Advertisement
5,000 ಸಸಿಗಳ ಬಳಕೆಬಳಿಕ ಮಾತನಾಡಿದ ಅವರು ಕಾಪು ಪುರಸಭೆ ಕೈಗೆತ್ತಿಕೊಂಡಿರುವ ಸ್ವತ್ಛ ಕಾಪು – ಸುಂದರ ಕಾಪು ಯೋಜನೆಗೆ ಪೂರಕವಾಗಿ ಪುರಸಭೆ ಯನ್ನು ಹಸಿರೀಕರಣಗೊಳಿಸುವ ಮಹತ್ವಾಕಾಂಕೆೆÒಯನ್ನು ಹೊಂದಲಾಗಿದ್ದು, ಅದರಂತೆ ಪ್ರಥಮ ಹಂತದಲ್ಲಿ 5,000ಕ್ಕೂ ಅಧಿಕ ಗಿಡಗಳನ್ನು ನೆಡಲು ಚಿಂತನೆ ನಡೆಸಲಾಗಿದೆ. ಆವಶ್ಯಕತೆ ಬಿದ್ದರೆ ಇನ್ನೂ ಹೆಚ್ಚಿನ ಗಿಡಗಳನ್ನು ತರಿಸಿಕೊಳ್ಳಲಾಗುವುದು ಎಂದರು.
ಪ್ರಾಯೋಗಿಕವಾಗಿ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಹಸಿರೀಕರಣ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದೆ ಈ ಕಾರ್ಯಕ್ರಮವನ್ನು ಕ್ಷೇತ್ರ ದಾದ್ಯಂತ ವಿಸ್ತರಿಸುವ ಯೋಜನೆಯಿದೆ. ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರದ ಅಗತ್ಯವಿದೆ. ವಿಶೇಷವಾಗಿ ಪುರಸಭೆಯ ಕೌನ್ಸಿಲರ್‌ಗಳು, ಸಂಘ-ಸಂಸ್ಥೆಗಳು ಮತ್ತು ಖಾಸಗಿ ನರ್ಸರಿಗಳ ಸಹಕಾರವೂ ಅಗತ್ಯವಾಗಿ ದೊರಕಬೇಕಿದೆ ಎಂದರು. ಕಾಪು ಪುರಸಭಾಧ್ಯಕ್ಷೆ ಕು| ಸೌಮ್ಯಾ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಉಪಾಧ್ಯಕ್ಷ ಕೆ. ಎಚ್. ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ಪುರಸಭೆಯ ಮುಖ್ಯಾಧಿಕಾರಿ ರಾಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪ ವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ, ಅರಣ್ಯ ರಕ್ಷಕರಾದ ಜಯರಾಮ ಶೆಟ್ಟಿ ಕೆ. ರಮೇಶ್, ಪ್ರಭಾತ್ ಕುಮಾರ್, ಕಾಪು ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ್ ಶೆಟ್ಟಿ, ಕಾಪು ಜೇಸಿಐ ಅಧ್ಯಕ್ಷ ಸಂದೀಪ್ ಶೆಟ್ಟಿ ಕಲ್ಯ, ಲಯನ್ಸ್ ಅಧಿಕಾರಿ ಹರೀಶ್ ನಾಯಕ್, ಜೇಸಿಐ ವಲಯಾಧಿಕಾರಿ ಅನಿಲ್ ಕುಮಾರ್, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪುರಸಭೆಯ ಸದಸ್ಯರುಗಳು, ಕಾಪು ಸರಕಾರಿ ಮಾದರಿ ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯಿನಿ ರಜನಿ ಮೊದಲಾದವರು ಉಪಸ್ಥಿತರಿದ್ದರು.