ಕುಂದಾಪುರ: ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಕುಂದಾಪುರದ ಅನೂಪ್ ಡಿ’ಕೋಸ್ಟಾ ನಾಯಕತ್ವದ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
Advertisement
ಆರಂಭಿಕ ಪಂದ್ಯದಲ್ಲಿ ಹರ್ಯಾಣ ಎದುರು 3-1 ಸೆಟ್‌ನಲ್ಲಿ ಗೆದ್ದ ಕರ್ನಾಟಕ, ಬಳಿಕ ತಮಿಳುನಾಡನ್ನು 3-2 ಅಂತರದಿಂದ ಮಣಿಸಿತು. ಆದರೆ ಪಂಜಾಬ್ ವಿರುದ್ಧ 1-3 ಅಂತರದಿಂದ ಸೋಲನುಭವಿಸಿತು.
ಗುವಾಹಟಿಗೆ ತೆರಳಿರುವ 12 ಮಂದಿಯ ಕರ್ನಾಟಕ ತಂಡದಲ್ಲಿ ಅನೂಪ್ ಜತೆ, ಕೋಟೇಶ್ವರ ಕಟೆರೆಯ ಚಂದನ್ ಆಚಾರ್ಯ, ಭಟ್ಕಳದ ನವೀದ್ ಖಾನ್ ಆಡುತ್ತಿದ್ದಾರೆ.
Related Articles
Advertisement