Advertisement

ನಮ್ಮ ಕೈಹಿಡಿಯಲು ಯತ್ನಿಸಿದ್ರೂ ದಿಢೀರ್‌ನೇ ಸ್ತಬ್ಧವಾದರು!

10:07 AM Nov 07, 2019 | Hari Prasad |

ಹೈದರಾಬಾದ್‌: ‘ಕಚೇರಿಯ ಹೊರಗಡೆ ಏರ್‌ ಕಂಡಿಷನರ್‌ ಸ್ಫೋಟ ಅಥವಾ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದುಕೊಂಡಿದ್ದೆವು. ಬಳಿಕ ಕಚೇರಿಯೊಳಗೆ ವ್ಯಕ್ತಿಯೊಬ್ಬರನ್ನು ಬೆಂಕಿ ಆವರಿಸಿಕೊಂಡಿರುವುದು ಗೊತ್ತಾಯಿತು. ತಕ್ಷಣಕ್ಕೆ ಯಾರೆಂದು ತಿಳಿಯಲಿಲ್ಲ. ಅನಂತರ ತಹಶೀಲ್ದಾರ್‌ ವಿಜಯಾ ರೆಡ್ಡಿ ದಹನವಾಗುತ್ತಿರುವುದು ಕಂಡು ಬಂತು. ನಾವು ಜೋರಾಗಿ ಕೂಗಿಕೊಂಡೆವು. ಈ ವೇಳೆ ದಟ್ಟ ಹೊಗೆ, ಬೆಂಕಿ ಆವರಿಸಿಕೊಂಡಿತ್ತು. ಬೆಂಕಿಯ ನಡುವೆಯೂ ಅವರು ನಮ್ಮ ಕೈ ಹಿಡಿದುಕೊಳ್ಳಲು ಪ್ರಯತ್ನಿಸಿದರು. ಆದರೆ, ದಿಢೀರ್‌ನೇ ಅವರು ಸ್ತಬ್ಧರಾದರು.’ ಇದು ತೆಲಂಗಾಣದಲ್ಲಿ ಕರ್ತವ್ಯ ನಿರತರಾಗಿದ್ದ ತಹಶೀಲ್ದಾರ್‌ ವಿಜಯಾ ರೆಡ್ಡಿ ಸಜೀವ ದಹನವನ್ನು ಪ್ರತ್ಯಕ್ಷವಾಗಿ ಕಂಡ ಕಚೇರಿಯ ಸಿಬ್ಬಂದಿ ಹೇಳಿದ ಮಾತುಗಳು.

Advertisement

ಜಮೀನು ವಿವಾದ ಸಂಬಂಧ ದುಷ್ಕರ್ಮಿ ಸುರೇಶ್‌ ಈ ಭೀಭತ್ಸ ಕೃತ್ಯ ಎಸಗಿದ್ದು, ಆತ ತಹಶೀಲ್ದಾರ್‌ಗೆ ಬೆಂಕಿ ಹಚ್ಚಿ ಕಚೇರಿಯಲ್ಲಿ ಕೂಡಿಹಾಕಿ ಪರಾರಿಗೆ ಯತ್ನಿಸಿದ್ದ. ಆದರೆ ಬೆಂಕಿಯ ಜ್ವಾಲೆಗೆ ಸಿಲುಕಿದ್ದರಿಂದ ಆತ ಗಾಯಗೊಂಡಿದ್ದ, ಆದರೂ ಬಿಡದೇ ಶರ್ಟ್‌ ಬಿಚ್ಚಿ ಓಡಲು ಯತ್ನಿಸಿದ ಎಂದು ಸಿಬ್ಬಂದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next