Advertisement
ಟೆಂಪೋ ಚಾಲಕ ಮಂಜು (27)ಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ 5,500 ರೂ. ದಂಡ ಮತ್ತು ಮಾಲಿಕ ಅನಿಲ್ (39)ಗೆ ಏಳು ಸಾವಿರ ದಂಡ ವಿಧಿಸಲಾಗಿದೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರ ಜನವರಿ 5ರಂದು ಅಯ್ಯಪ್ಪ ಬೇಕರಿ ಸ್ವೀಟ್ಸ್ ಆ್ಯಂಡ್ ಚಾಟ್ಸ್, ಸರ್ವೀಸ್ ರಸ್ತೆಯ ನಂದಿನಿ ಲೇಔಟ್ ಬಳಿ ಚಾಲಕ ಮಂಜು ಅತೀ ವೇಗವಾಗಿ ಗೊರಗುಂಟೆಪಾಳ್ಯಯಿಂದ ಸುಮ್ಮನಹಳ್ಳಿ ಜಂಕ್ಷನ್ ಕಡೆಗೆ ಟೆಂಪೋ ಚಲಾಯಿಸಿಕೊಂಡು ಹೋಗುತ್ತಿದ್ದ. ಆಗ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಟೆಂಪೋ ಮುಂದಿನ ಎರಡು ಚಕ್ರಗಳು ಮಹಿಳೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದರು.
Advertisement
ರಸ್ತೆ ಅಪಘಾತ ಎಸಗಿದ ಚಾಲಕನಿಗೆ ಶಿಕ್ಷೆ
11:19 AM Mar 25, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.