸ್ಥಳದಿಂದಲೇ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಮಾಹಿತಿಗಳನ್ನು ರವಾನಿಸುತ್ತದೆ.
ಇದು ಅವಳಿ ನಗರದ ಭದ್ರತಾ ವ್ಯವಸ್ಥೆಗೆ ಶಕ್ತಿ ತುಂಬಲಿದೆ ಎಂದರು. ಕಮಾಂಡ್ ವಾಹನವು ಒಂದು ವಿಡಿಯೊ ವಾಲ, ಪಾನ್-ಟಿಲ್ಟ ಜೂಮ ಕ್ಯಾಮರಾ ಸೇರಿದಂತೆ ಎಲ್ಲ ಸಂವಹನ ವ್ಯವಸ್ಥೆ ಹೊಂದಿರುತ್ತದೆ. ಇದು ಮೊಬೈಲ ಪೊಲೀಸ್ ಠಾಣೆಯಂತೆ ಇರಲಿದೆ. ತಂಡದ ಪುರುಷ ಪೊಲೀಸರು ನಿಸ್ತಂತು ಕ್ಯಾಮರಾಗಳನ್ನು ಹಾಕಿಕೊಂಡಿರುತ್ತಾರೆ.
ಮೆರವಣಿಗೆ, ಅಹಿತರ ಘಟನೆ, ಚುನಾವಣೆ ರ್ಯಾಲಿ ಸಂದರ್ಭಗಳಲ್ಲಿ ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿರುವ ಗುಂಪಿನಲ್ಲಿನವರನ್ನು ಗುಪ್ತ ಕ್ಯಾಮೆರಾಗಳನ್ನು ಧರಿಸಿರುವ ಸಿಬ್ಬಂದಿ ಮೂಲಕ ಫೋಟೋ ಸೆರೆ ಹಿಡಿಯಲಾಗುತ್ತದೆ. ಕಮಾಂಡ್ ವಾಹನದಲ್ಲಿ ಸೆರೆ ಹಿಡಿಯಲಾದ ಪೋಟೋಗಳು ಹಾಗೂ ಸಂದೇಶಗಳು ನೇರವಾಗಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತಲುಪುತ್ತವೆ. ಅಲ್ಲಿಂದಲೇ ಮೇಲಾಧಿಕಾರಿಗಳು ಪರಿಸ್ಥಿತಿ ನಿಭಾಯಿಸಬಹುದು ಎಂದು ಪಿ.ಎಚ್. ರಾಣೆ ತಿಳಿಸಿದರು.