Advertisement
ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ಗಳ ಮೇಲೆ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿದ ಡಿಆರ್‌ಎಂ ಸಿಂಗ್, ನಿಲ್ದಾಣದ ನಿರ್ವಹಣೆ ವೈಖರಿ ಅರಿತುಕೊಳ್ಳುವ ಪ್ರಯತ್ನ ಮಾಡಿದರು. ಎಲ್ಲೆಡೆ ಹರಡಿಕೊಂಡು ಬಿದ್ದಿದ್ದ ಘನತ್ಯಾಜ್ಯದ ರಾಶಿ ಮತ್ತು ಹಳಿ ಪಕ್ಕದಲ್ಲಿ ಸಂಗ್ರವಾಗಿ ನಿಂತಿದ್ದ ಮಳೆ ನೀರನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.ಅಸಮರ್ಪಕ ಸ್ವತ್ಛತಾ ಕಾರ್ಯ ಕಂಡು ಪಟ್ಟಿಮಾಡಿಕೊಂಡರು. ರೈಲು ನಿಲ್ದಾಣ ಪ್ರವೇಶ ದ್ವಾರದ ಆವರಣವನ್ನು ಪರಿಶೀಲಿಸಲು ಮುಂದಾದ ಅಧಿಕಾರಿ ಮುನೀಂದ್ರ ಸಿಂಗ್, ಟಿಕೆಟ್ ಕಾರ್ಯಾಲಯದ ಹೊರ ಗೋಡೆಯೊಂದು
ಸಾರ್ವಜನಿಕ ಮೂತ್ರಾಲಯವಾಗಿದ್ದ ದೃಶ್ಯ ಕಂಡು ದುರ್ಗಂಧ ಸಹಿಸಿಕೊಳ್ಳಲಾಗದೆ ಮೂಗು ಮುಚ್ಚಿಕೊಂಡರು.
ಗಮನಿಸಿದರು. ಇಡೀ ರೈಲು ನಿಲ್ದಾಣದ ಪರಿಸರ ದುರ್ಗಂಧದಿಂದ ಕೂಡಿದ್ದಕ್ಕೆ ಸ್ಥಳದಲ್ಲಿಯೇ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಟೆಕೆಟ್ ಕಾರ್ಯಾಲಯದ ಸುತ್ತಲ ಪರಿಸರ ಶುಚಿಯಾಗಿದ್ದು, ಹಸಿರಿನಿಂದ
ಕಂಗೊಳಿಸಬೇಕು. ಪಾಳುಬಿದ್ದ ಎಲ್ಲ ರೈಲ್ವೆ ಕಟ್ಟಡಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕ ಶೌಚಾಲಯದ ಹಿಂಬದಿ ಜಾಗ ಬಳೆಸಿಕೊಂಡು ಕ್ರೂಸರ್ ಮತ್ತು ಆಟೋ ವಾಹನಗಳ ಪಾರ್ಕಿಂಗ್ ನಿರ್ಮಿಸಬೇಕು. ಬೈಕ್ ಗಳಿಗೂ ನಿಗದಿತ ಸ್ಥಳ ಗುರುತಿಸಿ ನಿಲ್ದಾಣದ ಹೊರಾಂಗಣ ಸೌಂದರ್ಯ ಕಾಪಾಡಬೇಕು ಎಂದು ಖಡಕ್ ಆದೇಶ ನೀಡಿದರು. ನಿಲ್ದಾಣದಲ್ಲಿ ರೈಲಿಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ನೆರಳು, ಶೌಚಾಲಯದ ಸೌಲಭ್ಯ
ನಿರಂತರವಾಗಿರಬೇಕು. ನಿಲ್ದಾಣದ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ರೈಲು ನಿಲ್ದಾಣ ವ್ಯವಸ್ಥಾಪಕ ಎ.ಎಸ್. ಪ್ರಸಾದರಾವ್, ಅಧಿಕಾರಿಗಳಾದ ಜೀವನ್ ಕದಂ, ಆರ್. ಕೆ. ಶರ್ಮಾ, ಪ್ರಭಾಕರ, ವಿಜಯಕುಮಾರ ರೈ, ಐಪಿಎಫ್ ಸಂಜಯಕುಮಾರ ಸಿಂಗ್, ಸಾಗರ ಗಾಯಕವಾಡ ಹಾಗೂ ಮತ್ತಿತರರು
ಇದ್ದರು.