Advertisement
ಪ್ರತಿವರ್ಷವೂ ವಿಶ್ವದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಮೈಸೂರು ದಸರಾ ಈ ಬಾರಿ ಸಾರ್ವಜನಿಕರು, ಪ್ರವಾಸಿಗರಿಲ್ಲದೆ ಅರಮನೆಗಷ್ಟೇ ಸೀಮಿತವಾಗಿದೆ. ಈ ಬಾರಿ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿ ಅರಮನೆಗೆ ಸೀಮಿತವಾಗಿದ್ದು, ಪಂಜಿನ ಕವಾಯತು ರದ್ದಾಗಿದೆ. ದೀಪಾಲಂಕಾರ ಎಂದಿನಂತಿದ್ದು, ಆನ್‌ಲೈನ್ ಮೂಲಕ ದಸರಾ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಕೊರೊನಾ ವಿರುದ್ಧ ಹಗಲಿರುಳೆನ್ನದೆ ಅವಿರತ ಶ್ರಮಿಸಿರುವ ಕೊರೊನಾ ವಾರಿಯರ್‌ಗಳನ್ನು ಸಮ್ಮಾನಿಸಲಾಗುತ್ತದೆ. ಎಚ್‌ಎಚ್‌ಎಂಬಿಜಿ ಆಸ್ಪತ್ರೆ ವೈದ್ಯಾಧಿಕಾರಿ ಡಾ| ನವೀನ್ ಟಿ.ಆರ್., ಜಿಲ್ಲಾ ಆಸ್ಪತ್ರೆಯ ಹಿರಿಯ ಶುಶ್ರೂಷಾಧಿಕಾರಿ ರುಕ್ಮಿಣಿ, ಪೊಲೀಸ್ ಕಾನ್‌ಸ್ಟೆಬಲ್ ಕುಮಾರ ಪಿ., ಪಾಲಿಕೆ ಪೌರಕಾರ್ಮಿಕರಾದ ಮರಗಮ್ಮ, ನಂಜನಗೂಡು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ನೂರ್ ಜಾನ್, ಸಮಾಜ ಸೇವಕ ಆಯೂಬ್ ಅಹಮದ್ ಅವರನ್ನು ಸಮ್ಮಾನಿಸಲಾಗುತ್ತದೆ.
Related Articles
ದಸರಾ ಸರಳವಾಗಿ ನಡೆದರೂ ರಾಜಮನೆ ತನದ ಖಾಸಗಿ ದರ್ಬಾರ್ ಎಂದಿನಂತೆ ನ.17ರಿಂದ ಅರಮನೆಯ ದರ್ಬಾರ್ ಹಾಲ್‌ನಲ್ಲಿ ನಡೆಯಲಿದೆ.
Advertisement
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ದಸರಾ ಆಚರಿಸಲಾಗುತ್ತಿದೆ. ಸಾರ್ವಜನಿಕರು ಸೋಂಕಿನಿಂದ ದೂರವಿರಲು ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಸಾರ್ವಜನಿಕರ ಅಪೇಕ್ಷೆಯಂತೆಯೇ ದಸರಾ ನಡೆಯುತ್ತಿದ್ದು, ನಾಡಿನ ಸಮಸ್ತ ಜನತೆಗೆ ನಾಡಹಬ್ಬ, ನವರಾತ್ರಿ ಶುಭಾಶಯಗಳು.– ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ