Advertisement

3 ಕೋ.ರೂ.ಮೊತ್ತದ ಸಾಮಾಜಿಕ ಕಾರ್ಯಯೋಜನೆಗೆ ಚಾಲನೆ 

12:15 PM Sep 27, 2017 | Team Udayavani |

ಮಂಗಳೂರು : ಸಾಮಾಜಿಕ ಕ್ರಾಂತಿಯ ಮೂಲಕ ಗುರುತಿಸಿಕೊಂಡಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹೊಸದಾಗಿ 3 ಕೋ. ರೂ.ಮೊತ್ತದ ಆರೋಗ್ಯ ನಿಧಿ, ವಿದ್ಯಾನಿಧಿ ಹಾಗೂ ಸಾಮೂಹಿಕ ವಿವಾಹ ಯೋಜನೆಗಳಿಗೆ ಮಂಗಳವಾರ ಶ್ರೀ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. 

Advertisement

ದ.ಕ. ಜಿಲ್ಲಾಧಿಕಾರಿ ಡಾ|ಕೆ.ಜಿ. ಜಗದೀಶ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಜಾಗೃತಿ ಮೂಡಿಸುವ ಜತೆಗೆ, ಸಮಾಜದ ಅಭಿವೃದ್ಧಿಗಾಗಿ ವಿವಿಧ ರೀತಿಯಲ್ಲಿ ದುಡಿದಿದ್ದಾರೆ. ಅವರ ಚಿಂತನೆಗಳು ನಮ್ಮೆಲ್ಲರಿಗೆ ಮಾದರಿ. ಈ ನಿಟ್ಟಿನಲ್ಲಿ ವಿವಿಧ ಸಮಾಜಮುಖೀ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುವುದು ಶ್ಲಾಘನೀಯ ಎಂದರು.

ದಾನಿಗಳಾದ ರಂಜನ್‌ ಉಡುಪಿ, ಬದ್ರಿನಾಥ್‌ ಕಾಮತ್‌, ದೇವು ಎನ್‌.ಕರ್ಕೇರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಆರೋಗ್ಯ ನಿಧಿ, ವಿದ್ಯಾನಿಧಿ ಯೋಜನೆಗೆ ನೆರವಿನ ಚೆಕ್‌ ವಿತರಿಸಿದರು. 

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ವಿದ್ಯಾನಿಧಿ ಯೋಜನೆ, ಅಶಕ್ತರಿಗೆ ಆರೋಗ್ಯನಿಧಿ, ದೇಗುಲದಲ್ಲಿ ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹದ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲು ನೂತನ ಯೋಜನೆಯಡಿ ತೀರ್ಮಾನಿಸಲಾಗಿದೆ.
 
ಇದೇ ಸಂದರ್ಭ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಅಪರ ಜಿಲ್ಲಾಧಿಕಾರಿ ಕುಮಾರ್‌, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಜಯ ಸಿ.ಸುವರ್ಣ, ಎಚ್‌.ಎಸ್‌.ಸಾಯಿರಾಂ, ಮಾಧವ ಸುವರ್ಣ, ರವಿಶಂಕರ ಮಿಜಾರ್‌, ದೇವೇಂದ್ರ, ರಾಘವೇಂದ್ರ ಕೂಳೂರು, ಮಹೇಶ್ಚಂದ್ರ, ರಮಾನಾಥ ಕಾರಂದೂರು, ಡಾ|ಬಿ.ಜಿ.ಸುವರ್ಣ, ಅನಸೂಯ, ಲೀಲಾಕ್ಷ ಕರ್ಕೆರ ಮುಂತಾದವರು ಉಪಸ್ಥಿತರಿದ್ದರು.

ಹರಿಕೃಷ್ಣ ಬಂಟ್ವಾಳ್‌ ಸ್ವಾಗತಿಸಿದರು. ಕೋಶಾಧಿಕಾರಿ ಪದ್ಮರಾಜ್‌ ವಂದಿಸಿದರು. ವಿಜಯ್‌ ಕೋಟ್ಯಾನ್‌ ಸಮ್ಮಾನಿತರ ಪರಿಚಯ ಓದಿದರು. ಕೀರ್ತಿ ಕಾರ್ಯಕ್ರಮ ನಿರೂಪಿಸಿದರು. 

Advertisement

ಆರೋಗ್ಯ ನಿಧಿ, ವಿದ್ಯಾನಿಧಿ ಹಾಗೂ ಸಾಮೂಹಿಕ ವಿವಾಹ ಯೋಜನೆಗೆ ಕುದ್ರೋಳಿ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next