ಹೊಸದಿಲ್ಲಿ: ಬ್ರಹ್ಮಾಂಡವನ್ನು ಅಧ್ಯಯನ ಮಾಡುವ ಸಲುವಾಗಿ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳ ವಿಜ್ಞಾನಿಗಳು ಒಗ್ಗೂಡಿ, ವಿಶ್ವದ ಅತ ದೊಡ್ಡ ಟೆಲಿಸ್ಕೋಪ್‌ಗ್ಳ ಸಮೂಹವಾದ “ಸ್ಕೈಯರ್ ಕಿಲೋ ಮೀಟರ್ ಅರೇ ಅಬ್ಸರ್ವೇಟರಿ’ (ಎಸ್‌ಕೆಎಒ) ನಿರ್ಮಿಸಲು ಮುಂದಾಗಿದ್ದಾರೆ. ಇಂಥದ್ದೊಂದು ಮಹಾನ್ ಪ್ರಯತ್ನ ಇದೇ ಮೊದಲ ಬಾರಿಗೆ ಅನುಷ್ಠಾನಗೊಳ್ಳುತ್ತಿದ್ದು, ದಕ್ಷಿಣ ಆಫ್ರಿಕಾದ ಬೃಹತ್ ಗಾತ್ರದ ಡಿಶ್ ರಿಸೀವರ್‌ಗಳು ಹಾಗೂ ಆಸ್ಟ್ರೇಲಿಯಾದಲ್ಲಿ 1 ಲಕ್ಷದ 30 ಸಾವಿರ ಸಣ್ಣ ಆ್ಯಂಟೇನಾಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಅಸಲಿಗೆ, ಇದು 30 ವರ್ಷಗಳ ಹಿಂದಿನ ಪರಿಕಲ್ಪನೆ. ಆದರೆ ಹಲವಾರು ತಾಂತ್ರಿಕ ಅಡ ಚಣೆಗಳಿಂದಾಗಿ ಇದು ಅನುಷ್ಠಾನಗೊಂಡಿ ರಲಿಲ್ಲ. ಈಗ ಇದು ಅನುಷ್ಠಾನ ಗೊಳ್ಳುತ್ತಿದೆ.
ಖರ್ಚು, ಕಾಮಗಾರಿ ಅವಧಿ: ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ನಿರ್ಮಾ ಣ ವಾಗಲಿರುವ ರಿಸೀವರ್‌ಗಳು ಹಾಗೂ ಆ್ಯಂಟೆನಾಗಳ ನಿರ್ಮಾಣಕ್ಕಾಗಿ, 14 ಸಾವಿರ ಕೋಟಿ ರೂ. ಖರ್ಚಾಗಲಿದ್ದು, 2029ರಲ್ಲಿ ಈ ಕಾರ್ಯ ಪೂರ್ಣವಾಗಲಿದೆ. 2024ರ ಹೊತ್ತಿಗೆ ಈ ಅಬ್ಸರ್ವೇಟರಿಯಲ್ಲಿ ಅತ್ಯಾಧು ನಿಕ ಟೆಲಿ ಸ್ಕೋಪ್‌ಗ್ಳನ್ನು ಅಳವಡಿಸಲಾಗು ತ್ತದೆ. ಇದು, ಮುಂದಿನ 50 ವರ್ಷಗಳವರೆಗೆ ಬಾಳಿಕೆ ಬರು ತ್ತದೆ ಎಂದು ಮೂಲಗಳು ತಿಳಿಸಿವೆ.
ಉದ್ದೇಶವೇನು? :
ಇದೊಂದು ಸಂಕೀರ್ಣವಾದ ತಂತ್ರಜ್ಞಾನ ವಾಗಿದ್ದು, ಈ ಅಬ್ಸರ್ವೇಟರಿಯಿಂದ ಹೊರ ಹೊಮ್ಮುವ ರೇಡಿಯೋ ತರಂಗಗಳಿಂದ ಬ್ರಹ್ಮಾಂಡದ ಆಗು- ಹೋಗುಗಳನ್ನು ಅಧ್ಯ ಯನ ಮಾಡಲು ಹಾಗೂ ಜೀವಿಗಳ ಉಗ ಮಕ್ಕೆ ಕಾರಣವಾಗಿರುವ ಅಂಶಗಳನ್ನು ತಿಳಿದು ಕೊಳ್ಳುವ ಉದ್ದೇಶ ವಿಜ್ಞಾನಿಗಳಿಗಿದೆ.