Advertisement

ಅತಿವೇಗದ ಚಾಲನೆ ಅಪಾಯಕ್ಕೆ ಆಹ್ವಾನ

09:48 AM Nov 08, 2021 | Team Udayavani |

ಕಲಬುರಗಿ: ನಗರದ ಗೋದುತಾಯಿ ಕಾಲೋನಿಯಲ್ಲಿರುವ ಮದರ್‌ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಾಲೆ ಮಕ್ಕಳಿಗೆ ಸಂಚಾರ ಉಪ ವಿಭಾಗ ಪೊಲೀಸ್‌ ಠಾಣೆ-1ರ ವತಿಯಿಂದ ಸಂಚಾರಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

Advertisement

ಸಂಚಾರಿ ಉಪ ವಿಭಾಗ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಶಾಂತಿನಾಥ ಬಿ.ಪಿ ಮಾತನಾಡಿ, ಅತಿವೇಗವಾಗಿ ವಾಹನ ಚಲಿಸುವುದರಿಂದ ಅಪಾಯ ಎದುರಾಗುತ್ತದೆ. ಅವಸರವೇ ಅಪಘಾತಕ್ಕೆ ಕಾರಣ. ಆದ್ದರಿಂದ ನಿಧಾನವಾಗಿ ವಾಹನ ಚಾಲನೆ ಮಾಡಬೇಕು ಎಂದು ಹೇಳಿದರು.

ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಬೇಕು. ಬೈಕ್‌ ಓಡಿಸುವಾಗ ತಪ್ಪದೇ ಹೆಲ್ಮೆಟ್‌ ಧರಿಸಬೇಕು. ಕಾರು ಚಲಾಯಿಸುವಾಗ ಸೀಟ್‌ ಬೆಲ್ಟ್ ಹಾಕಿಕೊಳ್ಳಬೇಕು. ಯಾವುದೇ ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಬಾರದು. ಇದರಿಂದ ಸಂಚಾರ ಸಂದರ್ಭದಲ್ಲಿ ಎದುರಾಗುವ ಅನಾಹುತಗಳಿಂದ ಪಾರಾಗಲು ಸಾಧ್ಯ ಎಂದು ಮಕ್ಕಳಲ್ಲಿ ಅರಿವು ಮೂಡಿಸಿದರು.

ಸಂಚಾರಿ ಪೊಲೀಸ್‌ ಠಾಣೆ ಸಿಬ್ಬಂದಿ ನರಸಿಂಹಾಚಾರಿ ಮಾತನಾಡಿ, “ಸಿಗ್ನಲ್‌’ ಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಕಾನ್‌ಸ್ಟೇಬಲ್‌ ಸಿದ್ಧು ಪಾಟೀಲ, ಶಶಿಕಾಂತ ಪಾಟೀಲ, ಶಾಲೆಯ ಕಾರ್ಯದರ್ಶಿ ಶಿವಪುತ್ರಪ್ಪ ಡೆಂಕಿ, ಪ್ರಾಚಾರ್ಯ ನಾಗೇಂದ್ರ ಬಡಿಗೇರ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next