Advertisement

ರಾಜ್ಯ ಮಟ್ಟದ ವಾಲಿಬಾಲ್‌ ಪಂದ್ಯಾವಳಿಗೆ ಚಾಲನೆ

04:38 PM Sep 17, 2018 | |

ಹಗರಿಬೊಮ್ಮನಹಳ್ಳಿ: ಪಟ್ಟಣದ ಜ್ಯೋತಿ ವೃಂದದಿಂದ ಗಣೇಶ ಪ್ರತಿಷ್ಠಾಪನೆಯ ಪ್ರಯುಕ್ತ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ 18ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪ್ರಾರಂಭದ ಪಂದ್ಯದಲ್ಲಿ ಬೆಂಗಳೂರು ಹೊಯ್ಸಳ ತಂಡದ ವಿರುದ್ಧ ಹಾಸನ ತಂಡದ ಕ್ರೀಡಾಪಟುಗಳು ಉತ್ತಮ ಶಾಟ್‌ ಹೊಡೆಯುವ ಮೂಲಕ ಬೆಂಗಳೂರು ತಂಡವನ್ನು ಸೋಲುಣಿಸಿದರು.

Advertisement

ರಾಯಚೂರು, ಕೊಪ್ಪಳ, ಬಳ್ಳಾರಿ ತಂಡಗಳು ಭಾರೀ ಪೈಪೋಟಿಯನ್ನೊಡ್ಡಿದ್ದವು. ರಾಷ್ಟ್ರೀಯ ಹಿರಿಯ ಆಟಗಾರರಾದ ಪ್ರಮೋದ್‌ ಹೆಗಡೆ, ವಿಶ್ವನಾಥ್‌, ಭರತ್‌ ಅವರ ಆಟಕ್ಕೆ ಪ್ರೇಕ್ಷಕರು ನೃತ್ಯದ ಮೂಲಕ ರಂಜಿಸಿದರು.

ರಾಷ್ಟ್ರೀಯ ಯುವ ಎಡಗೈ ಆಟಗಾರ ಸಂಪ್ರೀತ್‌ ಹೊಡೆಯುವ ಶಾಟ್‌ಗಳು ನೆಲಕ್ಕಪ್ಪಳಿಸಿ ಮೇಲೆರುತ್ತಿದ್ದದ್ದನ್ನು ಪ್ರೇಕ್ಷಕರು ಕುತೂಹಲದಿಂದ ವೀಕ್ಷಿಸಿದರು. ಯುವ ಆಟಗಾರರಾದ ಅನುಷ್‌, ರಾಕೇಶ್‌ ವಿಶೇಷ ಗಮನ ಸೆಳೆದರು.
 
ಬಾಲಕಿಯರ ಪಂದ್ಯಾಟದಲ್ಲಿ ಹೊಸಪೇಟೆ, ಸಿರ್ಸಿ, ಬಾಗಲಕೋಟೆ, ರಾಯಚೂರು ಬಾಲಕಿಯರು ತೋರಿದ ಚಾಕಚಕ್ಯತೆ ಪ್ರೇಕ್ಷಕರನ್ನು ಮಂತ್ರಮುಗªರನ್ನಾಗಿಸಿತ್ತು. ಜಿಲ್ಲಾ ವಾಲಿಬಾಲ್‌ ಸಂಸ್ಥೆ ಕಾರ್ಯದರ್ಶಿ ಎಂ.ವೆಂಕಟೇಶ್‌, ರೆಫ್ರಿ
ಮಲ್ಲಿಕಾರ್ಜುನ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸತ್ಸಂಗ ಸಮಿತಿ ಅಧ್ಯಕ್ಷ ಲಕ್ಷ್ಮೀಪತಿ, ಜ್ಯೋತಿ ವೃಂದ ಪ್ರತಿವರ್ಷ ವಿಶೇಷ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ. ವಾಲಿಬಾಲ್‌ ಪಂದ್ಯವನ್ನು ಏರ್ಪಡಿಸಿ ಇಲ್ಲಿನ ಯುವ ಪ್ರತಿಭೆಗಳಿಗೆ
ಸದಭಿರುಚಿಯನ್ನು ಹೆಚ್ಚಿಸಿದೆ. ರಾಷ್ಟ್ರೀಯ ವಾಲಿಬಾಲ್‌ ಪಟುಗಳು ಪಟ್ಟಣಕ್ಕೆ ಆಗಮಿಸಿ ವಿಶೇಷ ಪ್ರದರ್ಶನದ ನೀಡುತ್ತಿರುವುದು ಅತ್ಯಂತ ಸಂತೋಷಕರ ಸಂಗತಿ ಎಂದರು.

ಜ್ಯೋತಿ ವೃಂದದ ಅಧ್ಯಕ್ಷ ಸುರೇಶ್‌ ಚಿನಮಳ್ಳಿ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್‌, ಪುರಸಭೆ ಸದಸ್ಯರಾದ ಬದಾಮಿ ಮೃತ್ಯುಂಜಯ, ಹುಳ್ಳಿ ಮಂಜುನಾಥ್‌, ಚೋಳರಾಜ, ಹುಡೇದ್‌ ಗುರುಬಸವರಾಜ, ಭರತ್‌, ಸಂದೀಪ್‌
ಶಿವಮೊಗ್ಗ, ನವೀನ್‌, ಡಾ| ಅಜ್ಜಯ್ಯ, ಡಾ| ವಿಶ್ವನಾಥ ಇನ್ನಿತರರಿದ್ದರು. ಅಶೋಕ ಉಪ್ಪಾರ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next