Advertisement

ಕೆನಡಾ:ಮನಬಂದಂತೆ ವ್ಯಾನ್‌ ಹರಿಸಿದ ; 10 ಮಂದಿ ಪಾದಚಾರಿಗಳ ಕೊಂದ

09:42 AM Apr 24, 2018 | Team Udayavani |

ಟೊರಾಂಟೊ: ನಗರದ ಜನನಿಬಿಡ ಪಾದಾಚಾರಿ ಮಾರ್ಗದ ಮೇಲೆ ಯುವಕನೊಬ್ಬ ಮನಬಂದಂತೆ ವ್ಯಾನ್‌ ಹರಿಸಿ 10 ಮಂದಿಯ ಸಾವಿಗೆ ಕಾರಣವಾಗಿದ್ದಾನೆ. ಸೋಮವಾರ ಘಟನೆ ನಡೆದಿದ್ದು 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಬೆಚ್ಚಿ ಬೀಳಿಸುವ ಕೃತ್ಯ ಎಸಗಿದ 25 ರ ಹರೆಯದ ಅಲೆಕ್‌ ಮಿನಾಸಿಯನ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈತ ಬಾಡಿಗೆಗೆ ವ್ಯಾನ್‌ ಪಡೆದು ಕೃತ್ಯ ಎಸಗಿದ್ದು, ಉಗ್ರ ಕೃತ್ಯವಲ್ಲ ಎಂದು ಕೆನಡಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕೃತ್ಯದ ಬಳಿಕ ಇದೊಂದು  ಉಗ್ರ ಕೃತ್ಯ ಎಂದು ನಗರದಾದ್ಯಂತ ಜನರು ಭೀತಿಯಿಂದ ದಿನ ಕಳೆಯಬೇಕಾಗಿ ಬಂದಿತ್ತು ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 

Advertisement

Udayavani is now on Telegram. Click here to join our channel and stay updated with the latest news.

Next