ಕಾರವಾರ: ಮತದಾರರ ಜಾಗೃತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರವಾರ ಸರ್ಕಾರಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಕೆ. ಉದ್ಘಾಟಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಮತದಾರರಿಗೆ ವಿವಿಧ ಮಾಹಿತಿಯುಳ್ಳ ವಸ್ತು ಪ್ರದರ್ಶನ ಇದಾಗಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ, ಯುವ ಜನತೆಗೆ, ಸಾರ್ವಜನಿಕರಿಗೆ ನೋಡಲು ಲಭ್ಯವಿರುತ್ತದೆ. ಇದರ ಉದ್ದೇಶ ಮತದಾನದ ಮಹತ್ವವನ್ನು ಪ್ರಜೆಗಳಿಗೆ ತಲುಪಿಸುವುದಾಗಿದೆ ಎಂದು ಅವರು ಹೇಳಿದರು.
ಚುನಾವಣಾ ಆ್ಯಪ್, ಸಿ ವಿಜಿಲ್ ಸೇರಿದಂತೆ ವಿವಿಧ ಫೋಟೋ ಪ್ರದರ್ಶನ ಇದಾಗಿದೆ ಎಂದು ಅಭಿಪ್ರಾಯಪಟ್ಟರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರಿಗೆ ಪೂರಕ ಮಾಹಿತಿ ನೀಡುವ ವಿವಿಧ ವಿಭಿನ್ನ ಕಾರ್ಯಕ್ರಮವನ್ನು ಈಗಾಗಲೇ ವಿವಿಧೆಡೆ
ಹಮ್ಮಿಕೊಳ್ಳಲಾಗಿದೆ. ಇದರಿಂದ ಮತದಾರರು ಕಳೆದ ವರ್ಷಕ್ಕಿಂತಲೂ ಹೆಚ್ಚು ಜಾಗೃತರಾಗಿದ್ದಾರೆ. ನಾವು ಭೇಟಿ ನೀಡಿದೆಲ್ಲಡೆ ಮತದಾರರೇ ಇವಿಎಂ, ವಿವಿಪ್ಯಾಟ್ ಬಗ್ಗೆ ವಿವರಿಸುತ್ತಾರೆ. ಅನಕ್ಷರಸ್ಥರ ಬಳಿಯೂ, ಕುತೂಹಲಕ್ಕೆ ಚುನಾವಣೆ ಬಗ್ಗೆ ಕೇಳಿದಾಗ ಮತದಾರರು ಮಾಹಿತಿ ಹಂಚಿಕೊಳ್ಳುತ್ತಾರೆ. ಇದರಿಂದ ಜಿಲ್ಲಾಡಳಿತದಿಂದ ಕೃಗೊಂಡ ಜಾಗೃತಿ ಪ್ರಯತ್ನ ಸಾರ್ಥಕವಾಗಿದೆ ಎಂದರು.
ಇದರ ಸದ್ಬಳಕೆ ಮಾಡಿಕೊಂಡು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಹೇಳಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಜಿಪಂ ಸಿಇಒ ಎಂ.ರೋಷನ್, ಐಎಎಸ್ ಪ್ರಭಾರಿ ದಿಲೀಷ್ ಸಸಿ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಉಪಸ್ಥಿತರಿದ್ದರು.