Advertisement

ಎಂಎನ್‌ಪಿ ಕಾಲುವೆ ಆಧುನೀಕರಣಕ್ಕೆ ಚಾಲನೆ

02:27 PM Jun 07, 2022 | Team Udayavani |

ಮಸ್ಕಿ: ತಾಲೂಕಿನ ಮಾರಲದಿನ್ನಿ ಜಲಾಶಯದ ಎಂಎನ್‌ಪಿ ಕಾಲುವೆಗಳ ಆಧುನೀಕರಣಕ್ಕೆ ಶಾಸಕ ಆರ್‌.ಬಸನಗೌಡ ತುರುವಿಹಾಳ ಸೋಮವಾರ ಚಾಲನೆ ನೀಡಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸ್ಕಿ ನಾಲಾ ಯೋಜನೆ ಜಲಾಶಯವು ಮಸ್ಕಿ ಭಾಗದ ರೈತರ ಪಾಲಿನ ಜೀವನಾಡಿಯಾಗಿದೆ. ಹಲವು ವರ್ಷಗಳಿಂದ ಇಲ್ಲಿನ ಕಾಲುವೆಗಳು ಆಧುನೀಕರಣ ಇಲ್ಲದೇ ಹಾಳಾಗಿದ್ದವು. ಅಚ್ಚುಕಟ್ಟು ಪ್ರದೇಶದ ಕೆಳಭಾಗಕ್ಕೆ ಸಮರ್ಪಕ ನೀರು ತಲುಪದಾಗಿದ್ದವು. ಹೀಗಾಗಿ ಕಾಲುವೆಗಳ ಆಧುನೀಕರಣಕ್ಕೆ 53 ಕೋಟಿ ರೂ. ಮಂಜೂರಾಗಿದ್ದು, ಇಲ್ಲಿನ ಮುಖ್ಯ ಮತ್ತು ವಿತರಣಾ ಕಾಲುವೆಗಳ ಆಧುನೀಕರಣದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ವರದಾನವಾಗಲಿದೆ ಎಂದರು.

ಯೋಜನೆಯ ಆಧುನೀಕರಣ ಕಾಮಗಾರಿ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಈ ಭಾಗದ ರೈತರು ಬಹುದಿನದ ಬೇಡಿಕೆ ಈಡೇರಿದೆ. ಸಣ್ಣ ಜಲಾಶಯವಾದರೂ ಬಲ ಮತ್ತು ಎಡದಂಡೆ ಭಾಗದ ರೈತರ ಜಮೀನುಗಳಿಗೆ ಅನುಕೂಲವಾಗಿದೆ. ಯೋಜನೆ ವ್ಯಾಪ್ತಿಯ ರೈತರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಹಕಾರ ನೀಡಿ ತಮ್ಮದೇ ಕಾಮಗಾರಿ ಎಂಬಂತೆ ಉತ್ತಮ ಕೆಲಸ ಮಾಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರ ಅಮರಗುಂಡಪ್ಪ ಮೇಟಿ, ಆದನಗೌಡ ದಳಪತಿ, ಸಿದ್ದನಗೌಡ ಮಾಟೂರು, ಶ್ರೀಶೈಲಪ್ಪ ಬ್ಯಾಳಿ, ಹನುಮಂತಪ್ಪ ಮುದ್ದಾಪೂರ, ಮೈಬೂಸಾಬ ಮುದ್ದಾಪೂರ, ಮಲ್ಲಪ್ಪ ನಾಗರಬೆಂಚಿ, ಬಸನಗೌಡ ಮಾರಲದಿನ್ನಿ, ಯೋಜನೆಯ ಎಇಇ ಗುರುಮೂರ್ತಿ, ಎಂಜನಿಯರ್‌ ದಾವುದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next