Advertisement
ವಿವಿಧ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದ ವಾಹನ ಚಾಲನಾ ಪರೀಕ್ಷಾ ಕೇಂದ್ರದಕ್ಕೆ ಹೈಟೆಕ್ ಸ್ಪರ್ಶ ನೀಡುವ ಉದ್ದೇಶದಿಂದ ಸರಕಾರ ಅನುದಾನ ಬಿಡುಗಡೆ ಮಾಡಿತ್ತು. ಆದರೆ ವಿವಿಧ ಕಾರಣಗಳಿಂದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ವಾಮಂಜೂರಿನಲ್ಲಿ ಸುಮಾರು 2 ಎಕ್ರೆಯಷ್ಟು ಜಾಗದಲ್ಲಿರುವ ವಾಹನ ಚಾಲನಾ ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಕಟ್ಟಡ, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳು ಇಲ್ಲ ಎನ್ನುವುದು ಪರೀಕ್ಷೆಗೆ ಬರುವ ಜನರ ಅಳಲಾಗಿತ್ತು. ಈ ನಿಟ್ಟಿನಲ್ಲಿ ಚಾಲನಾ ಪರೀಕ್ಷಾ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸರಕಾರದಿಂದ 76 ಲಕ್ಷ ರೂ. ಬಿಡುಗಡೆಗೊಳಿಸಲಾಗಿತ್ತು. ಅನುದಾನ ಬಿಡುಗಡೆಗೊಂಡು ಒಂದೂವರೆ ವರ್ಷ ಕಳೆದರೂ ಆ ಪ್ರದೇಶದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಬಿಡುಗಡೆಗೊಂಡ ಅನುದಾನದಲ್ಲಿ ಆ ಪ್ರದೇಶದಲ್ಲಿ ಕಟ್ಟಡ, ಬರುವವರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ, ಶೌಚಾಲಯ ಹಾಗೂ ಕೇಂದ್ರದ ನಾಲ್ಕೂ ಬದಿಯಲ್ಲಿ ಕಾಂಪೌಂಡ್ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು. ಒಂದೂವರೆ ವರ್ಷದಲ್ಲಿ ಕಟ್ಟಡ, ಶೌಚಾಲಯ ಕಾಮಗಾರಿ ನಡೆದಿದೆ. ಆದರೆ ಬಹುಮುಖ್ಯವಾಗಿ ಬೇಕಾಗಿದ್ದ ವಾಹನ ಚಾಲನಾ ಪರೀಕ್ಷಾ ಕೇಂದ್ರದ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಟೆಂಡರ್ ವಹಿಸಿಕೊಂಡ ನಿರ್ಮಿತಿ ಕೇಂದ್ರ ಅನುದಾನ ಬಿಡುಗಡೆ ವಿಳಂಬವಾದ ಹಿನ್ನೆಲೆಯಲ್ಲಿ ಇಂಟರ್ ಲಾಕ್ ಕಾಮಗಾರಿ ನಡೆದಿರಲಿಲ್ಲ. ಇನ್ನೂ ಕೆಲವು ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳುತ್ತದೆ ಎಂದು ಹೇಳುತ್ತಿದೆ. ಟ್ರಾಫಿಕ್ ತುಂಬಾ ಜಲ್ಲಿ-ಕಲ್ಲು-ಮಣ್ಣು
ಇಲ್ಲಿ ವಾಹನ ಚಾಲನಾ ಪರವಾನಿಗೆ ಪಡೆಯಲು ಸವಾರರು ಸಂಕಷ್ಟಪಡುವ ಸ್ಥಿತಿಯಿದೆ. ಜಲ್ಲಿ-ಕಲ್ಲು-ಮಣ್ಣು ಆವೃತವಾಗಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ವಾಹನ ಬಿಡುವವರು ಪರೀಕ್ಷಾ ಭಯದಿಂದ ಹೆಚ್ಚಿನ ಬಾರಿ ಎಡವುತ್ತಾರೆ. ರಾಜ್ಯದ ಇತರ ಭಾಗದಲ್ಲಿ ಸುಸಜ್ಜಿತ ಟ್ರಾಫಿಕ್ ಇರುವುದರಿಂದ ಮಂಗಳೂರಿನ ಟ್ರಾಫಿಕ್ ಅನ್ನು ಮೇಲ್ದರ್ಜೆಗೇರಿಸಬೇಕು ಎಂಬ ಆಗ್ರಹವೂ ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಯೋಜನೆ ರೂಪಿಸಲಾಗಿತ್ತು.
Related Articles
ವಾಮಂಜೂರಿನಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನದವರೆಗೆ ದ್ವಿಚಕ್ರ ವಾಹನ ಚಾಲನಾ ಪರೀಕ್ಷೆಗೆ ಸುಮಾರು 50 ಮಂದಿ ಫೋರ್ ವೀಲ್ಹರ್ 60 ಮಂದಿಯಂತೆ ದಿನಕ್ಕೆ 100ಕ್ಕೂ ಅಧಿಕ ಮಂದಿ ಚಾಲನಾ ಪರೀಕ್ಷೆಗೆ ಹಾಜಾರಾಗುತ್ತಾರೆ. ಮಂಗಳೂರಿನ ಇನ್ ಸ್ಪೆಕ್ಟರ್ ಸೇರಿದಂತೆ 2-3 ಅಧಿಕಾರಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದರೂ ಇಲ್ಲಿ ಮೂಲಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಪ್ರಸ್ತಾವನೆ ನೀಡಲಾಗಿತ್ತು.
Advertisement
ಇಂಟರ್‌ಲಾಕ್ ಕಾಮಗಾರಿ ಆರಂಭವಾಮಂಜೂರಿನ ವಾಹನ ಚಾಲನಾ ಪರೀಕ್ಷಾ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 76 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಆಯೋಜಿಸಲಾಗಿತ್ತು. ಕಳೆದ ಜನವರಿಯಿಂದ ಕಾಮಗಾರಿಗಳು ಆರಂಭಗೊಂಡಿತ್ತು. ಆದರೆ ಪ್ರಸ್ತುತ ಅನುದಾನ ಬಿಡುಗಡೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಇಂಟರ್‌ಲಾಕ್ ಕಾಮಗಾರಿ ಆರಂಭಗೊಂಡಿಲ್ಲ. ಚುನವಾಣೆ ಮುಗಿದ ಕೂಡಲೇ ಆ ಕಾಮಗಾರಿಯೂ ಪೂರ್ಣಗೊಳ್ಳಲಿದೆ.
– ಸಿ.ಡಿ. ನಾಯಕ್,
ಉಪಸಾರಿಗೆ ಆಯುಕ್ತರು,
ಮಂಗಳೂರು ಪ್ರಜ್ಞಾ ಶೆಟ್ಟಿ