Advertisement

ತೆರೆದ ಬಾವಿ ನಿರ್ಮಾಣ ಕಾಮಗಾರಿಗೆ ಚಾಲನೆ

02:54 PM Apr 28, 2017 | Team Udayavani |

ಆಳಂದ: ಸರ್ಕಾರದ ಯೋಜನೆಗಳಂತೆ ನಿಗದಿತ ಅವದಿಯಲ್ಲಿ ಕಾಮಗಾರಿಗಳನ್ನು ಕೈಗೊಂಡರೆ ಜನರಿಗೆ ಅನಕೂಲವಾಗುತ್ತದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ ಹೇಳಿದರು. 

Advertisement

ತಾಲೂಕಿನ ಹೊಡಲ್‌ ಗ್ರಾಮದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ತೆರೆದ ಬಾವಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಕೈಗೊಂಡು ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. 

ತೆರೆದ ಬಾವಿ ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಬಾವಿ ನಿರ್ಮಾಣದಿಂದ ಹೊಡಲ್‌, ಜವಳಗಾ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ. ಪೈಪಲೈನ್‌, ವಿದ್ಯುತ್‌ ಸಂಪರ್ಕ ಒದಗಿಸಿ ಗ್ರಾಮದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗುತ್ತದೆ ಎಂದು ಹೇಳಿದರು.

ಗ್ರಾಮದ ಇತರೆ ಸಮಸೆ‌ಗಳಿಗೂ ಬರುವ ದಿನಗಳಲ್ಲಿ ಆದ್ಯತೆ ಅನುಸಾರ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಚಿಂಚನಸೂರ ಜಿಪಂ ಸದಸ್ಯ ಶರಣಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಮತಕ್ಷೇತ್ರದಲ್ಲಿ ಜನರ ನಾಗರಿಕ ಮೂಲಭೂತ ಸಮಸ್ಯೆಗಳಿಗೆ ಶಾಸಕ ರಾಮಕೃಷ್ಣ ಹಲವು ಯೋಜನೆಗಳಲ್ಲಿ ಅನುದಾನ ಮಂಜೂರು ಮಾಡಿಸುವ ಮೂಲಕ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ತಾಪಂ ಸದಸ್ಯ ಗೋರಕನಾಥ ಸಜ್ಜನ, ಕಮಲಾನಗರ ಗ್ರಾಪಂ ಮಾಜಿ ಅಧ್ಯಕ್ಷ ಸಂಜೀವಕುಮಾರ ಶಟ್ಟಿ, ಶ್ರೀಚಂದ ಗ್ರಾಪಂ ಅಧ್ಯಕ್ಷ ಬಸವರಾಜ ವರನಾಳ, ವಿಜಯಕುಮಾರ ರಾಮಕೃಷ್ಣ ಮಾತನಾಡಿದರು. ಪ್ರಮುಖರಾದ ದೀಪಕ ಹೊಡಲ್‌, ಪರಮೇಶ್ವರ ಅಪಚಂದ, ಅಂಬಾರಾಯ ಜವಳಗಿ, ಹಣಮಂತ ಚೂರಿ ಭಾಗವಹಿಸಿದ್ದರು.

Advertisement

ಬಳಿಕ ಶಾಸಕ ಜಿ.ರಾಮಕೃಷ್ಣ ಮುರುಡಿ ಗ್ರಾಮದಲ್ಲಿ ಎಸ್‌ ಇಪಿ ಯೋಜನೆಯಲ್ಲಿ 10 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಶಾಸಕರ ಅನುದಾನದ 4 ಲಕ್ಷ ರೂ.ದಲ್ಲಿ ಮುಸ್ಲಿಂ ಸ್ಮಶಾನ ಭೂಮಿ ಸುತ್ತುಗೋಡೆ ಕಾಮಗಾರಿಗೆ ಚಾಲನೆ ನೀಡಿದರು. ಜಿಪಂ ಸದಸ್ಯ ಶರಣಗೌಡ ಪಾಟೀಲ, ಮುಖಂಡ ವಿಜಯಕುಮಾರ ರಾಮಕೃಷ್ಣ, ಮುನಾವರ ಪಟೇಲ್‌, ಕಲ್ಯಾಣಿ ಮುರಡಿ ಇತರರು ಪಾಲ್ಗೊಂಡಿದರು. 

Advertisement

Udayavani is now on Telegram. Click here to join our channel and stay updated with the latest news.

Next